Advertisement

ಮಂಗಳೂರು ವಿ.ವಿ. ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ನಾಳೆ ಸ್ವಂತ ಕಟ್ಟಡಕ್ಕೆ ಅಡಿಗಲ್ಲು

12:16 AM Jan 11, 2020 | Sriram |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡದ ಶಿಲಾನ್ಯಾಸ ಸಮಾರಂಭ ಜ. 12ರಂದು ಬೆಳಗ್ಗೆ 10.30ಕ್ಕೆ ಕೊಣಾಜೆಯ ವಿ.ವಿ. ಮುಖ್ಯ ದ್ವಾರದ ಮುಂಭಾಗದ ನಿವೇಶನದಲ್ಲಿ ನಡೆಯಲಿದೆ.

Advertisement

ಸಚಿವ ಕೋಟ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಶಂಕು ಸ್ಥಾಪನೆ ನೆರವೇ ರಿಸುತ್ತಾರೆ. ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀ ರ್ವಚನ ನೀಡಲಿದ್ದು, ವಿ.ವಿ. ಉಪಕುಲ ಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅಧ್ಯಕ್ಷತೆ ವಹಿಸುವರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶಾಸಕ ಯು.ಟಿ. ಖಾದರ್‌, ವಿ. ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ನಿಟ್ಟೆ ಡೀಮ್ಡ್ ವಿ.ವಿ. ಕುಲಾಧಿಪತಿ ಎನ್‌. ವಿನಯ ಹೆಗ್ಡೆ, “ಮಾತೃ ಭೂಮಿ’ ದೈನಿಕದ ನಿರ್ವಾಹಕ ಸಂಪಾದಕ ಪಿ.ವಿ. ಚಂದ್ರನ್‌, ಮಾಜಿ ಸಚಿವರಾದ ರಮಾನಾಥ ರೈ ಮತ್ತು ವಿನಯ ಕುಮಾರ್‌ ಸೊರಕೆ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್‌, ಜಯ ಸಿ. ಸುವರ್ಣ, ನವೀನ್‌ಚಂದ್ರ ಡಿ. ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಾರಾಯಣ ಗುರುಗಳ ಬಗ್ಗೆ ವಿಸ್ತೃತ ಅಧ್ಯ ಯನ, ಪ್ರಸರಣ ಮತ್ತು ಅದನ್ನೊಂದು ಶೈಕ್ಷಣಿಕ ಶಿಸ್ತಾಗಿ ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಸಲಹಾ ಸಮಿತಿಯ ಶಿಫಾರಸಿನಂತೆ ಥೀಂ ಪಾರ್ಕ್‌ ಮಾದರಿ ಯ
ವಿವಿಧ ವಿಭಾಗಗಳುಳ್ಳ ಸ್ವಂತ ಕಟ್ಟಡ (ಜ್ಞಾನ ಮಂದಿರ) ನಿರ್ಮಿಸಲಾಗು ತ್ತದೆ ಎಂದು ವಿ.ವಿ. ಉಪ ಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿ.ವಿ. ಕಾಲೇಜು ಪ್ರಾಂಶುಪಾಲ ಪ್ರೊ| ಉದಯ ಕುಮಾರ್‌, ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಸಲಹಾ ಮಂಡಳಿ ಸದಸ್ಯರಾದ ಮೋಹನ್‌ ಚಂದ್ರನ್‌ ನಂಬಿಯಾರ್‌, ಪಿ.ವಿ. ಮೋಹನ್‌, ವಿಜಯಕುಮಾರ್‌ ಸೊರಕೆ, ಪೊ| ಮರಿಯಾ ಡಿ’ಕೋಸ್ಟ, ಡಿಸೈನರ್‌ ಸಂತೋಷ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

“ಹುದ್ದೆ ಭರ್ತಿಗೆ ಫೆಬ್ರವರಿಯಲ್ಲಿ ಅನುಮತಿ ನಿರೀಕ್ಷೆ’
ಮಂಗಳೂರು ವಿ.ವಿ.ಯಲ್ಲಿ 124 ಬೋಧಕ ಮತ್ತು 215 ಬೋಧಕೇತರ ಸಿಬಂದಿ ಹುದ್ದೆ ಖಾಲಿ ಇದ್ದು, ಭರ್ತಿ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಫೆಬ್ರವರಿಯೊಳಗೆ ಅನುಮತಿ ದೊರಕುವ ನಿರೀಕ್ಷೆ ಇದೆ ಎಂದು ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ತಿಳಿಸಿದರು.

10 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಯುಜಿಸಿಯ ನ್ಯಾಕ್‌ ಮೌಲ್ಯಮಾಪನ ದೃಷ್ಟಿಯಿಂದಲೂ ಹುದ್ದೆಗಳನ್ನು ಭರ್ತಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ವಿ.ವಿ.ಯಲ್ಲಿ 25 ವಿಭಾಗಗಳಿದ್ದು, 45 ವಿಷಯಗಳನ್ನು ಬೋಧಿಸಲಾಗುತ್ತಿದೆ. ಮೂರನೇ ಒಂದಂಶ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಖಾಲಿ ಹುದ್ದೆಗಳನ್ನು ಕೆ.ಇ.ಎ. ಮೂಲಕ ತುಂಬುವ ಬದಲು ವಿ.ವಿ. ಮೂಲಕ ಭರ್ತಿ ಮಾಡಲು ಅವಕಾಶ ನೀಡುವಂತೆ ಕೋರಲಾಗಿದೆ ಎಂದು ವಿವರಿಸಿದರು.

ಫೆ. 2 – 3ನೇ ವಾರ ಘಟಿಕೋತ್ಸವ
ಮಂಗಳೂರು ವಿಶ್ವವಿದ್ಯಾ ನಿಲಯದ ವಾರ್ಷಿಕ ಘಟಿಕೋತ್ಸವ ಫೆ.2ನೇ ಅಥವಾ 3ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಪ್ರೊ| ಎಡಪಡಿತ್ತಾಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next