Advertisement

ಮಂಗಳೂರು: ನಿಷೇಧಿತ ಮಾದಕ ದ್ರವ್ಯ ಮಾರಾಟ ಯತ್ನ- ಆರೋಪಿಗಳ ಬಂಧನ

06:39 PM Sep 20, 2019 | Naveen |

ಮಂಗಳೂರು: ನಿಷೇಧಿತ ಮಾದಕ ದ್ರವ್ಯ ಮಾರಾಟ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಆರೋಪಿಗಳನ್ನು ವಿಶೇಷ ಅಪರಾಧ ಪತ್ತೆ ದಳ ಮತ್ತು ಸುರತ್ಕಲ್ ಪೊಲೀಸರ ಜಂಟಿ ಕಾರ್ಯಚರಣೆ ಮೂಲಕ ಬಂಧಿಸಿದ್ದಾರೆ.

Advertisement

ಸುರತ್ಕಲ್ ನ ಕೃಷ್ಣಾಪುರದ .ಮಹಮ್ಮದ್ ಮುಜಾಮಿಲ್ (40) ಹಾಗೂ ಮೊಹಮ್ಮದ್ ಶರಿಫ್ ಸಿದ್ದಿಕ್ (40) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಗುರುವಾರದಂದು ಸುರತ್ಕಲ್ ನ ಲೈಟ್ ಹೌಸ್ ಬಳಿ ಇರುವ ಗೆಸ್ಟ್ ಹೌಸ್ ಒಂದರ ಸಮೀಪದ ಸಮುದ್ರ ಕಿನಾರೆಯ ಸಾರ್ವಜನಿಕ ರಸ್ತೆಯ ಬದಿ ತಮ್ಮ ಬಿಳಿ ಬಣ್ಣದ ಕಾರಿನಲ್ಲಿ ಎಮ್.ಡಿ.ಎಮ್ ಎಂಬ ನಿಷೇಧಿತ ಮಾದಕ ದ್ರವ್ಯವನ್ನು ಅಮಾಯಕ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ 4 ಲಕ್ಷ ರೂ. ಅಂದಾಜು ಮೌಲ್ಯದ ಬಿಳಿ ಬಣ್ಣದ ಕಾರು, 30.000 ರೂ. ಅಂದಾಜು ಮೌಲ್ಯದ 11 ಗ್ರಾಂ ಎಮ್.ಡಿ.ಎಮ್, 10.950/- ರೂ. ನಗದು ಹಣ,21.000 ರೂ.ನ ನಾಲ್ಕು ಮೊಬೈಲ್ ಗಳು ಸೇರಿದಂತೆ 4.61.950 ರೂ. ಅಂದಾಜು ಮೌಲ್ಯದ ಒಟ್ಟು ಸೊತ್ತುಗಳನ್ನು ವಶಪಡಿಸಲಾಗಿದೆ.

ಪಣಂಬೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ ಐ.ಪಿ.ಎಸ್. ರವರ ನೇತೃತ್ವದ ನಡೆದ ಈ ಕಾರ್ಯಚರಣೆಯ ತಂಡದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ, ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ/ಸಿಬ್ಬಂದಿಗಳಾದ ಮೊಹಮ್ಮದ್ ಎಎಸ್‌ಐ, ಕುಶಲ ಮಣಿಯಾಣಿ, ವಿಜಯ್ ಕಾಂಚನ್, ಸತೀಶ್ ಎಮ್, ಇಸಾಕ್ ಅಹಮ್ಮದ್ ಮತ್ತು ಶರಣ್ ಕಾಳಿ ಹಾಗೂ ಸುರತ್ಕಲ್ ಪೊಲೀಸ್ ಠಾಣಾ ಸಿಬ್ಬಂಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next