Advertisement
ನೂತನ ಮೇಯರ್ ದಿವಾಕರ ಪಾಂಡೇಶ್ವರ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಇಂತಹ ಕ್ಲಿಷ್ಟಕರ ಮತ್ತು ವಿಶೇಷ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಅವರು ಯಾವುದೇ ರೀತಿಯಲ್ಲಿ ಎದೆಗುಂದದೆ ಪರಿಸ್ಥಿಯನ್ನು ಸಮರ್ಥವಾಗಿ ಎದುರಿಸಲು ತನ್ನ ತಂಡದೊಂದಿಗೆ ಕಾರ್ಯಾಚರಣೆಗಿಳಿದರು. ಸಂಕಷ್ಟಕ್ಕೀಡಾದವರ ನೆರವಿಗೆ ಮೊದಲ ಪ್ರಾಶಸ್ತ್ಯ ನೀಡಿದ್ದು ಪ್ರತಿ ದಿನ ಹಗಲು ರಾತ್ರಿಯೆನ್ನದೆ ನಗರದಾದ್ಯಂತ ಸುತ್ತಾಡಿ ಜನರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.
ಹಸಿವಿನಿಂದ ಯಾರೂ ಸಂಕಟ ಪಡಬಾರದು ಎಂಬ ಉದ್ದೇಶದಿಂದ ಮೇಯರ್ ಅವರು ವಿವಿಧ ವಾರ್ಡ್ ಗಳಿಗೆ ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್‌ನ್ನು ವಿತರಿಸುತ್ತಿದ್ದಾರೆ. ಅವರು ಪ್ರತಿನಿಧಿಸುವ ಕಂಟೋನ್ಮೆಂಟ್ ವಾರ್ಡ್‌ನಲ್ಲೇ 1,175 ಕಿಟ್‌ಗಳನ್ನು ವಿತರಿಸಿದ್ದಾರೆ.
Related Articles
Advertisement
ರಾಜಕಾಲುವೆಗಳ ಹೂಳೆತ್ತುವಿಕೆಕಳೆದ ಮಳೆಗಾಲದ ಸಂದರ್ಭದಲ್ಲಿ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೆ ಅನೇಕ ಕಡೆ ಕೃತಕ ನೆರೆಯುಂಟಾಗಿ ಸಮಸ್ಯೆಯಾಗಿತ್ತು. ಹಾಗಾಗಿ ಈ ಬಾರಿ ಮಳೆಗಾಲಕ್ಕಿಂತ ಸಾಕಷ್ಟು ಪೂರ್ವದಲ್ಲಿಯೇ ರಾಜಕಾಲುವೆಗಳ ಹೂಳೆತ್ತಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಲಾಗಿದ್ದು ಎಲ್ಲ ವಾರ್ಡ್‌ಗಳಲ್ಲಿಯೂ ಈ ಕಾಮಗಾರಿ ಪ್ರಗತಿಯಲ್ಲಿದೆ. ಆಸ್ಪತ್ರೆಗೆ ಕುಡಿಯುವ ನೀರಿನ ವ್ಯವಸ್ಥೆ
ವೆನ್‌ಲಾಕ್‌ನ ಕೋವಿಡ್ ಆಸ್ಪತ್ರೆಗೆ ಕುಡಿಯುವ ನೀರಿನ ವ್ಯವಸ್ಥೆಯ ಕೊರತೆ ಇತ್ತು. ಈ ಬಗ್ಗೆ ಮಾಹಿತಿ ಪಡೆದ ಮೇಯರ್ ಅವರು, ಕೂಡಲೇ ಆಸ್ಪತ್ರೆಗೆ 75,000 ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ರೋಗಿ, ದಾದಿಯರಿಗೆ ನಿತ್ಯ ಹಣ್ಣು ಹಂಪಲು
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮತ್ತು ಅವರನ್ನು ಆರೈಕೆ ಮಾಡುತ್ತಿರುವ ನರ್ಸ್‌ಗಳಿಗೆ ಪ್ರತಿದಿನವೂ ಹಣ್ಣು ಹಂಪಲುಗಳನ್ನು ಮೇಯರ್ ಅವರ ವತಿಯಿಂದಲೇ ನೀಡಲಾಗುತ್ತಿದೆ. ಕಾರ್ಮಿಕರಿಗೆ ನೆರವು
ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆ, ರಾಜ್ಯಗಳಿಗೆ ತೆರಳುತ್ತಿರುವ ಕಾರ್ಮಿಕರಿಗೆ ಪಾಲಿಕೆ ವತಿಯಿಂದಲೂ ಸಹಾಯ ಒದಗಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರದ ಮೂಲಕ ನೆರವು ನೀಡಲಾಗುತ್ತಿದೆ. ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಿಕೊಡುವ ಕೆಲಸದಲ್ಲಿ ಪಾಲಿಕೆ ಅಧಿಕಾರಿ, ಸಿಬಂದಿ ಕೈ ಜೋಡಿಸಿದ್ದಾರೆ. ಇದರ ಬಗ್ಗೆಯೂ ಮೇಯರ್ ಅವರು ಇತರ ಜನಪ್ರತಿನಿಧಿಗಳ ಜತೆ ನಿಗಾ ವಹಿಸುತ್ತಿದ್ದಾರೆ. ಮಲೇರಿಯಾ, ಡೆಂಗ್ಯೂ ಮುನ್ನೆಚ್ಚರಿಕೆ
ಕಳೆದ ಬಾರಿ ಮಲೇರಿಯಾ, ಡೆಂಗ್ಯೂ ಹಾವಳಿ ಉಂಟಾಗಿತ್ತು. ಈ ಬಾರಿ ಅಂತಹ ಸ್ಥಿತಿ ಉಂಟಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸ್ಪ್ರೇ, ಫಾಗಿಂಗ್, ಜಾಗೃತಿ ಕೆಲಸಗಳು ನಡೆಯುತ್ತಿವೆ. ಆಸ್ಪತ್ರೆಗಳಿಗೆ ಭೇಟಿ
ಕೋವಿಡ್ ವಾರಿಯರ್ಸ್ ಗೆ ನೆರವು, ಪ್ರೋತ್ಸಾಹ ನೀಡುವ ಜತೆಗೆ ಕೋವಿಡ್ ತಡೆ, ನಿರ್ವಹಣಾ ಕೆಲಸಗಳನ್ನು ಪರಿಶೀಲಿಸಲು ಫಸ್ಟ್ ನ್ಯೂರೋ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಕೋವಿಡ್ ಸಂಕಷ್ಟದ ಈ ವೇಳೆಯಲ್ಲಿ ಪಾಲಿಕೆ ಹೇಗೆ ಕಾರ್ಯನಿರ್ವಹಿಸುತ್ತಿದೆ?
ನಾನು ಮತ್ತು ನಮ್ಮ ಅಧಿಕಾರಿಗಳ ತಂಡ ನಿರಂತರವಾಗಿ ಕ್ರಿಯಾಶೀಲರಾಗಿದ್ದೇವೆ. ಸರಕಾರದ ನಿರ್ದೇಶನ, ಜಿಲ್ಲಾಡಳಿತದ ಸಹಕಾರದೊಂದಿಗೆ ಪಾಲಿಕೆ ವತಿಯಿಂದಲೂ ವಿವಿಧ ರೀತಿಯ ಕೆಲಸಗಳು ನಡೆಯುತ್ತಿವೆ. ನಾನು ಖುದ್ದಾಗಿ ನಗರದಾದ್ಯಂತ ಸಂಚರಿಸಿ ಪರಿಶೀಲನೆ ನಡೆಸುತ್ತಿದ್ದೇನೆ. ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಸ್ಪಂದಿಸುವ ಜತೆಗೆ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಪಾಲಿಕೆಯ ಅಧಿಕಾರಿಗಳು ಕೂಡ ಕೋವಿಡ್ ನಿಯಂತ್ರಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರಂತೆ ಪಾಲಿಕೆಯ ಎಂಪಿಡಬ್ಲ್ಯೂ ಕಾರ್ಯಕರ್ತೆಯರು ಮನೆ ಮನೆಗಳಿಗೆ ತೆರಳಿ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಅಂತರ ಪಾಲನೆಯಾಗದಿದ್ದರೆ ಅಂಗಡಿ ಮಾಲಕರು ಅಥವ ಸಂಬಂಧಪಟ್ಟ ವ್ಯಕ್ತಿಗಳಿಗೆ ದಂಡ ವಿಧಿಸಲು ಸೂಚನೆ ನೀಡಿದ್ದೇವೆ. ಯಾವ ರೀತಿ ನೆರವಾಗುತ್ತಿದ್ದೀರಿ?
ಪ್ರತಿಯೊಂದು ವಾರ್ಡ್‌ಗೂ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಕೋವಿಡ್ ವಾರಿಯರ್ ಗಳಿಗೆ ಪಾಲಿಕೆ ಬೆಂಗಾವಲಾಗಿ ನಿಂತಿದೆ. ಸಂಕಷ್ಟದಲ್ಲಿರವವರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸುತ್ತಿದ್ದೇವೆ. ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಮಳೆಗಾಲ ಸಿದ್ಧತೆ ಹೇಗಿದೆ?
ಒಂದೆಡೆ ಕೋವಿಡ್ ನಿಯಂತ್ರಣ, ಜನರ ಸಂಕಷ್ಟಕ್ಕೆ ಸ್ಪಂದನೆಯ ಕೆಲಸ, ಇನ್ನೊಂದೆಡೆ ಮಳೆಗಾಲಕ್ಕೆ ನಗರವನ್ನು ಸಿದ್ಧಗೊಳಿಸಬೇಕಾದ ಜವಾಬ್ದಾರಿ ಎರಡನ್ನೂ ಕೂಡ ನಿಭಾಯಿಸಿ ಕೊಂಡು ಹೋಗುತ್ತಿದ್ದೇನೆ. ನೆರೆ ಹಾವಳಿ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರಮುಖ ತೋಡುಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತಾಗಲು ಸಿದ್ಧಗೊಳಿಸಲಾಗುತ್ತಿದೆ. ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಗಮನ ನೀಡಿದ್ದೀರಾ?
ಕೋವಿಡ್ ಜತೆಗೆ ನಗರದಲ್ಲಿ ಮಲೇರಿಯಾ, ಡೆಂಗ್ಯೂಗಳ ಆತಂಕ ಸಹಜ. ಕಳೆದ ಬಾರಿ ಮಲೇರಿಯಾ, ಡೆಂಗ್ಯೂ ಹೆಚ್ಚು ಬಾಧಿಸಿತ್ತು. ಈ ಬಾರಿ ಅದು ಪುನರಾವರ್ತನೆಯಾಗದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕುಡಿಯುವ ನೀರು ಸರಬರಾಜು ಸ್ಥಿತಿಗತಿ ಬಗ್ಗೆ…
ಕಳೆದ ಬಾರಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿ ರೇಷನಿಂಗ್ ಮಾಡಬೇಕಾಗಿ ಬಂತು. ಆದರೆ ಈ ಬಾರಿ ಅಂತಹ ಸ್ಥಿತಿ ಇಲ್ಲ. ಆದಾಗ್ಯೂ ಕುಡಿಯುವ ನೀರಿನ ಲಭ್ಯತೆ, ಪೂರೈಕೆಯ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತಿದೆ. ಡ್ಯಾಂಗೆ ಭೇಟಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿ ಅವಲೋಕಿಸಲಾಗುತ್ತಿದೆ.
ವಿಶೇಷ ಎಚ್ಚರಿಕೆ ವಹಿಸಿ
ಕೋವಿಡ್ ಜತೆಗೆ ಮಲೇರಿಯಾ, ಡೆಂಗ್ಯೂನಂತಹ ಕಾಯಿಲೆಗಳಿಂದಲೂ ನಮ್ಮ ನಗರ ಮುಕ್ತವಾಗಬೇಕು. ಅದಕ್ಕಾಗಿ ಸಮಸ್ತ ನಾಗರಿಕರ ಸಹಕಾರ ಅಗತ್ಯ. ಪ್ರತಿಯೋರ್ವರು ತಮ್ಮ ಮನೆ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳನ್ನು ಕೂಡ ಸ್ವಚ್ಛವಾಗಿರಿಸಬೇಕು. ಅಪಾಯದ ಪರಿಸರಗಳಿರುವುದು ಗಮನಕ್ಕೆ ಬಂದರೆ ಪಾಲಿಕೆಗೆ ತಿಳಿಸಬೇಕು. – ಯಾವುದೇ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ – ವಾರದಲ್ಲಿ 2 ಬಾರಿಯಾದರೂ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ. – ಜ್ವರದ ಲಕ್ಷಣವಿದ್ದರೆ ವೈದ್ಯರ ಸಲಹೆ, ಭೇಟಿ ಮಾಡಿ. – ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಮೊದಲಾದವುಗಳನ್ನು ಬಳಸಬೇಕು.
ಪರಸ್ಪರ ನೆರವಾಗೋಣ
ಕೋವಿಡ್ ಸೋಂಕು ತಡೆಗಟ್ಟಲು ಪ್ರತಿಯೋರ್ವ ನಾಗರಿಕರು ಕೂಡ ಜಾಗರೂಕತೆ ವಹಿಸುವುದು ಅಗತ್ಯ. ಸರಕಾರದ ನಿಯಮಗಳನ್ನು ಪಾಲಿಸಬೇಕು. ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು. ಸದ್ಯ ಕೋವಿಡ್ ಮುಕ್ತ ನಗರವನ್ನಾಗಿ ಮಾಡಬೇಕು. ಜಾಗೃತಿ ನಿರಂತರವಾಗಿರಬೇಕು. ತೀರಾ ಅಗತ್ಯದ ಸಂದರ್ಭ ಹೊರತುಪಡಿಸಿ ಮನೆಯಲ್ಲಿಯೇ ಇರುವುದು ಸುರಕ್ಷಿತ. ಕೋವಿಡ್‌ನೊಂದಿಗೆ ಹೋರಾಡುತ್ತಿರುವ ವೈದ್ಯಕೀಯ ಸಿಬಂದಿ ಸೇರಿದಂತೆ ಕೊರನಾ ವಾರಿಯರ್ಗಳಿಗೆ ಬೆಂಬಲವಾಗಿ ನಿಲ್ಲೋಣ. ಕೋವಿಡ್ ವಿರುದ್ಧ ಗೆಲುವು ಸಾಧಿಸಿ ಸುರಕ್ಷಿತ ಬದುಕಿನಿಂದಿಗೆ ಅಭಿವೃದ್ಧಿಯತ್ತ ಸಾಗೋಣ. ಹಲವು ವರ್ಷಗಳ ಬೇಡಿಕೆಯಾಗಿದ್ದ ಪ್ರಮುಖ ಕಾಮಗಾರಿ ಅತ್ತಾವರ 5ನೇ ಅಡ್ಡರಸ್ತೆ ಸಮೀಪದ ರಾಜಕಾಲುವೆಗೆ ದಂಡೆ ಕಟ್ಟುವ ಕೆಲಸ ಲಾಕ್‌ಡೌನ್‌ಗಿಂತ ಮೊದಲು ಆರಂಭಗೊಂಡಿತ್ತು. ಆದರೆ ಲಾಕ್‌ಡೌನ್ ವೇಳೆ ನಿಂತು ಹೋಯಿತು. ಆದರೆ ಮೇಯರ್ ಅವರು ವಿಶೇಷ ಮುತುವರ್ಜಿ ವಹಿಸಿ ಈ ಕಾಮಗಾರಿ ಮತ್ತೆ ಪುನರಾರಂಭಗೊಳಿಸಿ ಈಗ ಪೂರ್ಣಗೊಂಡಿದೆ. ಶಾಸಕ ವೇದವ್ಯಾಸ ಕಾಮತ್ ಅವರು 50 ಲ.ರೂ ಅನುದಾನ ಒದಗಿಸಿದ್ದರು. ಮೇಯರ್ ಅವರು ಹೆಚ್ಚಿನ ಕಾಳಜಿ ವಹಿಸಿ ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತೆ ಮಾಡಿದರು. ಇದು ತುಂಬಾ ಅಗತ್ಯದ ಕಾಮಗಾರಿಯಾಗಿತ್ತು. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿಯೂ ಈ ಭಾಗದ ಜನರ ಆವಶ್ಯಕತೆ ಪೂರೈಸಿಕೊಡುವ ಕೆಲಸವನ್ನು ಮೇಯರ್ ಮಾಡಿದ್ದಾರೆ. ಅತ್ತಾವರ 5ನೇ ಅಡ್ಡರಸ್ತೆ ಪರಿಸರದಲ್ಲಿ ಪ್ರತಿ ಮನೆಗೂ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಿ ನೆರವಾಗಿದ್ದಾರೆ.
– ಸದಾಶಿವ ಗುಂಡಿಬೈಲು, ಅತ್ತಾವರ ನಾಗರಿಕರ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಹಣ್ಣು ಹಂಪಲು ನೀಡಿರುವುದರಿಂದ ರೋಗಿಗಳಿಗೆ ಅನುಕೂಲವಾಗಿದೆ. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸಿಕೊಟ್ಟಿರುವುದರಿಂದ ತುಂಬಾ ಸಹಾಯವಾಗಿದೆ. ರೋಗಿಗಳಿಗೆ ನೀಡುವ ನೀರು ಹೆಚ್ಚು ಪರಿಶುದ್ಧವಾಗಿರಬೇಕು. ಇಲ್ಲವಾದರೆ ಅದರಿಂದಲೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆಸ್ಪತ್ರೆಯ ಬೇಡಿಕೆಗಳಿಗೆ ಮೇಯರ್ ಅವರು ತುರ್ತಾಗಿ ಸ್ಪಂದಿಸಿರುವುದು ಸಂತಸ ತಂದಿದೆ. ಈ ರೀತಿಯ ಸ್ಪಂದನೆ ಕೋವಿಡ್ ವಾರಿಯರ್ ಮತ್ತಷ್ಟು ಹುರುಪಿನಿಂದ ಸೇವೆ ಸಲ್ಲಿಸಲು ಕೂಡ ಕಾರಣವಾಗುತ್ತದೆ.
– ಡಾ| ಶಿವಪ್ರಕಾಶ್, ಸರ್ಜನ್, ವೆನ್ಲಾಕ್ ಆಸ್ಪತ್ರೆ ನಾನು ಅಧ್ಯಾಪಕಿಯಾಗಿರುವ ಗಣಪತಿ ಶಾಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಕೆಲವು ಮಕ್ಕಳು ಕೂಡ ಕಲಿಯುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಆರಂಭದ ದಿನಗಳಲ್ಲಿ ಅವರಿಗೆ ಊಟ, ತಿಂಡಿಗೆ ಭಾರೀ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂತು. ಇದರಲ್ಲಿ ತುಂಬಾ ಕಷ್ಟದಲ್ಲಿರುವ 10 ಮಂದಿ ಮಕ್ಕಳನ್ನು ಗುರುತಿಸಿದೆ. ಅವರಿಗೆ ಏನಾದರೂ ನೆರವು ನೀಡಲು ಸಾಧ್ಯವೆ ಎಂದು ಮೇಯರ್ ದಿವಾಕರ್ ಅವರಲ್ಲಿ ಮನವಿ ಮಾಡಿಕೊಂಡೆ. ಮರು ದಿನವೇ ಶಾಲೆಯ ಬಳಿಗೆ ಅಗತ್ಯ ಸಾಮಗ್ರಿಗಳ ಕಿಟ್‌ನೊಂದಿಗೆ ಮೇಯರ್ ಆಗಮಿಸಿದ್ದರು. ಅವರು ಕಷ್ಟ ಕಾಲದಲ್ಲಿ ತುರ್ತಾಗಿ ಸ್ಪಂದಿಸಿದ ರೀತಿ ಅನನ್ಯ. ಇಂತಹ ಜನಪ್ರತಿನಿಧಿಗಳು ಎಲ್ಲಾ ಕಡೆ ಇರಬೇಕು.
– ನಮಿತಾ ಟೀಚರ್, ಅತ್ತಾವರ ಮೇಯರ್ ಆದ ಹೊಸದರಲ್ಲೇ ಅವರು ಇಂತಹ ಅಪರೂಪದ ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಅವರು ಮೇಯರ್ ಆಗಿ ಕುರ್ಚಿಯಲ್ಲಿ ಕುಳಿತು ಆಡಳಿತ ಮಾಡುವ ಸ್ಥಿತಿ ಈಗ ಇಲ್ಲ. ಹಾಗಾಗಿ ಅವರು ಬೀದಿ ಬೀದಿ ಸುತ್ತಿ ಅಸಾಹಯಕರು, ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಮನೆ ಮನೆಗಳಿಗೆ ತೆರಳಿ ಸಹಾಯ ಮಾಡುತ್ತಿರುವ ಅನ್ನದಾತ ಅವರು. ಅವರಲ್ಲಿ ಬಾಲ್ಯದಿಂದಲೂ ಛಲ, ಸೇವಾ ಮನೋಭಾವ ಕಾಣುತ್ತಿದ್ದೇನೆ. ರಾತ್ರಿ ಹಗಲೆನ್ನದೆ ಸೇವೆ ಸಲ್ಲಿಸುತ್ತಿರುವ ಮೇಯರ್ ಇತರರಿಗೆ ಮಾದರಿ. ಒಮ್ಮೆ ಏನಾದರೂ ಕೆಲಸ ಮಾಡಿಕೊಡಲು ನಾವು ಹೇಳಿದರೆ ಅನಂತರ ಛಲ ಬಿಡದೆ ಮಾಡಿಕೊಡುತ್ತಾರೆ.
– ಮನ್ಸೂರ್ ಅಹಮ್ಮದ್ ಆಜಾದ್, ಅಧ್ಯಕ್ಷರು,ಸ್ಟೀಲ್ ಟ್ರೇಡರ್ ಅಸೋಸಿಯೇಷನ್, ಮಂಗಳೂರು ಮತ್ತು ಉಡುಪಿ