Advertisement

ಕುಸಿಯುವ ಹಂತದಲ್ಲಿ ಮಂಗಳಪದವು ಅನಂತಾಡಿ ರಸ್ತೆಯ ಮಚ್ಚ ಸೇತುವೆ

12:16 PM Jul 08, 2018 | Team Udayavani |

ವಿಟ್ಲ : ವಿಟ್ಲ ಮಂಗಳಪದವು ಅನಂತಾಡಿ ರಸ್ತೆಯ ಮಂಗಳಪದವಿನಿಂದ 1 ಕಿ.ಮೀ. ದೂರದಲ್ಲಿ ಸುಮಾರು 5 ದಶಕಗಳಿಗಿಂತಲೂ ಹೆಚ್ಚು ವರ್ಷಗಳ ಕಾಲದ ಹಳೆ ಸೇತುವೆ ಕುಸಿಯುವ ಹಂತದಲ್ಲಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸೇತುವೆಯ ಅಡಿಭಾಗದಲ್ಲಿ ಕಬ್ಬಿಣದ ಸರಳುಗಳು ತುಕ್ಕುಹಿಡಿದು ಬೀಳುತ್ತಿವೆ. ಅಪಾಯಕಾರಿ ಹಂತದಲ್ಲಿರುವ ಬಗ್ಗೆ ಈಗಾಗಲೇ ಅನೇಕ ಬಾರಿ ಉದಯವಾಣಿ ಎಚ್ಚರಿಸಿ, ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಸೆಳೆದಿತ್ತು. ಆದರೆ ಇಂದಿಗೂ ಅದರ ಸ್ಥಿತಿ ಬದಲಾಗಿಲ್ಲ.

Advertisement

ವಿಟ್ಲ, ವೀರಕಂಭ, ಅನಂತಾಡಿ, ನೆಟ್ಲಮುಟ್ನೂರು, ಮಾಣಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಿದು. ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳನ್ನೂ ಸಂಪರ್ಕಿಸುವ ಪ್ರಮುಖ ರಸ್ತೆಯೆಂದರೂ ತಪ್ಪಲ್ಲ. ಇಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುತ್ತದೆ. ಪ್ರತಿದಿನವೂ ನೂರಾರು ವಾಹನಗಳು ಹಾಗೂ ಕೆಂಪು-ಕಪ್ಪು ಕಲ್ಲು, ಮರಳು ಸಾಗಾಟದ ಲಾರಿಗಳೂ ಸಂಚರಿಸುತ್ತವೆ. ಈ ಸೇತುವೆ ಮೇಲೆ ದೊಡ್ಡದಾದ ಹೊಂಡವಾಗಿದ್ದು, ನೇರವಾಗಿ ನದಿಯನ್ನು ನೋಡುವಂತಹ ಸ್ಥಿತಿಯಿತ್ತು. ಆದರೆ ಅದನ್ನು ಕಲ್ಲು ಮಣ್ಣು ಹಾಕಿ, ಡಾಮರು ತೇಪೆ ಹಾಕಿ ಮುಚ್ಚಲಾಗಿದೆ. ಆದರೆ ಈ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next