Advertisement

Mangaluru: ಕರಾವಳಿ ಉತ್ಸವ; ಅರಣ್ಯ ಅನುಭವ!

03:59 PM Dec 28, 2024 | Team Udayavani |

ಲಾಲ್‌ಬಾಗ್‌: ಕರಾವಳಿ ಉತ್ಸವ ಈ ಬಾರಿ ವಿನೂತನ ಪರಿಕಲ್ಪನೆಯೊಂದಿಗೆ ಗಮನಸೆಳೆಯುತ್ತಿದೆ. ಅದರಲ್ಲಿಯೂ ಅರಣ್ಯ ಇಲಾಖೆಯ ಕೃತಕ ಅರಣ್ಯದ ವೈಭವವಂತೂ ವಿಭಿನ್ನ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ.

Advertisement

ಅರಣ್ಯ ಇಲಾಖೆಯ ವತಿಯಿಂದ ನಿರ್ಮಿಸಲಾದ ಈ ಕೃತಕ ಅರಣ್ಯದೊಳಗೆ ಪ್ರವೇಶವನ್ನು ಗುಹೆಯ ಮಾದರಿಯಲ್ಲಿ ನಿರ್ಮಿಸ ಲಾಗಿದೆ. ಕತ್ತಲಿನ ನಡುವೆ ಗುಹೆ ಯೊಳಗಿನ ಪ್ರವೇಶದ ವೇಳೆ ಪ್ರಾಣಿ ಪಕ್ಷಿಗಳ ಧ್ವನಿ ಕೇಳುವಾಗ ಕಾಡೊಳಗಿನ ಅನುಭವ ನೀಡಲಿದೆ.

ಎತ್ತರದಲ್ಲಿ ಮರದ ಬಿಳಲುಗಳ ನಡುವಿನಿಂದ ಸಾಗುವ ಅನುಭವ ಕಾಂಕ್ರೀಟ್‌ ಕಟ್ಟಡಗಳ ನಡುವೆ ಕಾಡಿನ ಹಿತಾನುಭವವನ್ನು ನೀಡುತ್ತದೆ. ಅಲ್ಲಲ್ಲಿ ಪ್ರಾಣಿಗಳ ಪ್ರತಿಕೃತಿಗಳ ಜತೆಗೆ ಅವುಗಳ ಕೂಗಾಟದ ಶಬ್ದಗಳನ್ನು ಸ್ಪೀಕರ್‌ಗಳ ಮೂಲಕ ಕೇಳುವುದೇ ಆಹ್ಲಾದಕರ. ಕಿರಿದಾದ ಕೃತಕ ಕೊಳ, ಅದರ ಮೇಲಿನಿಂದ ಸೇತುವೆಯ ಮಾದರಿ, ಹತ್ತಿ ಇಳಿದು ಸಾಗುವ ಕಾಡಿನ ದಾರಿಯಲ್ಲಿ ಅರಣ್ಯ ಇಲಾಖೆಯ ಕಾರ್ಯವೈಖರಿಯ ಪರಿಚಯ ನೀಡಲಾಗಿದೆ. ಇದಲ್ಲದೆ, ನೇಜಿ ನೆಡುವ, ಕಂಬಳದ ಪ್ರತಿಕೃತಿಯೂ ಗಮನ ಸೆಳೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next