Advertisement

Mangaluru: 3 ದಿನ ಅಹೋರಾತ್ರಿ ಅಖಂಡ ರಾಮಾಯಣ ಪಾರಾಯಣ

12:48 AM Jan 18, 2024 | Team Udayavani |

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾ ರ್ಪಣೆ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರ ಗೋಡು ವ್ಯಾಪ್ತಿಯನ್ನು ಒಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗ ದಿಂದ ಅಖಂಡ ರಾಮಾಯಣ ಪಾರಾ ಯಣ ನಗರದ ಸಂಘನಿಕೇತನದಲ್ಲಿ ಜ. 19ರಿಂದ 21ರವರೆಗೆ ಹಮ್ಮಿ ಕೊಳ್ಳಲಾಗಿದೆ.

Advertisement

ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಕೃತ ಭಾರತಿ ಪ್ರಾಂತ ಸಂಪರ್ಕ ಪ್ರಮುಖ್‌ ಸತ್ಯನಾರಾಯಣ ಕೆ.ವಿ. ಮಾತನಾಡಿ, ಜ.19 ರಂದು ಮಧ್ಯಾಹ್ನ 3ಕ್ಕೆ ಉದ್ಘಾಟನ ಕಾರ್ಯ ಕ್ರಮ ನಡೆದ ಬಳಿಕ ಜ.21ರ ಸಂಜೆ 4ರವರೆಗೆ ಅಹೋ ರಾತ್ರಿ ರಾಮಾಯಣ ಪಾರಾಯಣ ನಡೆಯಲಿದೆ ಎಂದರು. ವಾಲ್ಮೀಕಿ ರಾಮಾಯಣದ 24,000 ಸಂಸ್ಕೃತ ಶ್ಲೋಕಗಳನ್ನು ಗಾಯತ್ರಿ ಮಂತ್ರದ ಬೀಜಾಕ್ಷರಾ ನುಸಾರವಾಗಿ 24 ತಂಡ ಗಳನ್ನಾಗಿ ವಿಂಗಡಿಸಲಾಗಿದೆ.

ಸುಮಾರು 51 ಗಂಟೆಗಳಿಗೂ ಅಧಿಕ ಕಾಲ ನಡೆ ಯುವ ಈ ಪಾರಾಯಣದಲ್ಲಿ ಪ್ರತೀ ತಂಡದಲ್ಲಿ ಕನಿಷ್ಠ 20 ಜನರು ಸುಮಾರು 1000 ಶ್ಲೋಕಗಳನ್ನು ಪಠಿ ಸಲಿ ದ್ದಾರೆ. ಪಾರಾಯಣದ ಅಭ್ಯಾಸವು ಕಳೆದ 1 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.

ಸುಮಾರು 1000 ಶ್ಲೋಕಗಳ ಪಾರಾಯಣಕ್ಕೆ ತಗಲುವ ಸಮಯ ಸುಮಾರು 2 ಗಂಟೆಗಳ ಅವಧಿ. ಜನರು ಸಮಯಾನುಕೂಲತೆಯ ಅನುಸಾರ ವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next