Advertisement

Mangaluru ಸೆಂಟ್ರಲ್‌ ರೈಲ್ವೇ ನಿಲ್ದಾಣ: ನ. 25ರ ವರೆಗೆ ಮೆಗಾ ಟ್ರಾಫಿಕ್‌, ಪವರ್‌ ಬ್ಲಾಕ್‌

10:48 PM Nov 19, 2023 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ 4 ಮತ್ತು 5ನೇ ಪ್ಲಾಟ್‌ಫಾರ್ಮ್ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ಪ್ರಸ್ತುತ ದಕ್ಷಿಣ ರೈಲ್ವೇಯಿಂದ ನೂತನ ಹಳಿಗಳ ಸಿಗ್ನಲ್‌, ಟೆಲಿಕಮ್ಯುನಿಕೇಶನ್‌ ಸಿಸ್ಟಮ್‌ಗಳನ್ನು ಜೋಡಿಸುವ ಕೆಲಸಗಳು, ಹಾಗೂ ಇತರ ಕಾಮಗಾರಿ ನಡೆಯುತ್ತಿದೆ.

Advertisement

ಈ ಕಾಮಗಾರಿ ಹಿನ್ನೆಲೆಯಲ್ಲಿ ನ. 25ರ ವರೆಗೆ ಮೆಗಾ ಟ್ರಾಫಿಕ್‌ ಮತ್ತು ಪವರ್‌ ಬ್ಲಾಕ್‌ ಮಾಡಲು ನಿರ್ಧರಿಸಲಾಗಿದೆ. ರಾತ್ರಿ 10ರಿಂದ ಮುಂಜಾನೆ 5ರ ವರೆಗೆ ಬ್ಲಾಕ್‌ ಮಾಡಲಾಗುತ್ತದೆ. ನ. 24 ಮತ್ತು 25ರಂದು ಕೆಲವು ರೈಲುಗಳು ರದ್ದಾಗಲಿದ್ದು, ಕೆಲವು ರೈಲು ಸಮಯದನ್ನು ಮರು ನಿಗದಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ನ. 06602 ಮಂಗಳೂರು ಸೆಂಟ್ರಲ್‌- ಮಡಗಾಂವ್‌ ಜಂಕ್ಷನ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ನ. 21 ಮತ್ತು 22ರಂದು ಮುಂಜಾನೆ 5.30ರ ಬದಲು ಅರ್ಧ ಗಂಟೆ ತಡವಾಗಿ 6ಕ್ಕೆ ಹೊರಡಲಿದೆ.

ನ. 24ರಂದು 10107 ಮಡಗಾಂವ್‌ ಜಂಕ್ಷನ್‌ -ಮಂಗಳೂರು ಸೆಂಟ್ರಲ್‌ ಮೆಮು ರೈಲು ತೋಕೂರು ಮತ್ತು ಮಂಗಳೂರು ಸೆಂಟ್ರಲ್‌, 10108 ಮಂಗಳೂರು ಸೆಂಟ್ರಲ್‌-ಮಡಗಾಂವ್‌ ಜಂಕ್ಷನ್‌ ರೈಲು ಮಂಗಳೂರು ಸೆಂಟ್ರಲ್‌-ಮಂಗಳೂರು ಸೆಂಟ್ರಲ್‌ ನಡುವೆ ಭಾಗಶಃ ರದ್ದಾಗಲಿದೆ. ನ. 06602 ಮಂಗಳೂರು ಸೆಂಟ್ರಲ್‌- ಮಡಗಾಂವ್‌ ಜಂಕ್ಷನ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಮುಂಜಾನೆ 5.30ರ ಬದಲು 6 ಗಂಟೆಗೆ ಹೊರಡಲಿದೆ.

ನ. 24, 25ರಂದು 06487 ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು, 06486 ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್‌, 06485 ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು, 06484 ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್‌ ರೈಲುಗಳು ಸಂಪೂರ್ಣ ರದ್ದಾಗಲಿದೆ.

Advertisement

ನ. 24ರಂದು 22683 ಮಂಗಳೂರು ಸೆಂಟ್ರಲ್‌-ಎಂಜಿಆರ್‌ ಚೆನ್ನೈ ಸೆಂಟ್ರಲ್‌ ರೈಲು ಮಂಗಳೂರು ಸೆಂಟ್ರಲ್‌ ಬದಲಾಗಿ ರಾತ್ರಿ 11.45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. 06601 ಮಡಗಾಂವ್‌ ಜಂಕ್ಷನ್‌ ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರು ಜಂಕ್ಷನ್‌ನಲ್ಲಿ ತಡೆ ಹಿಡಿಯಲಾಗುತ್ತದೆ. 16610 ಮಂಗಳೂರು ಸೆಂಟ್ರಲ್‌- ಕಲ್ಲಿಕೋಟೆ ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 5.15ಕ್ಕೆ ಹೊರಡಲಿದೆ.

16649 ಮಂಗಳೂರು ಸೆಂಟ್ರಲ್‌ ನಾಗರಕೊಲ್‌ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 5.05ರ ಬದಲಾಗಿ 30 ನಿಮಿಷ ತಡವಾಗಿ ಸಂಚರಿಸಲಿದೆ. ನ. 06602 ಮಂಗಳೂರು ಸೆಂಟ್ರಲ್‌- ಮಡಗಾಂವ್‌ ಜಂಕ್ಷನ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು 30 ನಿಮಿಷ ತಡವಾಗಿ ಬೆಳಗ್ಗೆ 6 ಗಂಟೆಗೆ ಹೊಡಲಿದೆ.

ನಂ.22637 ಎಂಜಿಆರ್‌ ಚೆನ್ನೈ ಸೆಂಟ್ರಲ್‌ -ಮಂಗಳೂರು ಸೆಂಟ್ರಲ್‌ ರೈಲನ್ನು 30 ನಿಮಿಷ ತಡೆ ಹಿಡಿಯಲಾಗುತ್ತದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next