Advertisement
ಕೃಷಿ ಅಭಿವೃದ್ಧಿ ನಿಗಮ ಸ್ಥಾಪನೆ, ಕೊಳೆರೋಗಕ್ಕೆ ಸೂಕ್ತ ಪರಿಹಾರ, ಕಿದು ತೋಟಗಾರಿಕೆ ಸಂಶೋಧನ ಕೇಂದ್ರ ಮರುಸ್ಥಾಪನೆ, ಕೊಣಾಜೆಯಿಂದ ಮಣಿಪಾಲಕ್ಕೆ ಮೆಟ್ರೋ ರೈಲು ಯೋಜನೆ, ಬಿಕರ್ನಕಟ್ಟೆ- ಮೂಡು ಬಿದಿರೆ ಹೆದ್ದಾರಿ ಕಾಮಗಾರಿ ಆರಂಭ, ನಂತೂರು ಜಂಕ್ಷನ್‌ನಲ್ಲಿ ಮೇಲ್ಸೇತುವೆ, ಪುತ್ತೂರು ಸ್ಟೇಷನ್ ತಂಗುವಿಕೆಯ ಲೋಕಲ್ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ವಿಸ್ತರಣೆ, ಮಂಗಳೂರಿನಲ್ಲಿ ಇಎಸ್‌ಐ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಯತ್ನ, ಬೀಡಿ ಕಾರ್ಮಿಕರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ಪರ್ಯಾಯ ಉದ್ಯಮ, ಕಂಬಳ, ಯಕ್ಷಗಾನ, ಜಾನಪದ ಕಲಾವಿದರಿಗೆ ಮಾಸಾಶನ ಜಾರಿಗೆ ತರುವುದಾಗಿ ಹೇಳಿದೆ.
ವಿಜಯ ಬ್ಯಾಂಕ್ ವಿಲೀನ ರದ್ದುಗೊಳಿಸಿ ಮರುಸ್ಥಾಪನೆ ಮಾಡುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
Related Articles
ಪ್ರಣಾಳಿಕೆ ಬಿಡುಗಡೆಗೊಳಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕೇಂದ್ರ ಸರಕಾರದ ಮೂಲಕ ಜಿಲ್ಲೆಗೆ ಮಾಡಲು ಸಾಧ್ಯವಾಗುವಂಥ ಭರವಸೆಗಳನ್ನೇ ನೀಡಿದ್ದೇವೆ. ಇದು ನೈಜ ಪ್ರಣಾಳಿಕೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಜನರು ಗೆಲ್ಲಿಸಿದರೆ ಜನರ ಬಹುಕಾಲದ ಬೇಡಿಕೆಗಳು ಈಡೇರಲಿವೆ ಎಂದಿದ್ದಾರೆ.
Advertisement