Advertisement

Mangaluru ಜೋಡಿ ತಡೆದ ಘಟನೆ ಪ್ರಕರಣ: ಹಿಂಪಡೆಯಲು ವಿಎಚ್‌ಪಿ ಆಗ್ರಹ

11:31 PM Nov 29, 2023 | Team Udayavani |

ಮಂಗಳೂರು: ನಗರದ ಮಂಕಿಸ್ಟಾಂಡ್‌ ಬಳಿ ಬೈಕ್‌ನಲ್ಲಿ ಜತೆಯಾಗಿ ಹೋಗುತ್ತಿದ್ದ ಭಿನ್ನ ಕೋಮಿನ ಯುವಕ-ಯುವತಿಯನ್ನು ತಡೆದ ಘಟನೆಗೆ ಸಂಬಂಧಿಸಿ ಬಜರಂಗದಳದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದು ಖಂಡನೀಯ. ಕೂಡಲೇ ಈ ಕೇಸುಗಳನ್ನು ಹಿಂಪಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಒತ್ತಾಯಿಸಿದೆ.

Advertisement

ಸ್ಥಳೀಯ ಯುವಕರು ಪೊಲೀಸರಿಗೆ ಮಾಹಿತಿ ನೀಡಿ ಯುವತಿಯನ್ನು ಲವ್‌ ಜೆಹಾದ್‌ನಿಂದ ರಕ್ಷಿಸಿದ್ದಾರೆ. ಆ ಸಂದರ್ಭದಲ್ಲಿ ಯಾವುದೇ ಗಲಭೆ, ಹೊಡೆದಾಟ ನಡೆದಿಲ್ಲ. ಆದರೆ ಪೊಲೀಸರು ವಿನಾಕಾರಣ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ.

ಸರಕಾರ ದ್ವೇಷ ರಾಜಕೀಯಕ್ಕಾಗಿ ಬಜರಂಗದಳ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರ ಮನೋಸ್ಥೈರ್ಯ ಕುಗ್ಗಿಸಲು ಪೊಲೀಸ್‌ ಇಲಾಖೆಯನ್ನು ಉಪಯೋಗಿಸುತ್ತಿದೆ. ಇದು ಹಿಂದೂ ವಿರೋಧಿ ಕೃತ್ಯ ಇದಾಗಿದೆ. ಕೇಸು ಹಿಂಪಡೆಯಬೇಕು. ಹಿಂದೂ ಯುವತಿಯನ್ನು ಲವ್‌ ಜೆಹಾದ್‌ಗೆ ಯತ್ನಿಸಿದವನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಮಂಗಳೂರು ಜಿಲ್ಲಾಧ್ಯಕ್ಷ ಎಚ್‌.ಕೆ.ಪುರುಷೋತ್ತಮ್‌ ಅವರು ಒತ್ತಾಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next