Advertisement

ಮಂಗಳೂರು: ಎನ್‌ಎಸ್‌ಯುಐ ಪ್ರತಿಭಟನೆ; ಬಂಧನ

10:26 PM Dec 17, 2022 | Team Udayavani |

ಮಹಾನಗರ: ವಿದ್ಯಾರ್ಥಿ ವೇತನ, ಪದವಿ ಫಲಿತಾಂಶ ಪ್ರಕಟ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಎನ್‌.ಎಸ್‌. ಯು.ಐ. ರಾಜ್ಯ ಮಟ್ಟದಲ್ಲಿ ಕಾಲೇಜು ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ನಡೆಸಿತು.

Advertisement

ಪದವಿ ಪರೀಕ್ಷೆ ಮುಗಿದು ಆರೇಳು ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದಾಗಿ ಮುಂದಿನ ಸೆಮಿಸ್ಟರ್‌ ಕಲಿಕೆಗೆ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿದೆ. ಸರಕಾರ ಘೋಷಿಸಿರುವ ಉಚಿತ ಬಸ್‌ ಪಾಸ್‌ ಇನ್ನೂ ಜಾರಿಯಾಗಿಲ್ಲ. ಈಗ ಅವೈಜ್ಞಾನಿಕವಾಗಿ ಎನ್‌ಇಪಿಯನ್ನು ಜಾರಿಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಂಗಳೂರು ವಿ.ವಿ. ವರ್ಷದಿಂದ ಫಲಿತಾಂಶ ಪ್ರಕಟಿಸಿಲ್ಲ. ಉನ್ನತ ವ್ಯಾಸಂಗಕ್ಕೆ ಹೋಗುವವರಿಗೆ ಸಮಸ್ಯೆಯಾಗಿದೆ. ಗೊಂದಲ ಬಗೆಹರಿಯುವ ಮುನ್ನವೇ ಎನ್‌ಇಪಿ ಜಾರಿಯಾಗುತ್ತಿದೆ ಎಂದು ಪ್ರತಿಭಟನ ಕಾರರನ್ನು ಉದ್ದೇಶಿಸಿ ದ.ಕ. ಜಿಲ್ಲಾ ಎನ್‌.ಎಸ್‌.ಯು.ಐ. ಅಧ್ಯಕ್ಷ ಸವಾದ್‌ ಸುಳ್ಯ ಹೇಳಿದರು.

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕು. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸಬೇಕು. ಸಮರ್ಪಕ ವಾಗಿ “ಅರಿವು ಸಾಲ’ ಕಲ್ಪಿಸಬೇಕು. ಕೇಂದ್ರ ಸರಕಾರ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದೆ. ಹಲವು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನೇ ನಂಬಿ ವಿದ್ಯಾರ್ಜನೆ ಮಾಡುತ್ತಾರೆ. ತತ್‌ಕ್ಷಣ ವಿದ್ಯಾರ್ಥಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದರು. ಎನ್‌.ಎಸ್‌.ಯು.ಐ. ಮುಖಂಡರಾದ ಸುಹಾನ್‌ ಆಳ್ವ, ಶ್ವಾನ್‌ ಸಿರಿ, ಸಫಾನ್‌ ಕುದ್ರೋಳಿ, ಸಿರಾಜ್‌ ಗುದ್ರು, ಓಂಶ್ರೀ, ಸಾಹಿಲ್‌, ನಿಖೀಲ್‌ ಶೆಟ್ಟಿ, ಅಝೀಮ್‌, ಅಹಾ°ಫ್‌, ಪ್ರಜ್ವಲ್‌, ಆತೂಫ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next