ಮಂಗಳೂರು: ನಗರದ ಬಂದರಿನ ಉದ್ಯಮಿಯೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಪಟಾಕಿ ಅಂಗಡಿ ಮಾಲಕರಿಗೆ ರವಿವಾರ ಸಂಜೆ ಕರೆ ಮಾಡಿದ ವ್ಯಕ್ತಿಯೊಬ್ಬ 5 ಲ.ರೂ. ಮೌಲ್ಯದ ಪಟಾಕಿ ಬೇಕೆಂದು, ಅದಕ್ಕಾಗಿ ನಗರದ ಖಾಸಗಿ ಹೊಟೇಲ್‌ಗೆ ಬರಬೇಕೆಂದು ಬೇಡಿಕೆಯಿಟ್ಟಿದ್ದ.
ಅಲ್ಲಿಗೆ ಬರಲಾಗದು ಎಂದಾಗ ಸೋಮವಾರ ಮಧ್ಯಾಹ್ನ ಉದ್ಯಮಿ ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ದಿನೇಶ್ ಶೆಟ್ಟಿ ಹಾಗೂ ಇತರ 4 ಮಂದಿ ಅಂಗಡಿಗೆ ನುಗ್ಗಿ 5 ಲ.ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಭೂಗತ ಲೋಕದ ಪಾತಕಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ ಎಂದು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಂಕೇಶ್ವರ: ಅಪರಿಚಿತ ವಾಹನ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು