Advertisement

Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್‌

12:52 AM Sep 30, 2024 | Team Udayavani |

ಮಂಗಳೂರು: ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಂಕಲ್ಪದಿಂದ ಡಾ| ಅಬ್ದುಲ್‌ ಬಶೀರ್‌ ವಿಕೆ ಅವರ ನೇತೃತ್ವದಲ್ಲಿ ನಗರದ ಪಡೀಲ್‌ ಬಳಿ ಆರಂಭಗೊಂಡಿರುವ “ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ ರವಿವಾರ ಉದ್ಘಾಟನೆಗೊಂಡಿತು.

Advertisement

ಆಸ್ಪತ್ರೆ ಉದ್ಘಾಟಿಸಿದ ವಿಧಾನ ಸಭಾದ್ಯಕ್ಷ ಯು.ಟಿ. ಖಾದರ್‌ ಅವರು ಮಾತನಾಡಿ, ವೈದ್ಯಕೀಯ ಚಿಕಿತ್ಸೆ ಹಾಗೂ ಆರೋಗ್ಯದ ಅರಿವು ಮೂಡಿಸುವ ಕೆಲಸಕ್ಕೆ ಜನಪ್ರಿಯ ಆಸ್ಪತ್ರೆ ನಾಂದಿಯಾಗಲಿದೆ. ಡಾ| ಅಬ್ದುಲ್‌ ಬಶೀರ್‌ ಅವರ ಜೀವನ ಮತ್ತು ಸಾಧನೆ ಯುವ ವೈದ್ಯರಿಗೆ ಮಾರ್ಗದರ್ಶನ ನೀಡಲಿದೆ. ಈ ಆಸ್ಪತ್ರೆ ಜನಸೇವೆಯೊಂದಿಗೆ ಬೆಳೆದು ವೈದ್ಯಕೀಯ ಕಾಲೇಜು ಆಗುವ ಜತೆಗೆ ವಿಶ್ವವಿದ್ಯಾನಿಲಯವಾಗಿ ಬೆಳೆಯಲಿ ಎಂದರು.

ಜನಪ್ರಿಯ ತಾಯಿ ಮಕ್ಕಳ ವಿಶೇಷ ವಿಭಾಗ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ್‌ ಪ್ರಕಾಶ್‌ ಪಾಟೀಲ್‌ ಮಾತನಾಡಿ, ಮಂಗಳೂರು ಆರೋಗ್ಯ ಕ್ಷೇತ್ರದ ಕೇಂದ್ರವಾಗಿದೆ. ಅನೇಕ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಿದ್ದರೂ ಜನಪ್ರಿಯ ಆಸ್ಪತ್ರೆ ಆರಂಭಿಸಿರುವ ಹಿಂದಿನ ಉದ್ದೇಶ ಜನತೆಗೆ ಆರೋಗ್ಯ ಸೇವೆ ನೀಡುವುದಾಗಿದ್ದು, ಅದಕ್ಕೆ ಪೂರಕ
ವಾಗಿ ಡಾ| ಅಬ್ದುಲ್‌ ಬಶೀರ್‌ ಅವರ, “ಟ್ರಿಟ್‌ಮೆಂಟ್‌ ಫಸ್ಟ್‌, ಪೇಮೆಂಟ್‌ ನೆಕ್ಸ್‌r’ ಪಾಲಿಸಿ ಗಮನಾರ್ಹವಾಗಿದೆ. ಆಸ್ಪತ್ರೆಯ ಮೂಲಕ ಹೆಚ್ಚಿನ ಜನತೆಗೆ ಉತ್ತಮ ಆರೋಗ್ಯ ಸೇವೆ ಲಭಿಸುವಂತಾಗಲಿ ಎಂದರು.

ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ, ಸಂಸದ ಶ್ರೇಯಸ್‌ ಪಾಟೀಲ್‌, ಮಾಜಿ ಸಚಿವರಾದ ರಮಾನಾಥ ರೈ, ವಿನಯ್‌ ಕುಮಾರ್‌ ಸೊರಕೆ ಶುಭ ಹಾರೈಸಿದರು.

ಕರ್ನಾಟಕ ಅಲೈಡ್‌ ಮತ್ತು ಹೆಲ್ತ್‌ ಕೇರ್‌ ಕೌನ್ಸಿಲ್‌ ಅಧ್ಯಕ್ಷ ಡಾ| ಯು.ಟಿ. ಇಫ್ತಿಕಾರ್‌ ಅಲಿ, ಶಾಸಕ ಅಶೋಕ್‌ ಕುಮಾರ್‌ ರೈ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಶಾಸಕ ಎಪಿಎಂ ಅಶ್ರಫ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ತಾಯಿ ಮಗುವಿಗೆ ‌ ಆರೈಕೆ
ಆಸ್ಪತ್ರೆಯ ಚೇರ್ಮನ್‌ ಡಾ| ಅಬ್ದುಲ್‌ ಬಶೀರ್‌ ವಿ.ಕೆ. ಮಾತನಾಡಿ, ಆಸ್ಪತ್ರೆಯಲ್ಲಿ “ಬರ್ತ್‌ ಆ್ಯಂಡ್‌ ಬ್ಲೂಂ’ ಎಂಬ ತಾಯಿ ಮಕ್ಕಳ ವಿಶೇಷ ವಿಭಾಗವಿದ್ದು, ಇದರಲ್ಲಿ 24 ಗಂಟೆಗಳ ಕಾಲ ಸೇವೆ ಲಭ್ಯವಿರಲಿದೆ ಎಂದರು.

130 ಬೆಡ್‌ಗಳ ಆಸ್ಪತ್ರೆ
ನಿರ್ದೇಶಕ ಡಾ| ನುಮಾನ್‌ ಮಾತನಾಡಿ, ಆಸ್ಪತ್ರೆ 130 ಬೆಡ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆಯ ತಜ್ಞರು ಸಿದ್ಧರಾಗಿದ್ದಾರೆ. ಪರಿಣಿತ ವೈದ್ಯರಿಂದ ದಿನದ 24 ಗಂಟೆ ಸೇವೆಗಳೊಂದಿಗೆ ತುರ್ತು ಚಿಕಿತ್ಸಾ ವಿಭಾಗ ಕಾರ್ಯಚರಿಸಲಿದೆ ಎಂದರು.

ಸರಕಾರಿ, ಖಾಸಗಿ ಸ್ಕೀಂ ವ್ಯವಸ್ಥೆ
ಚಿಕಿತ್ಸೆ ದೊರಯದೆ ಯಾರೂ ತೆರಳಬಾರದು ಎಂಬುವುದು ಸಂಸ್ಥೆಯ ಧ್ಯೇಯವಾಗಿದ್ದು, ತುರ್ತು ಸಂದರ್ಭಗಳಲ್ಲಿ ಗುಣಮಟ್ಟ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಸ್ಪತ್ರೆ ಆರಂಭಿಸಲಾಗಿದೆ. ಬಡ ರೋಗಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಸರಕಾರಿ ಮತ್ತು ಖಾಸಗಿ ಸ್ಕೀಂಗಳು, ಇನ್ಸೂರೆನ್ಸ್‌ಗಳ ಸವಲತ್ತುಗಳನ್ನು ನೀಡಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ| ಕಿರಾಶ್‌ ಪರ್ತಿಪಾಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next