Advertisement
ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ರಾಮಕೃಷ್ಣ ಮಿಷನ್‌ನ ಕೈಗೊಂಡ ‘ಸ್ವತ್ಛ ಮಂಗಳೂರು ಅಭಿಯಾನ’ದ ಮುಂದುವರಿದ ಭಾಗವಾಗಿ, ಅಭಿಯಾ ನದ ಸದಸ್ಯರೇ ಹುಟ್ಟಿಹಾಕಿದ ಸಂಸ್ಥೆಯೇ ‘ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆ'(ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆ). 2019ರಲ್ಲಿ ಆರಂಭವಾದ ಈ ಸ್ಟಾರ್ಟ್ ಅಪ್ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಕುರುಕಲು ತಿಂಡಿ, ಬಿಸ್ಕತ್ ಕವರ್ ಮೊದಲಾದವುಗಳನ್ನು ಸೇರಿಸಿ ಸಮಗ್ರ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 219 ಗ್ರಾಮ ಪಂಚಾಯತ್ ವ್ಯಾಪ್ತಿಯ 324 ಗ್ರಾಮಗಳ ಪ್ರತಿ ದಿನ 22 ಟನ್ ಪ್ಲಾಸ್ಟಿಕ್ ಸಹಿತ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ವಾರ್ಷಿಕವಾಗಿ ನಿರ್ವಹಿಸುವ ಕಸದ ಪ್ರಮಾಣ 8,030 ಮೆ.ಟನ್!
Related Articles
ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ ಮನಪಾ ವ್ಯಾಪ್ತಿಯ ಮಂಗಳಾದೇವಿ, ಬೋಳಾರ ಮತ್ತು ಹೊಯ್ಗೆ ಬಜಾರ್ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ತ್ಯಾಜ್ಯ ವಿಂಗಡನೆ ವಿಚಾರವಾಗಿ ಪಾಲಿಕೆಯ ಜತೆ ಕೈ ಜೋಡಿಸಿದೆ. ಟ್ರಸ್ಟ್‌ನ ಪ್ರತಿನಿಧಿಗಳು ನಿರಂತರವಾಗಿ ಮನೆಗಳಿಗೆ ತೆರಳಿ ಮಾಹಿತಿ ನೀಡುವುದು ಮಾತ್ರವಲ್ಲದೆ, ಕಸ ವಿಲೇವಾರಿಗೆ ಮಾಡುವ ಸಿಬಂದಿಯೊಂದಿಗೂ ಸಂಪರ್ಕದಲ್ಲಿದ್ದಾರೆ. ಅಂಬಾ ಮಹೇಶ್ವರಿ ಭಜನ ಮಂದಿರದಲ್ಲೂ ಪ್ರಸಾದವನ್ನು “ಬಟ್ಟೆ ಚೀಲ’ದಲ್ಲಿಯೇ ನೀಡಲಾಗುತ್ತಿದೆ. ‘ಉದಯವಾಣಿ’ಯ ಪ್ಲಾಸ್ಟಿಕ್ ಸರಣಿಗೆ ಪೂರಕವಾಗಿ 350 ಮನೆಗಳಿಗೆ ಸಾಮಾನು ತರಲು ಬೇಕಾದ ದೊಡ್ಡ – ಸಣ್ಣ ಬಟ್ಟೆಯ ಚೀಲ ನೀಡಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಪ್ರಮುಖರು.
Advertisement
ಪ್ಲಾಸ್ಟಿಕ್ ಫಿಶರ್‌ನ ‘ತ್ರ್ಯಾಶ್‌ಬೂಮ್’ರಾಜಕಾಲುವೆಗಳ ನೀರಿನ ಮೂಲಕ ಹರಿದು ನದಿಯ ಮೂಲಕ ಕಡಲು ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ತಡೆದು, ನಿರ್ವಹಿಸುವ ಕಾರ್ಯವನ್ನು ಪ್ಲಾಸ್ಟಿಕ್ ಫಿಶರ್ ಎನ್ನುವ ಸಂಸ್ಥೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಸ್ಥಳೀಯ ಕಚೇರಿ ಹೊಂದಿರುವ ಜರ್ಮನಿ ಮೂಲದ ಈ ಸಂಸ್ಥೆ ಮಹಾನಗರ ಪಾಲಿಕೆಯೊಂದಿಗೆ ಕೈ ಜೋಡಿಸಿದೆ. ಕಳೆದೆರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂಸ್ಥೆ ನಗರದ ಅಳಕೆ, ಪಾಂಡೇಶ್ವರ, ಕೂಳೂರು, ಜಪ್ಪು ಸಹಿತ ವಿವಿಧಡೆ ರಾಜಕಾಲುವೆಗಳಿಗೆ ತ್ರ್ಯಾಶ್‌ಬೂಮ್ ಅಳವಡಿಸಿದೆ. ಹಸಿರು ದಳದಿಂದ ತ್ಯಾಜ್ಯ ನಿರ್ವಹಣೆ
ಮಂಗಳೂರಿನ ಹಸಿರು ದಳ ಎನ್ನುವ ಎನ್‌ಜಿಒ ಸಂಸ್ಥೆ ಸ್ಟೇಟ್‌ಬ್ಯಾಂಕ್ ಇಂಡಿಯಾ ಫೌಂಡೇಶನ್ ನೆರವಿನೊಂದಿಗೆ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಮಂಗಳೂರು ಸುತ್ತಲಿನ ಹರೇಕಳ, ಪಾವೂರು, ಬೋಳಿಯಾರ್, ಗೋಳ್ತಮಜಲು, ಬಾಳ್ತಿಲ, ಪುದು, ತುಂಬೆ, ಅಡ್ಯಾರ್, ನೀರುಮಾರ್ಗ, ಜೋಕಟ್ಟೆ ಗ್ರಾಮಗಳಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನೇ ತೊಡಗಿಸಿಕೊಳ್ಳಲಾಗುತ್ತಿದೆ. ತ್ಯಾಜ್ಯವನ್ನು ಗ್ರಾಮ ಮಟ್ಟದಲ್ಲಿಯೇ ವಿಂಗಡಣೆ ಮಾಡಿ, ಮರುಬಳಕೆಗೆ ಸಾಧ್ಯವಿರುವ ವಸ್ತುಗಳನ್ನು ಮಾರಾಟ ಮಾಡಿ, ಅದರ ಒಂದಂಶವನ್ನು ಅವರಿಗೇ ನೀಡಲಾಗುತ್ತದೆ. ಇದಕ್ಕಾಗಿ ಅವರಿಗೆ ತರಬೇತಿಯನ್ನೂ ನೀಡಲಾಗಿದೆ. ಪ್ಲಾಸ್ಟಿಕ್ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು. ವಾಟ್ಸಪ್: 9900567000 -ಭರತ್ ಶೆಟ್ಟಿಗಾರ್