Advertisement
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಅತ್ಯಾಧುನಿಕ “ಲೆನ್ಸಾರ್ ರೋಬೊಟಿಕ್ ಲೇಸ್ ಕ್ಯಾಟರ್ಯಾಕ್ಟ್ ಸರ್ಜರಿ ಸಿಸ್ಟಮ್’ ಅನ್ನು ಪರಿಚಯಿಸಲಾಗುತ್ತಿದೆ. ಈ ಯಂತ್ರವು ಪೊರೆ ಚಿಕಿತ್ಸೆಗೆ ಬೇಕಾದ ಇನ್ಸಿಷನ್, ಕಣ್ಣಿನ ಪೊರೆ ಹೊರಗೆ ತೆಗೆಯುವುದು, ಲೆನ್ಸ್ ಅಳವಡಿಕೆ ಮೊದಲಾದ ಕಾರ್ಯಗಳನ್ನು ತಾನೇ ನಿರ್ವಹಿಸುತ್ತದೆ.
Related Articles
Advertisement
ಜು.14ರಂದು ಉದ್ಘಾಟನೆಪಂಪ್ವೆಲ್ ಉಜ್ಜೋಡಿಯಲ್ಲಿರುವ ನೇತ್ರಾಲಯದಲ್ಲಿ ಜು.14 ರಂದು ಸಂಜೆ 6 ಗಂಟೆಗೆ ಈ ತಂತ್ರ ಜ್ಞಾನವನ್ನು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಉದ್ಘಾಟಿಸಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಲೆನ್ಸಾರ್ ವಿಷನ್ ಪ್ರೈ.ಲಿ. ಭಾರತ ಮತ್ತು ದಕ್ಷಿಣ ಏಷ್ಯಾ ಸ್ಥಾಪಕ ನಿರ್ದೇಶಕ ಸುಧೀರ್ ಕೌಲ್, ಮನಪಾ ಸದಸ್ಯ ಸಂದೀಪ್ ಗರೋಡಿ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ರಘುರಾಮ್ ರಾವ್ ಅವರು ಮುಖ್ಯ ಅತಿಥಿಗಳಾಗಿರುವರು ಎಂದು ಅವರು ತಿಳಿಸಿದರು. ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್, ನಿರ್ದೇಶಕರಾದ ಡಾ| ವಿಕ್ರಮ್ ಜೈನ್, ಡಾ| ಹರೀಶ್ ಶೆಟ್ಟಿ, ಡಾ| ಜಾಕೋಬ್ ಚಾಕೋ ಉಪಸ್ಥಿತರಿದ್ದರು.