Advertisement
ಕಂಕನಾಡಿಯ ಫಾದರ್ ಮುಲ್ಲರ್ ಸಭಾಂಗಣದಲ್ಲಿ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎರಡು ದಿನಗಳ 27ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ “ರುಬಿಕಾನ್ 2024′ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಫಾ| ಮುಲ್ಲರ್ ಕಾಲೇಜಿನ ಆಡಳಿತಾಧಿಕಾರಿ ವಂ| ಫೌಸ್ತಿನ್ ಲೋಬೊ ಸ್ವಾಗತಿಸಿ, ಪ್ರಾಂಶುಪಾಲ ಡಾ| ಇ.ಎಸ್.ಜೆ. ಪ್ರಭು ಕಿರಣ್ ವಂದಿಸಿದರು. ಡಾ| ದೀಪಾ ಪಾಯಸ್ ಮತ್ತು ಡಾ|ಮನೀಶ್ ಕುಮಾರ್ ತಿವಾರಿ ನಿರೂಪಿಸಿದರು.
ಫಾದರ್ ಮುಲ್ಲರ್ ಹೋಮಿಯೋ ಪತಿ ಫಾರ್ಮಸುಟಿಕಲ್ ಡಿವಿಜನ್ನ ಆಡಳಿತಾಧಿಕಾರಿ ವಂ| ನೆಲ್ಸನ್ ಡಿ. ಪಾಯಸ್, ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ| ಅಶ್ವಿನ್ ಎಲ್. ಕ್ರಾಸ್ತಾ, ಹೋಮಿ ಯೋಪತಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ವಿಲ್ಮಾ ಮೀರಾ ಡಿ’ ಸೋಜಾ, ವೈದ್ಯಕೀಯ ಅಧೀಕ್ಷಕ ಡಾ| ಗಿರೀಶ್ ನಾವಡ ಮತ್ತು ಹೋಮಿಯೋಪತಿ ಸಮ್ಮೇಳನದ ಸಂಘಟನ ಕಾರ್ಯದರ್ಶಿ ಡಾ| ರಂಜನ್ ಸಿ.ಬ್ರಿಟ್ಟೊ ಉಪಸ್ಥಿತರಿದ್ದರು.
ಮಿಯೋಪತಿಯಲ್ಲಿ ಭಾರತ ವಿಶ್ವಖ್ಯಾತಿ
ವಿಶ್ವದಲ್ಲೇ ಹೋಮಿಯೋಪತಿ ಚಿಕಿತ್ಸೆ ಹಾಗೂ ಶಿಕ್ಷಣದಲ್ಲಿ ಭಾರತ ಮುಂಚೂಣಿಯಲ್ಲಿದೆ. 3.6 ಲಕ್ಷದಷ್ಟು ಪ್ರಮಾಣೀಕೃತ ಹೋಮಿಯೋಪತಿ ಚಿಕಿತ್ಸಕರು ದೇಶದಲ್ಲಿದ್ದಾರೆ. 270 ಕಾಲೇಜುಗಳು ಹೋಮಿಯೋಪತಿ ಶಿಕ್ಷಣ ನೀಡುತ್ತಿದ್ದು, 32 ಸಂಶೋಧನ ಕೇಂದ್ರಗಳು ಕಾರ್ಯವೆಸಗುತ್ತಿವೆ ಎಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ| ಅನಿಲ್ ಖುರಾನಾ ಹೇಳಿದರು.
ಭಾರತದಿಂದ ಈಗ ಹೋಮಿಯೋಪತಿ ಔಷಧಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿದೆ. 2021ರಿಂದ ಹೋಮಿಯೋಪತಿ ಆಯೋಗವನ್ನು ಪುನರ್ ರಚಿಸಲಾಗಿದ್ದು, ಪಠ್ಯಕ್ರಮದ ಸುಧಾರಣೆಗೆ ಗಮನ ಹರಿಸಲಾಗಿದೆ. ಸದ್ಯ ಇರುವ ನಾಲ್ಕು ಸ್ನಾತಕೋತ್ತರ ಕೋರ್ಸ್ ಗಳಲ್ಲದೆ ಹೆಚ್ಚುವರಿಯಾಗಿ ಚರ್ಮಚಿಕಿತ್ಸೆ ಹಾಗೂ ಸಮುದಾಯ ಆರೋಗ್ಯ ಕೋರ್ಸ್ಗಳನ್ನೂ ಸೇರಿಸಲಾಗುತ್ತಿದೆ ಎಂದರು.