Advertisement
ಕೇರಳದ ಮಹಮ್ಮದ್ ಶಾಮಿಲ್ (24) ಬಂಧಿತ ಆರೋಪಿ. ಜೂ.15ರಂದು ಸಂಜೆ ಪೊಲೀಸರು ರೌಂಡ್ಸ್ ಕರ್ತವ್ಯ ದಲ್ಲಿದ್ದಾಗ ಹಂಪನಕಟ್ಟೆ ಬಳಿ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದ ಶಾಮಿಲ್‌ನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಮಣಿಪಾಲ: ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಶೀಲ್ (20), ರೆನಜೋ ಎಸ್. ಚಂದ್ರಗಿರಿ (20), ಅಭಿನವ ಸುರೇಶ್ (20), ಶ್ರೀಹರಿ (19), ಅಭಿಜಿತ್ (20) ಆರೋಪಿಗಳು. ಫಾರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.