Advertisement
ತಲಪಾಡಿಯ ಸೆಕೆಂಡ್ ಸೇಲ್ ಮಳಿಗೆಯಿಂದ ರಿಟ್ಜ್ ಕಾರನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಕದ್ರಿ ಪೊಲೀಸ್ ಠಾಣೆಯ ಮುಂಭಾಗ ನಿಲ್ಲಿಸಿ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಕಾರನ್ನು ಸ್ಟಾರ್ಟ್ ಮಾಡಿದ್ದಾರೆ. ಆಗ ಕಾರಿನ ಮುಂಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದವರು ಕೂಡಲೇ ಕಾರಿನಿಂದ ಹೊರಗೆ ಬಂದಿದ್ದಾರೆ. ನೋಡ-ನೋಡುತ್ತಿದ್ದಂತೆಯೇ ಬೆಂಕಿ ಇಡೀ ಕಾರನ್ನು ಆವರಿಸಿತ್ತು. ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿ, ಸಿಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚಣೆ ನಡೆಸಿ ಬೆಂಕಿ ನಂದಿಸಿದರು.
ಕಳೆದೈದು ದಿನಗಳಲ್ಲೇ ಇದು 2ನೇ ಘಟನೆಯಾಗಿದೆ. ಕಳೆದ ರವಿವಾರ ನಗರದ ಲೇಡಿಹಿಲ್ನ ಪೆಟ್ರೋಲ್ ಬಂಕ್ನಲ್ಲಿ ಮಾರುತಿ 800 ಕಾರು ಬೆಂಕಿಗಾಹುತಿಯಾಗಿತ್ತು. ಅದರಲ್ಲಿದ್ದವರು ಕೆಳಗಿಳಿದು ಪಾರಾಗಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ಐಟಿಕೆ ಬಳಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಬೆಂಕಿಗಾಹುತಿಯಾಗಿತ್ತು. ಅನಂತರ ಅಡ್ಯಾರ್ನಲ್ಲಿಯೂ ಬಿಎಂಡಬ್ಲ್ಯು ಕಾರು ಬೆಂಕಿಗಾಹುತಿಯಾಗಿತ್ತು.