Advertisement

Mangaluru ಬಸ್‌ಗೆ ಕಲ್ಲು ತೂರಾಟ ಪ್ರಕರಣ: ಆರೋಪಿಗಳ ಬಿಡುಗಡೆ ಸಲ್ಲದು: ಬಿಜೆಪಿ

12:12 AM Aug 20, 2024 | Team Udayavani |

ಮಂಗಳೂರು: ಬಸ್‌ಗೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಘಟನೆಯನ್ನು ಪೊಲೀಸರು ಸಣ್ಣ ಪ್ರಕರಣವೆಂದು ಪರಿಗಣಿಸಿ ಆರೋಪಿ ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ದೂರಿದೆ.ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿದ ಶಾಸಕರಾದ ಡಾ| ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಮೇಯರ್‌ ಸುಧೀರ್‌ ಶೆಟ್ಟಿ ಮತ್ತಿತರರು ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Advertisement

ಪ್ರತಿಭಟನೆ ಸಭೆಯಲ್ಲಿ ದಂಗೆ ಎಬ್ಬಿಸಲು ಕಾರ್ಯಕರ್ತರನ್ನು ಉದ್ರೇಕಿಸಿರುವ ಐವನ್‌ ಡಿ’ ಸೋಜಾಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಲಾಯಿತು.

ಐವನ್‌ರನ್ನು ಬಂಧಿಸಿ:ಕಾಮತ್‌
ಐವನ್‌ ಡಿ’ ಸೋಜಾ ಅವರು ದಲಿತ ಸಮುದಾ ಯಕ್ಕೆ ಸೇರಿದ ರಾಜ್ಯಪಾಲರಿಗೆ ಅಗೌರವ ತೋರಿ ದ್ದಾರೆ. ಬಾಂಗ್ಲಾ ರೀತಿಯಲ್ಲಿ ದಂಗೆ ಏಳುತ್ತೇವೆ ಎಂದು ಹಿಂದೂಗಳನ್ನು ಅವಮಾನಿಸಿದ್ದಾರೆ. ಹಿಂಬಾಗಿಲ ಮೂಲಕ ಅಧಿಕಾರ ಪಡೆದ ಅವ ರಿಗೆ ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ ಎಂದು ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿದ್ದಾರೆ.

ಪ್ರತಿಭಟನೆ ವೇಳೆ ಕೆಲವರು ಬಸ್‌ಗೆ ಕಲ್ಲು ಎಸೆದಿರುವುದು ಅಕ್ಷಮ್ಯ. ಮಹಿಳೆಯೊಬ್ಬರು ಗಾಯಗೊಂಡಿ ದ್ದು, ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನವೇ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸರು ಎಲ್ಲ ಆರೋಪಿಗಳನ್ನು ಇದೇ ರೀತಿ ನಡೆಸಿಕೊಳ್ಳುತ್ತಾರೋ ಎಂದು ಶಾಸಕ ಅವರು ಪ್ರಶ್ನಿಸಿದರು.ನಗರದಲ್ಲಿ ಪ್ರತಿಭಟನೆ ವೇಳೆ ಈ ರೀತಿ ಎಂದೂ ಆಗಿರಲಿಲ್ಲ ಎಂದರು.

ರಾಷ್ಟ್ರದ್ರೋಹ : ಭರತ್‌ ಶೆಟ್ಟಿ
ಸಿದ್ದರಾಮಯ್ಯ ಅವರಿಂದ ಸಿಕ್ಕ ವಿಧಾನಪರಿಷತ್‌ ಸದಸ್ಯ ಸ್ಥಾನದ ಋಣ ತೀರಿಸಲು ರಾಜ್ಯದಲ್ಲಿ ದಂಗೆ ಎಬ್ಬಿಸುವ ಮಾತುಗಳನ್ನು ಐವನ್‌ ಆಡಿದ್ದಾರೆ. ರಾಜ್ಯದಲ್ಲಿ ಬಾಂಗ್ಲಾ ಮಾದರಿಯ ದಾಂಧಲೆ, ಗಲಭೆಗೆ ಕಾಂಗ್ರೆಸ್‌ ಸಂಚು ಮಾಡಿದೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ಆರೋಪಿಸಿದ್ದಾರೆ.

Advertisement

ದಲಿತರಾದ ರಾಜ್ಯಪಾಲರನ್ನು ನಿಂದಿಸಿದ ಐವನ್‌ ಅವರ ವಿರುದ್ದ ದಲಿತ ನಿಂದನೆ ಹಾಗೂ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next