ಮಂಗಳೂರು: ತುಳುನಾ ಡಿನಲ್ಲಿ ಹಿಂದಿನ ಕಾಲದಲ್ಲಿ ಗ್ರಾಮೀಣ ಜನರ ಮೇಲಾಗುತ್ತಿದ್ದ ದಬ್ಬಾಳಿಕೆ, ದೌರ್ಜನ್ಯದ ಕಥಾನಕವನ್ನೇ ಪೋಣಿಸಿ ಸಿದ್ದಪಡಿಸಿದ ಹಾಗೂ ತುಳು ಸಿನೆಮಾ ರಂಗದಲ್ಲಿ ಹೊಸ ಪ್ರಯೋಗವನ್ನು ಬರೆದ “ದಸ್ಕತ್’ ಸಿನೆಮಾ ಕರಾವಳಿಯ ಥಿಯೇಟರ್‌ಗಳಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಪಂಚಾಯತ್ ಅಧಿಕಾರಿಯೊಬ್ಬನ ದಸ್ಕತ್‌ಗಾಗಿ ಜನರ ಪಾಡನ್ನು ವಿಭಿನ್ನ ನೆಲೆಯಿಂದ ಮೂಡಿಸಿದ ಸಿನೆಮಾ, ತುಳುನಾಡಿನ ಗ್ರಾಮೀಣ ಬದುಕಿನ ಸಂಕಟದ ಕಥಾನಕವನ್ನು ಪ್ರದರ್ಶಿಸಿದೆ. ಆರಂಭದಿಂದ ಕೊನೆಯವರೆಗೂ ಹಲವು ತಿರುವುಗಳೊಂದಿಗೆ ಸಾಗುವ ಈ ಸಿನಿಮಾ, ಬಿಡುಗಡೆಯಾದ ಮೊದಲ ದಿನವೇ ಯಶಸ್ವಿ ಪ್ರದರ್ಶನದ ಮೂಲಕ ಗಮನ ಸೆಳೆದಿದೆ.
ಚಿತ್ರದ ಬಿಡುಗಡೆ ಸಮಾರಂಭವು ಬಿಗ್ ಸಿನೆಮಾಸ್‌ನಲ್ಲಿ ಶುಕ್ರವಾರ ನಡೆಯಿತು. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಪ್ರಮುಖರಾದ ರಾಘವೇಂದ್ರ ಕುಡ್ವ, ಜಗದೀಶ್ ಅಧಿಕಾರಿ, ಸೂರಜ್ ಕಲ್ಯ, ಕೊರಗಪ್ಪ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಚಿತ್ರದ ನಟ-ನಟಿ ಯರು ಭಾಗವಹಿಸಿದ್ದರು.
ಸೆವೆಂಟಿ ಸೆವೆನ್ ಸ್ಟುಡಿಯೋಸ್ ರಾಘವೇಂದ್ರ ಕುಡ್ವ ಅವರ ನಿರ್ಮಾ ಣದಲ್ಲಿ ಸಿದ್ಧವಾದ ಈ ಸಿನೆಮಾವನ್ನು ಕೃಷ್ಣ ಜೆ. ಪಾಲೆಮಾರ್ ಅರ್ಪಿಸಿದ್ದಾರೆ. ಅನೀಶ್ ಪೂಜಾರಿ ವೇಣೂರು ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೆàಶ್ ಶೆಟ್ಟಿ ಕಾರ್ಯನಿರ್ವಹಿಸಿ ದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆಯವರ ಛಾಯಾಗ್ರಹಣ ವಿದ್ದು, ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದಾರೆ. ಸಮರ್ಥನ್ ಎಸ್.ರಾವ್ ಸಂಗೀತವಿದೆ.
ತುಳುವರ ಬದುಕು, ಸಂಸ್ಕೃತಿ ಹಾಗೂ ಸಂಘರ್ಷ !
ಚಿತ್ರದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಮಾತನಾಡಿ, ಬಿಡುಗಡೆಯ ಮೊದಲ ದಿನ ಎಲ್ಲ ಮಲ್ಟಿ ಪ್ಲೆಕ್ಸ್‌ಗಳಲ್ಲಿ 99 ರೂ.ಗೆ ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ . ದೀಕ್ಷಿತ್ ಕೆ. ಅಂಡಿಂಜೆ, ಭವ್ಯ ಪೂಜಾರಿ, ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ, ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್, ತಿಮ್ಮಪ್ಪ ಕುಲಾಲ್, ಯೋಗೀಶ್ ಶೆಟ್ಟಿ, ಚೇತನ್ ಪಿಲಾರ್ ಸಹಿತ ಹಲವು ಮಂದಿ ಮೋಡಿ ಮಾಡಿದ್ದಾರೆ.