Advertisement

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

08:47 AM Nov 20, 2024 | Team Udayavani |

ಮಹಾನಗರ: ಕಾರುಗಳಲ್ಲಿ ಹಠಾತ್‌ ಬೆಂಕಿ ಕಾಣಿಸಿಕೊಳ್ಳುವ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದ್ದು ಆತಂಕ ಮೂಡಿಸಿವೆ. ಇಂತಹ ಘಟನೆಗಳಿಗೆ ಕಾರಿನ ನಿರ್ವಹಣೆಯಲ್ಲಿನ ನಿರ್ಲಕ್ಷ್ಯವೇ ಮುಖ್ಯ ಕಾರಣವೆನ್ನುವುದು ಮೆಕ್ಯಾನಿಕ್‌ಗಳ ಅಭಿಮತ.

Advertisement

ಕಾರುಗಳಲ್ಲಿ ಶಾರ್ಟ್‌ಸರ್ಕ್ನೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿಯೇ ಇಡೀ ಕಾರು ಹೊತ್ತಿ ಉರಿಯುತ್ತದೆ. ಕಳೆದ ಕೆಲವೇ ದಿನಗಳ ಅಂತರದಲ್ಲಿ ಮಂಗಳೂರು ನಗರ ಹಾಗೂ ಹೊರವಲಯದ ವಿವಿಧೆಡೆ ಒಟ್ಟು 5 ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಈ ಪೈಕಿ ಒಂದು ಕಾರಿನಲ್ಲಿ ಸಂಚರಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡರೆ, ಉಳಿದ ಮೂರು ಕಾರುಗಳು ಸಂಚರಿಸಿದ ಬಳಿಕ ನಿಲ್ಲಿಸಿದ ಕೆಲವೇ ಸಮಯದಲ್ಲಿ ಹೊತ್ತಿ ಉರಿದಿವೆ. ಎರಡು ವರ್ಷಗಳ ಹಿಂದೆ ಕೂಡ ಮಂಗಳೂರು ನಗರ ಸಹಿತ ಹಲವೆಡೆ ಇಂತಹ ಘಟನೆಗಳು ಸಂಭವಿಸಿದ್ದವು.

ಕಾರಣಗಳೇನು?
ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಿನ ಯಾವುದಾ ದರೊಂದು ಭಾಗದಲ್ಲಿ ಉಂಟಾಗುವ ಶಾರ್ಟ್‌ಸರ್ಕ್ನೂಟ್‌ ಕಾರಣ. ಪೆಟ್ರೋಲ್‌, ಡೀಸೆಲ್‌ನ ಪೈಪ್‌ ಭಾಗದಲ್ಲಿ (ಫ್ಯುಯೆಲ್‌ ಲೈನ್‌) ಸಮರ್ಪಕವಾಗಿ ನಿರ್ವಹಣೆ ಇಲ್ಲದಿದ್ದರೆ, ಬ್ಯಾಟರಿ ಸಹಿತ ಕರೆಂಟ್‌ ಸಂಪರ್ಕದಲ್ಲಿನ ದೋಷದಿಂದ ಇಂತಹ ಅಪಾಯ ಹೆಚ್ಚು. ಹೈ ಪ್ರಸರ್‌ ಹೋಸಸ್‌ಗಳನ್ನು ಅಳವಡಿಸಿರುವುದಿಲ್ಲ. ಕರೆಂಟ್‌ ಸ್ಪಾರ್ಕ್‌ ಆಗುವಲ್ಲಿ ಫ್ಯುಯೆಲ್‌ ಲೈನ್‌ ಸಂಪರ್ಕವಾದರೆ ಬೆಂಕಿ ಅವಘಡ ಸಂಭವಿಸುತ್ತದೆ. ಬ್ಯಾಟರಿ ಭಾಗದ ಕನೆಕ್ಷನ್‌ ಕೇಬಲ್‌ನಲ್ಲಿ ದೋಷವಿದ್ದರೆ ಆಗಲೂ ಸ್ಪಾರ್ಕ್‌ ಆಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಇಲಿಗಳು ವೈರ್‌ಗಳನ್ನು, ರಬ್ಬರ್‌ ಹೋಸಸ್‌ಗಳನ್ನು ತುಂಡು ಮಾಡಿರುತ್ತವೆ. ಇದು ಗಮನಕ್ಕೆ ಬಂದಿರುವುದಿಲ್ಲ. ಇಂತಹ ಲೋಪಗಳ ಜತೆಗೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಿದ್ದಾಗ ಶಾರ್ಟ್‌ಸರ್ಕ್ನೂಟ್‌ನಂತಹ ಅವಘಡಗಳ ಸಾಧ್ಯತೆ ಅಧಿಕ. ಕೆಲವೊಮ್ಮೆ ದುಬಾರಿ ಕಾರುಗಳಿಗೆ ಕೂಡ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಜೋಡಣೆ ಮಾಡಲಾಗುತ್ತದೆ. ಇದು ಕೂಡ ಅವಘಡಗಳಿಗೆ ಕಾರಣವಾಗುತ್ತದೆ. ಬೇರಿಂಗ್‌ ಸೀಜ್‌ ಆಗಿದ್ದರೆ, ಬ್ರೇಕ್‌ ಜಾಮ್‌ ಆಗಿ ಸಂಚರಿಸುತ್ತಿದ್ದರೆ ಆಗ ಕೂಡ ಸ್ಪಾರ್ಕ್‌ ಆಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಮಂಗಳೂರಿನ ಮೆಕ್ಯಾನಿಕ್‌ ಪುರುಷೋತ್ತಮ ಕಮಿಲ ಅವರು.

ಮುನ್ನೆಚ್ಚರಿಕೆ ಕ್ರಮ
- ವಾಹನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸದಿರಿ.
- ಫ‌ುಯೆಲ್‌ ಲೈನ್‌, ಕರೆಂಟ್‌ ಕೋಡ್‌ ವೈರ್‌, ಬ್ಯಾಟರಿ ಕನೆಕ್ಷನ್‌ಗಳು, ಕರೆಂಟ್‌ ಇಗ್ನಿàಷನ್‌ ಸಿಸ್ಟಂ ಗರಿಷ್ಠ ಸುರಕ್ಷಿತವಾಗಿರಲಿ.
80,000 ಕಿ.ಮೀ. ಸಂಚರಿಸಿದಾಗ ಫ್ಯುಯೆಲ್‌ ಲೈನ್‌ ಕಡ್ಡಾಯವಾಗಿ ಬದಲಾಯಿಸಿ.
- ದುರಸ್ತಿಗೆ ಕೊಟ್ಟಾಗ ತರಾತುರಿಯಲ್ಲಿ ವಾಪಸ್‌ ತರದೆ ಸಂಪೂರ್ಣ ತಪಾಸಣೆಗೊಳಪಡಿಸಿ.
- ಗ್ಯಾರೇಜ್‌ನವರು, ಸರ್ವಿಸ್‌ ಸೆಂಟರ್‌ನವರು ಕೂಡ ಯಾವುದೇ ನಿರ್ಲಕ್ಷ್ಯ ತೋರದೆ ಸೇವೆ ಒದಗಿಸಿ.
- ಹೊಸ ಕಾರುಗಳಲ್ಲಿ ಕಂಡುಬರುವ ಯಾವುದೇ ಸೂಚನೆಗಳನ್ನು (ಮಾಲ್‌ ಫ‌ಂಕ್ಷನ್‌ ಲೈಟ್‌) ನಿರ್ಲಕ್ಷಿಸಬಾರದು.
- ಬೆಂಕಿ ಅವಘಡ ನಡೆಯುವ ಪೂರ್ವದಲ್ಲಿ ಸುಟ್ಟವಾಸನೆ ಅಥವಾ ಬೇರೆ ಯಾವುದೇ ಅನುಮಾನಸ್ಪದ ಬದಲಾವಣೆಗಳು ಗಮನಕ್ಕೆ ಬಂದರೆ ಕೂಡಲೇ ಕಾರಿನಿಂದ ಇಳಿದು ಪೂರ್ಣ ತಪಾಸಣೆ ನಡೆಸಿ ಸುರಕ್ಷೆ ಖಚಿತ ಪಡಿಸಿ.
- ಕಾರು ಮಾರಾಟ ಕಂಪೆನಿಗಳು ಕೂಡ ಸಮರ್ಪಕವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಿ.

ಇತ್ತೀಚಿನ ಅವಘಡಗಳು
– ಸೆ. 5ರಂದು ರಾಷ್ಟ್ರೀಯ ಹೆದ್ದಾರಿ-66ರ ಸುರತ್ಕಲ್‌ ಎನ್‌ಐಟಿಕೆ ಎದುರು ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಬೆಂಕಿಗಾಹುತಿಯಾಗಿತ್ತು. ಕಾರಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು.
– ಸೆ. 28ರಂದು ಅಡ್ಯಾರ್‌ನಲ್ಲಿ ರಸ್ತೆ ಬದಿ ನಿಲ್ಲಿಸಿದ ಕೆಲವೇ ಹೊತ್ತಿನಲ್ಲಿ ಬಿಎಂಡಬ್ಲ್ಯು ಕಾರು ಬೆಂಕಿಗಾಹುತಿಯಾಗಿತ್ತು.
– ನ. 10ರಂದು ಲೇಡಿಹಿಲ್‌ನ ಪೆಟ್ರೋಲ್‌ ಪಂಪ್‌ನಲ್ಲಿ ಪೆಟ್ರೋಲ್‌ ತುಂಬಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮಾರುತಿ- 800 ಕಾರು ಬೆಂಕಿಗಾಹುತಿಯಾಗಿತ್ತು.
– ನ. 15ರಂದು ಕದ್ರಿಯಲ್ಲಿ ರಸ್ತೆ ಬದಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣದಲ್ಲೇ ಬೆಂಕಿಗಾಹುತಿಯಾಗಿತ್ತು.
– ನ. 19ರಂದು ಸುರತ್ಕಲ್‌ನಲ್ಲಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿಯಾಗಿದೆ.

Advertisement

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next