ಮುಂಬೈ: ಪ್ರಸಕ್ತ ಸಾಲಿನ ‘ಲಿವಾ ಮಿಸ್ ದಿವಾ ಯುನಿವರ್ಸ್ 2020’ ಕಿರೀಟವು ಮಂಗಳೂರಿನ ಬೆಡಗಿ ಎಡ್ಲಿನ್ ಕ್ಯಾಸ್ಟೆಲೀನೋ ಅವರ ಮುಡಿಗೇರಿದೆ. ಮುಂಬೈನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಕ್ಯಾಸ್ಟೆಲೀನೋ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು, ಅವರಿಗೆ ಹಿಂದಿನ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್ ಕಿರೀಟ ತೊಡಿಸಿದರು.
ಕ್ಯಾಸ್ಟೆಲೀನೋ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ‘ಮಿಸ್ ಯುನಿವರ್ಸ್’ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಎರಡನೇ ಸ್ಥಾನ ಗಳಿಸಿದ ಜಬಲ್ಪುರದ ಆವೃತಿ ಚೌಧರಿ ಅವರು ‘ಮಿಸ್ ದಿವಾ ಸುಪ್ರನ್ಯಾಷನಲ್’ ಹಾಗೂ ಪುಣೆಯ ನೇಹಾ ಜೈಸ್ವಾಲ್ ಅವರು ‘ಮಿಸ್ ದಿವಾ ರನ್ನರ್-ಅಪ್’ ಕಿರೀಟಕ್ಕೆ ಭಾಜನರಾಗಿದ್ದಾರೆ. ಈ ಪೈಕಿ ಆವೃತಿ ಅವರು ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಲಿವಾ ಮಿಸ್ ದಿವಾ ಯುನಿವರ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಮಾಜಿ ಭುವನ ಸುಂದರಿ, ಬಾಲಿವುಡ್ ನಟಿ ಲಾರಾ ದತ್ತಾ, ಆಶಾ ಭಟ್, ವಿನ್ಯಾಸಗಾರರಾದ ಶಿವನ್ ಭಾಟಿಯಾ, ನರೇಶ್ ಕುಕ್ರೇಜಾ ಮತ್ತು ನಿಖೀಲ್ ಮೆಹ್ರಾ ಮತ್ತು ನಟರಾದ ಯಮಿ ಗೌತಮ್, ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಭಾಗವಹಿಸಿದ್ದರು.