ಮಂಗಳೂರು : ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಪಣಂಬೂರು, ಕಸಬಾ ಬೆಂಗರೆ ನಿವಾಸಿಯಾದ ಮೊಹಮ್ಮದ್ ಸಿನಾನ್(19), ಕಸಬಾ ಬೆಂಗರೆ ನಿವಾಸಿ ಮೊಹಮ್ಮದ್ ಸಾಹಿಲ್(22), ಉಳ್ಳಾಲ ನಿವಾಸಿಯಾದ ಫೈಜಲ್ (35) ಹಾಗೂ ಪಡುಬಿದ್ರಿ ಕಂಚಿನಡ್ಕ ನಿವಾಸಿ ಮೊಹಮ್ಮದ್ ಸಾಹಿಲ್(18) ಎನ್ನಲಾಗಿದೆ.
ಬಂಧಿತರಿಂದ 2,15,000 ಮೌಲ್ಯದ 6 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳು ಮಂಗಳೂರು ನಗರದ ಗೂಡ್ಸ್ ಶೆಡ್ ಪರಿಸರದಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದ್ದು ಈ ಕುರಿತು ಮಂಗಳೂರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಹಾಗೂ ವಶಪಡಿಸಿಕೊಂಡ ವಾಹನಗಳನ್ನು ಮುಂದಿನ ಕ್ರಮಕ್ಕೆ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿಯವರಾದ ಪಿ ಎ ಹೆಗ್ಡೆ, ಇನ್ಸ್ ಫೆಕ್ಟರ್ ಶ್ಯಾಮ್ ಸುಂದರ್ ಹೆಚ್. ಎಂ, ಪಿಎಸೈ ಸುದೀಪ್, ಶರಣಪ್ಪ ಭಂಡಾರಿ, ಎಎಸೈ ಮೋಹನ್ ಕೆ.ವಿ ಹಾಗೂ ಸಿಸಿಬಿ ಸಿಬಂದಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಸಾಕುನಾಯಿ ಸೇರಿದಂತೆ ತನ್ನ ಇಡೀ ಕುಟುಂಬವನ್ನೇ ರಿವಾಲ್ವರ್‌ನಿಂದ ಗುಂಡಿಕ್ಕಿ ಹತ್ಯೆಗೈದ ಎಎಸ್‌ಐ