Advertisement

Mangaluru ಕಡಲ್ಕೊರೆತ; ಜಲಸಾರಿಗೆ ಮಂಡಳಿ ಸಿಇಒ ಭೇಟಿ ವೀಕ್ಷಣೆ

01:30 AM Aug 03, 2024 | Team Udayavani |

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಕಡಲ ಕೊರತೆ ಉಂಟಾಗಿರುವ ಪ್ರದೇಶಗಳಿಗೆ ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಜಯರಾಮ್‌ ರಾಯ್‌ಪುರ ಅವರು ಭೇಟಿ ನೀಡಿದರು.

Advertisement

ಉಳ್ಳಾಲ ತಾಲೂಕು ಮೊಗವೀರಪಟ್ಣ, ಬಟ್ಟಪ್ಪಾಡಿ, ಉಚ್ಚಿಲ ಪ್ರದೇಶದ ಸರಪಳಿ ಹಾಗೂ ಸೀಗ್ರೌಂಡ್‌ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮೊಗವೀರಪಟ್ಣ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿ ಬರ್ಮ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಲೆಗಳಿಂದ ಅಬ್ಬರದಿಂದ ತಡೆಗೋಡೆ ಕುಸಿದಿದೆ. ಹೀಗಾಗಿ ಮತ್ತೆ ಅದಷ್ಟು ಬೇಗ ಬರ್ಮ್ಗಳ ಮಧ್ಯೆ ತಡೆಗೋಡೆಯನ್ನು ನಿರ್ಮಾಣ ಮಾಡುವಂತೆ ಸ್ಥಳೀಯರು ಮನವಿ ಸಲ್ಲಿಸಿದರು.

ಸೀಗ್ರೌಂಡ್‌ ಪ್ರದೇಶದಲ್ಲಿ ಉಂಟಾಗುತ್ತಿರುವ ಸಮುದ್ರ ಕೊರೆತವನ್ನು ಪರಿಶೀಲಿಸಿದರು. ಮುಕ್ಕಚ್ಚೇರಿ ಪ್ರದೇಶದಲ್ಲಿ ಎಡಿಬಿ ಯೋಜನೆ ಯಡಿಯಲ್ಲಿ ಟೇಟ್ರಾ ಪೋಡ್‌ಗಳು ಕಾಂಕ್ರೀಟಿನಿಂದ ಮಾಡಿರುವ ತಡೆಗೋಡೆ ಕುಸಿದಿದ್ದು, ಇದನ್ನು ಅದಷ್ಟು ಬೇಗ ಮತ್ತೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದರು.

ಬಟ್ಟಪ್ಪಾಡಿ ಸಮುದ್ರ ಕೊರತೆಯಿಂದ ರಸ್ತೆ ಸಂಪರ್ಕ ಮತ್ತಷ್ಟು ಕಡಿತಗೊಂಡಿದ್ದು, ಹಿಂಭಾಗದ 4-5 ಮನೆಗಳು ಅಪಾಯದ ಅಂಚಿನಲ್ಲಿ ರುವ ಬಗ್ಗೆ ಜಯರಾಮ್‌ ಮಾಹಿತಿ ಪಡೆದುಕೊಂಡರು. ಕಾರವಾರದ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಎಂಜಿನಿಯರ್‌ ಪ್ರಮೀತ್‌ ಬಿ.ಎಸ್‌., ಮಂಗಳೂರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜೇಶ್‌ ಕುಮಾರ್‌ ಎ., ಮನೋಹರ್‌ ಆಚಾರ್ಯ ವಿ.ಕೆ., ಬ್ಲಾಕ್‌ ಬ್ರಿಕ್ಸ್‌ ಸಲಹೆಗಾರ ಸಮೀಪ್‌ ಜೈನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next