Advertisement

Mangaluru ಬೋಳಾಸ್‌ ಹಡಗಿಗೆ ಬಂದರಿನಲ್ಲಿ ಸ್ವಾಗತ

01:09 AM Aug 26, 2023 | Team Udayavani |

ಮಂಗಳೂರು: ಕೃಷಿ ಉತ್ಪನ್ನ ಸಂಸ್ಕರಣೆಯಲ್ಲಿ ಖ್ಯಾತ ಬೋಳಾಸ್‌ ಸಂಸ್ಥೆಯ ಮೊದಲ ಬ್ರೇಕ್‌ ಬಲ್ಕ್ ಹಡಗನ್ನು (ಎಂ.ವಿ.ಕೋರ್‌ಬೆಸ್ಟ್‌ ಒಎಲ್‌) ನವಮಂಗಳೂರು ಬಂದರಿನಲ್ಲಿ ಸ್ವಾಗತಿಸಲಾಯಿತು. ಈ ಹಡಗಿನಲ್ಲಿ ಆಫ್ರಿಕಾದ ಗಿನಿ ಬಿಸಾವ್‌ ದೇಶದಿಂದ ಸುಮಾರು 8,200 ಮೆಟ್ರಿಕ್‌ ಟನ್‌ಗಳಷ್ಟು ಕಚ್ಚಾ ಗೇರು ಬೀಜವನ್ನು ಆಮದು ಮಾಡಲಾಗಿದೆ.

Advertisement

ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ವೆಂಕಟರಮಣ ಅಕ್ಕರಾಜು ಮತ್ತು ಉಪಾಧ್ಯಕ್ಷ ಕೆ.ಜಿ.ನಾಥ್‌ ಅವರು ಹಡಗಿಗೆ ಹಸುರು ನಿಶಾನೆ ತೋರಿಸಿದರು. ಈ ಸಂದರ್ಭ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಗೋಪಿನಾಥ್‌ ಕಾಮತ್‌, ಮಂಗಳೂರು ಕಸ್ಟಮ್ಸ್‌ನ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಹಡಗಿನ ಕಸ್ಟಮ್ಸ್‌ ಕ್ಲಿಯರೆನ್ಸನ್ನು ಕಾರ್ಗೋ ಲಿಂಕ್ಸ್‌ನವರು ಮಾಡಿದರು. ಸ್ಟಿವ್‌ಡೋರಿಂಗ್‌ ಕಾರ್ಯವನ್ನು ಇಟಿಎ ಲಾಜಿಸ್ಟಿಕ್ಸ್‌ನವರು ನಿರ್ವಹಿಸಿದರು.

ಸಂಸ್ಥೆಯ ನಿರ್ದೇಶಕ ಬೋಳ ರಾಹುಲ್‌ ಕಾಮತ್‌ ಈ ವೇಳೆ ಮಾತನಾಡಿ, ನಾವು ನವಮಂಗಳೂರು ಬಂದರು ಪ್ರಾಧಿಕಾರಕ್ಕೆ, ಕಸ್ಟಮ್ಸ್‌ ಅಧಿಕಾರಿಗಳಿಗೆ ಋಣಿಯಾಗಿದ್ದೇವೆ. ಕಚ್ಚಾ ಗೇರುಬೀಜವನ್ನು ಬ್ರೇಕ್‌ ಬಲ್ಕ್ ಹಡಗಿನಲ್ಲಿ ತರುವ ಮೂಲಕ ಸಾಗಾಟ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಇದರಿಂದ ನಮ್ಮ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ಪನ್ನಗಳನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಬೋಳಾಸ್‌ ಸಂಸ್ಥೆಯು ತನ್ನ ಮೊದಲ ಗೋಡಂಬಿ ಸಂಸ್ಕರಣ ಘಟಕವನ್ನು 1958ರಲ್ಲಿ ಆರಂಭಿಸುವುದರೊಂದಿಗೆ ಸರಕು ವ್ಯಾಪಾರಕ್ಕೆ ಕಾಲಿಟ್ಟಿತು. 2012ರಲ್ಲಿ ಗೋಡಂಬಿ ಸಂಸ್ಕರಣೆಯ ಜತೆ ಜತೆಗೆ ಬಾದಾಮಿ ಮತ್ತು ಇತರ ಒಣಹಣ್ಣುಗಳ ಸಂಸ್ಕರಣೆಯನ್ನು ಮಾಡುವುದರೊಂದಿಗೆ, ಗೋಡಂಬಿ ವ್ಯವಹಾರವನ್ನು ವಿಸ್ತರಿಸುತ್ತ ಬಲಗೊಳಿಸಿತು.

Advertisement

2020ರಲ್ಲಿ “ಬೋಳಾಸ್‌’ ಮಳಿಗೆ ಗಳನ್ನು ತೆರೆಯುವುದರೊಂದಿಗೆ ಉತ್ಕೃಷ್ಟ ಗುಣಮಟ್ಟದ ಪೋಷಕಾಂಶಯುಕ್ತ ಡ್ರೈಫ್ರೂಟ್ಸ್‌ ಗಳನ್ನು ಪೂರೈಸಲಾರಂಭಿಸಿತು. ಕಳೆದ ಕೆಲವು ವರ್ಷಗಳಿಂದ ಮಂಗಳೂರು, ಮೈಸೂರು, ಹುಬ್ಬಳ್ಳಿ,ಚಿಕ್ಕಮಗಳೂರು, ಉಡುಪಿ, ಕುಂದಾಪುರ, ಕಾರವಾರ, ತುಮಕೂರು, ಶಿವಮೊಗ್ಗ ಸಹಿತ ರಾಜ್ಯದ ವಿವಿಧೆಡೆ ತನ್ನ ಹೆಜ್ಜೆ ಗುರುತನ್ನು ಮೂಡಿಸಿದೆ. ರಿಟೈಲ್‌ ಮತ್ತು ಇ-ಕಾಮರ್ಸ್‌ನ ಮೂಲಕ ತನ್ನ 100ಕ್ಕೂ ಅಧಿಕ ಉತ್ಪನ್ನಗಳನ್ನು ಸುಲಭವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.ಚಿಟlಚs.cಟ.ಜಿn ನೋಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next