ಮಂಗಳೂರು : ಸೆಂಟ್ರಲ್ ರೈಲು ನಿಲ್ದಾಣದ ಕೋಚಿಂಗ್ ಡಿಪೊದಲ್ಲಿ ನೂತನ ಪಿಟ್ ಲೈನ್ ಅನ್ನು ದಕ್ಷಿಣ ರೈಲ್ವೇ ಮಹಾಪ್ರಬಂಧಕ ಬಿ.ಜಿ. ಮಲ್ಯ ಬುಧವಾರ ಉದ್ಘಾಟಿಸಿದರು. ಬಳಿಕ ನೂತನ ಪ್ಲಾಟ್‌ಫಾರ್ಮ್ ನಂ. 4 ಮತ್ತು 5ರ ಕಾಮಗಾರಿ, ಕ್ಯಾರೇಜ್ ಮತ್ತು ವ್ಯಾಗನ್ ಡಿಪೊ ಕೆಲಸಗಳನ್ನು ಪರಿಶೀಲಿಸಿದರು.
ಪ್ರಧಾನ ಮುಖ್ಯ ಎಂಜಿನಿಯರ್ ದೇಶ್ ರತನ್ ಗುಪ್ತ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಗೌತಮ್ ದತ್ತ, ಪಾಲಕ್ಕಾಡ್ ವಿಭಾಗೀಯ ರೈಲ್ವೇ ಪ್ರಬಂಧಕ ತ್ರಿಲೋಕ್ ಕೊಠಾರಿ ಹಾಜರಿದ್ದರು.
6.76 ಕೋಟಿ ರೂ. ವೆಚ್ಚದಲ್ಲಿ ಹೊಸ ಪಿಟ್ ಲೈನ್ ನಿರ್ಮಿಸಲಾಗಿದೆ, ಇದು 24 ಬೋಗಿಗಳ ನಿರ್ವಹಣ ಸಾಮರ್ಥ್ಯ ಹೊಂದಿದ್ದು ಹಳೆಯ 18 ಕೋಚ್ ಸಾಮರ್ಥ್ಯದ ಪಿಟ್‌ಲೆçನನ್ನು ತೆರವುಗೊಳಿಸಿ ಹೊಸ ನಂ. 4 ಮತ್ತು 5ನೇ ಪ್ಲಾಟ್‌ಫಾರ್ಮ್ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು.
ಕೋಚ್ ಕ್ಲೀನಿಂಗ್, ಕೋಚ್ ಚಾರ್ಜಿಂಗ್, ನೀರು ಭರ್ತಿಗೊಳಿಸುವುದು ಇತ್ಯಾದಿ ಕೆಲಸಗಳೊಂದಿಗೆ ಎಂದಿನ ನಿರ್ವಹಣೆ, ಪರಿಶೀಲನೆಗೆ ಈ ಹೊಸ ಪಿಟ್‌ಲೆçನ್ ನೆರವಾಗಲಿದೆ.
ಪ್ರತೀ ಪ್ರಯಾಣಿಕ ರೈಲಿನ ಟ್ರಿಪ್ ಪೂರ್ಣಗೊಂಡ ಬಳಿಕ ಪ್ರಾಥಮಿಕ ಬೋಗಿ ನಿರ್ವಹಣೆಗೆ ಪಿಟ್‌ಲೆçನ್ ಅತ್ಯಗತ್ಯವಾಗಿದೆ. ಪ್ರತೀ ಪ್ರಯಾಣದ ಬಳಿಕ ಬೋಗಿಗಳ ತಳದಲ್ಲಿನ ತಪಾಸಣೆ, ಬ್ರೇಕ್ ಪರಿಶೀಲನೆ, ಎಲೆಕ್ಟ್ರಿಕಲ್ ನಿರ್ವಹಣೆ, ಸ್ವತ್ಛತೆ, ಹೊರ ಭಾಗ ಮತ್ತು ಒಳಭಾಗದ ತೊಳೆಯುವಿಕೆ, ಕೋಚ್‌ಗಳಿಗೆ ನೀರು ತುಂಬಿಸುವಂತಹ ಪ್ರಮುಖ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ : ಉಡುಪಿಯ ಹೆದ್ದಾರಿಯಲ್ಲಿ 30 ಬ್ಲಾಕ್ ಸ್ಪಾಟ್ : ಅಪಘಾತವಾದರೆ ಅಧಿಕಾರಿಗಳೇ ಹೊಣೆ