Advertisement

‘ಮಂಗಳೂರು ವಿ.ವಿ. ಶೀಘ್ರದಲ್ಲಿ ಡಿಜಿಟಲೀಕರಣ’

10:58 PM Jun 28, 2019 | Team Udayavani |

ಮಹಾನಗರ: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ, ತೇರ್ಗಡೆ ಹೊಂದಿದ ಹಾಗೂ ಡಾಕ್ಟರೇಟ್ ಪಡೆದ ವಿದ್ಯಾರ್ಥಿಗಳ ವಿವರ ಸಹಿತ ವಿ.ವಿ.ಯ ಸಮಗ್ರ ಮಾಹಿತಿಗಳನ್ನು ಶೀಘ್ರದಲ್ಲಿಯೇ ಡಿಜಿಟಲೀಕರಣ ಮಾಡಲು ನಿರ್ಧರಿ ಸಲಾಗಿದೆ ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಹೇಳಿದರು.

Advertisement

ನಗರದ ಸೈಂಟ್ ಆ್ಯಗ್ನೇಸ್‌ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾ ನಿಲಯ ಕಾಲೇಜು ಅಧ್ಯಾಪಕರ ಸಂಘ (ಅಮುಕ್ತ್) ಸಹಯೋಗದಲ್ಲಿ ಶುಕ್ರವಾರ ನಡೆದ ‘ಉನ್ನತ ಶಿಕ್ಷಣದಲ್ಲಿನ ಸಿಬಿಎಸ್‌ಸಿ ಮತ್ತು ಮೂಕ್‌ ಕುರಿತ ಒಳನೋಟಗಳು’ ಎಂಬ ವಿಷಯದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಂಗಳೂರು ವಿ.ವಿ. ವ್ಯಾಪ್ತಿಗೆ ಒಳಪಟ್ಟ 210 ಕಾಲೇಜುಗಳು, ಐದು ಸ್ವಾಯತ್ತ ಕಾಲೇಜುಗಳು, 2 ಘಟಕಗಳು ಹಾಗೂ ವಿ.ವಿ. ಸ್ನಾತಕೋತ್ತರ ಕೇಂದ್ರಗಳ ಮಾಹಿತಿ ಇರಲಿದೆ. ಜತೆಗೆ ಮಂಗಳೂರು ವಿ.ವಿ.ಯು ಕಾಗದ ರಹಿತ ಕಚೇರಿ ಮಾಡುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಹೊಸ ಕರಡನ್ನು ಲಭ್ಯತೆ, ಸಮಾನ ನ್ಯಾಯ, ಗುಣಮಟ್ಟ, ಕೈಗೆಟಕುವ ಸಾಮರ್ಥ್ಯದ ನೆಲೆಯಲ್ಲಿ ರೂಪಿಸಲಾಗಿದೆ. ಇದನ್ನು ಜಾರಿಗೊಳಿಸುವ ನೆಲೆಯಲ್ಲಿ ಆಡಳಿತ ವ್ಯವಸ್ಥೆ ಹಾಗೂ ಜನರನ್ನು ಬೆಸೆದುಕೊಳ್ಳುವ ದೊಡ್ಡ ಸವಾಲು ಇದೆ ಎಂದರು.

ಪ್ರಾಧ್ಯಾಪಕರೂ ಸಿದ್ಧಗೊಳ್ಳಿ
ವಿ.ವಿ. ಕುಲಸಚಿವ ಪ್ರೊ| ಎ.ಎಂ. ಖಾನ್‌ ಮಾತನಾಡಿ, ಹಿಂದೆ ತರಗತಿಯಲ್ಲಿ ಶಿಕ್ಷಕರೇ ಮಾಹಿತಿಯ ಕೇಂದ್ರವಾಗಿದ್ದರು. ಈಗಿನ ಪೀಳಿಗೆಯು ಒಂದು ಹೆಜ್ಜೆ ಮುಂದೆ ಹೋಗಿದ್ದು ಈ ಸವಾಲಿಗೆ ತಕ್ಕಂತೆ ಪ್ರಾಧ್ಯಾಪಕರೂ ತರಗತಿಗಳಿಗೆ ಸಿದ್ಧಗೊಳಿಸಬೇಕು. ಆಧುನೀಕರಣಗೊಳ್ಳಬೇಕಿದೆ ಎಂದರು.

Advertisement

ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ| ಅಪ್ಪಾಜಿ ಗೌಡ ಎಸ್‌.ಬಿ, ಪ್ರಾಂಶುಪಾಲೆ ಡಾ| ಜೆಸ್ವಿನಾ ಮಾತನಾಡಿದರು. ಡಾ| ಎನ್‌.ಎಂ. ಜೋಸೆಫ್‌, ಡಾ| ವಿಶಾಲಾ ಬಿ.ಕೆ., ಪ್ರಾಧ್ಯಾಪಿಕೆ ಮಾಲಿನಿ ಮಲ್ಯ ಉಪಸ್ಥಿತರಿದ್ದರು.

ಆಯ್ಕೆ ಆಧರಿತ ಕ್ರೆಡಿಟ್ ವ್ಯವಸ್ಥೆ (ಸಿಬಿಎಸ್‌ಸಿ) ಮತ್ತು ಬೃಹತ್‌ ಮುಕ್ತ ಆನ್‌ಲೈನ್‌ ಕೋರ್ಸ್‌ (ಮೂಕ್‌)ಗಳೆರಡೂ ಶಿಕ್ಷಣ ನೀತಿಯ ಆಶಯದಂತಿವೆ. ಹೀಗಾಗಿ ಮುಂದಿನ ತಿಂಗಳು ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕುರಿತು ವಿ.ವಿ.ಯಲ್ಲಿ ಕಾರ್ಯಾಗಾರ ಮಾಡಲಾಗುವುದು ಎಂದು ಪ್ರೊ|ಪಿ.ಎಸ್‌. ಎಡಪಡಿತ್ತಾಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next