Advertisement

Mangaluru”ಬೊಳ್ಳಿಮಲೆತ ಶಿವಶಕ್ತಿಲು’ ಪ್ರದರ್ಶನಕ್ಕೆ ಚಾಲನೆ

11:36 PM Aug 27, 2023 | Team Udayavani |

ಮಂಗಳೂರು: ಉರ್ವ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬ ಮಂದಿರದ ಮುಖ್ಯಸ್ಥೆ ಲಾವಣ್ಯಾ ವಿಶ್ವಾಸ್‌ಕುಮಾರ್‌ದಾಸ್‌ ನಿರ್ದೇಶನದ, ಸಾಯಿಶಕ್ತಿ ಕಲಾ ಬಳಗದ ಶ್ರೀ ದೇವಿ ಭಗವತಿ ಪರಿವಾರದ ಪುರಾಣ ಪುಣ್ಯ ಕಥೆ ಹೊಂದಿರುವ “ಬೊಳ್ಳಿಮಲೆತ ಶಿವಶಕ್ತಿಲು’ ತುಳು ಪೌರಾಣಿಕ ನಾಟಕದ ಪ್ರಾಯೋಗಿಕ ಪ್ರದರ್ಶನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ರವಿವಾರ ನಡೆಯಿತು.

Advertisement

ಅವಧೂತ ಶ್ರೀ ವಿನಯ ಗುರೂಜಿ ಆಶೀರ್ವಚನ ನೀಡಿ, ಯಾವುದೇ ಕಲೆ ಬೆಳೆಯಲು ಪ್ರೋತ್ಸಾಹ ಅಗತ್ಯ. ಅಧ್ಯಾತ್ಮಕ್ಕೆ ಹೊರಗಿನ ವೇಷಭೂಷಣದ ಬದಲಾಗಿ ಮನೋಖುಷಿ ಅಗತ್ಯ. ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಕಲಾವಿದರನ್ನು ಕೈಬಿಟ್ಟಿಲ್ಲ. ಪೌರಾಣಿಕ ನಾಟಕಗಳನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, “ಬೊಳ್ಳಿಮಲೆತ ಶಿವಶಕ್ತಿಲು’ ಪೌರಾಣಿಕ ನಾಟಕ ದೇಶ-ವಿದೇಶಗಳಲ್ಲಿ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.

ಮಾಜಿ ಶಾಸಕ ಜೆ.ಆರ್‌. ಲೋಬೊ ಮಾತನಾಡಿ, ಶಿರಡಿ ಸಾಯಿಬಾಬಾ ಅಂದು ಇಡೀ ಸಮಾಜಕ್ಕೆ ದಾರಿ ದೀಪವಾಗಿದ್ದವರು. ಭಗವಂತನ ಶಕ್ತಿ ಏನೆಂದು ಅರ್ಥ ಮಾಡಿಕೊಳ್ಳಲು ಈ ರೀತಿಯ ಪೌರಾಣಿಕ ನಾಟಕ ನೋಡಬೇಕು. ಅದರಲ್ಲಿ ಒಳಗೊಂಡಿರುವ ಶಿಕ್ಷಣವನ್ನು ಆತ್ಮದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು. ನಾಟಕ ರಚನೆಕಾರ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದು, ಕೇರಳದ ತೃಶ್ಶೂರ್‌ನ ಕಲಾವಿದರು ನಾಟಕದ ರಂಗವೇದಿಕೆ ಸಿದ್ಧಗೊಳಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಈ ಪೌರಾಣಿಕ ನಾಟಕ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಸಮ್ಮಾನ
ಕಲಾ ಕ್ಷೇತ್ರದ ಸಾಧಕರಾದ ಪಟ್ಲ ಸತೀಶ್‌ ಶೆಟ್ಟಿ, ಭೋಜರಾಜ್‌ ವಾಮಂಜೂರು, ಬಿ.ಎಸ್‌. ಕಾರಂತ್‌ ಇಂಚರ, ಡಾ| ಪ್ರಿಯಾ ಹರೀಶ್‌, ಅಶೋಕ್‌ ಕ್ರಾಸ್ತಾ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಕಿ ಅಹಲ್ಯಾ ಅವರಿಗೆ ಗುರುವಂದನೆ ನೀಡಲಾಯಿತು.

Advertisement

ರಂಗನಿರ್ದೇಶಕ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ಮುಂಬಯಿ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಶಿರಡಿ ಶ್ರೀ ಸಾಯಿ ಮಂದಿರದ ಮುಖ್ಯಸ್ಥ ವಿಶ್ವಾಸ್‌ಕುಮಾರ್‌ದಾಸ್‌, ಲಾವಣ್ಯ ವಿಶ್ವಾಸ್‌ ದಾಸ್‌ ಮುಖ್ಯ ಅತಿಥಿಗಳಾಗಿದ್ದರು.

“ಬೊಳ್ಳಿಮಲೆತ ಶಿವಶಕ್ತಿಲು’ ನಾಟಕವನ್ನು ನವನೀತ ಶೆಟ್ಟಿ ಕದ್ರಿ ರಚಿಸಿದ್ದು ಶಿರಿಡಿ ಸಾಯಿ ಮಂದಿರದ ಮುಖ್ಯಸ್ಥ ವಿಶ್ವಾಸ್‌ದಾಸ್‌ ನಿರ್ಮಾಣ, ಲಾವಣ್ಯ ವಿಶ್ವಾಸ್‌ ದಾಸ್‌ ನಿರ್ದೇಶನ, ಬಿ.ಎಸ್‌. ಕಾರಂತ ಸಂಗೀತ, ಲಲಿತ ಕಲಾ ಆರ್ಟ್ಸ್ ವೇಷಭೂಷಣ, ಪಟ್ಲ ಸತೀಶ್‌ ಶೆಟ್ಟಿ, ಲಾವಣ್ಯ ಸುಧಾಕರ್‌ ಹಿನ್ನೆಲೆ ಗಾಯನ, ದಿವ್ಯಜ್ಯೋತಿ ಸೌಂಡ್ಸ್‌ ಧ್ವನಿ, ತಸ್ಮಯ್‌ ಕೊಡಿಯಾಲ್‌ಬೈಲ್‌ ಬೆಳಕು ನಿರ್ವಹಣೆ, ದನಿಶ್‌ ಕುಮಾರ್‌ದಾಸ್‌ ತಾಂತ್ರಿಕ ನಿರ್ವಹಣೆ ನೀಡಿದ್ದಾರೆ.

ವಿಶ್ವಾಸ್‌ ಕುಮಾರ್‌ದಾಸ್‌, ಸ್ವಾಗತಿಸಿ, ಲಾವಣ್ಯಾ ವಿಶ್ವಾಸ್‌ದಾಸ್‌ ವಂದಿಸಿದರು. ಪ್ರಿಯಾ ಹರೀಶ್‌ ಮತ್ತು ರೋಹಿತ್‌ ಉಳ್ಳಾಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next