Advertisement
ಶುಕ್ರವಾರ ಸಮಿತಿಯ ಸಭೆ ನಡೆದಿದ್ದು ಶಾಸಕ ವೇದವ್ಯಾಸ ಕಾಮತ್ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ, ಪ್ರಾಂಶುಪಾಲೆ, ಸಿಂಡಿಕೇಟ್ ಸದಸ್ಯರು ಭಾಗವಹಿಸಿದ್ದರು.
Related Articles
ಶಾಸಕ ಕಾಮತ್ ಮಾತನಾಡಿ, ನಮಗೆ ಬಂದ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್ ಆದೇಶ ಅನ್ವಯ ಆಗುತ್ತದೆ. ಅದನ್ನು ಪಾಲಿಸಲೇಬೇಕು ಎಂದರು.
Advertisement
ಜೆಎನ್‌ಯು ಮಾಡಲು ಬಿಡಲಾರೆ: ಕಾಮತ್ಮಂಗಳೂರು ವಿ.ವಿ. ಕಾಲೇಜನ್ನು ದಿಲ್ಲಿಯ ಜೆಎನ್‌ಯು ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಲೇಜಿನಲ್ಲಿ ರಾಜಕೀಯ ಮಾಡಿ ಎಸ್‌ಡಿಪಿಐ, ಮತ್ತು ಕಾಂಗ್ರೆಸ್ ಬೆಂಬಲಿತರು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿದ್ದಾರೆ. ಮಂಗಳೂರಿನ ಮಣ್ಣಿನಲ್ಲಿ ಹುಟ್ಟಿದವರಿಗೆ ದೇಶ ಹಾಳು ಮಾಡಲು ಅವಕಾಶ ಇಲ್ಲ. ಸರಕಾರ ಮತ್ತು ಕೋರ್ಟ್ ನಿಯಮ ಪಾಲಿಸದೇ ಇದ್ದರೆ ಅಧ್ಯಾಪಕರೇ ಕೋರ್ಟ್ ಮೆಟ್ಟಲು ಹತ್ತಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ನಡುವೆ ವಿ.ವಿ. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಯಾಸ್ ಆಚಾರ್ಯ ರಾಜೀನಾಮೆ ನೀಡಿ ದ್ದಾರೆ. ಅವರು ಎಬಿವಿಪಿ ಬೆಂಬಲ ದಿಂದ ಆಯ್ಕೆಯಾಗಿದ್ದರು. ಹಿಜಾಬ್‌ಗ ನನ್ನದೂ ವಿರೋಧ ಇತ್ತು, ಆದರೆ ಪ್ರತಿಭಟನೆ ಮಾಡಿದರೆ ಕಾಲೇಜಿನಲ್ಲಿ ವಿನಾಕಾರಣ ಗಲಭೆ ಆಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆ ಬೇಡ ಎಂದಿದ್ದೆ, ನನ್ನ ಈ ನಿರ್ಧಾರ ತಪ್ಪು ಎಂದಾದರೆ ನಾನು ಅಧ್ಯಕ್ಷನಾಗಿದ್ದು ಪ್ರಯೋಜನ ಇಲ್ಲ ಹಾಗಾಗಿ ರಾಜೀನಾಮೆ ನೀಡಿ ದ್ದೇನೆ ಎಂದವರು ತಿಳಿಸಿದ್ದಾರೆ. ಕೆಲವರಿಂದ ವಿವಾದ: ಪ್ರಾಂಶುಪಾಲೆ
ಕಾಲೇಜಿನಲ್ಲಿ 44 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಹಿಜಾಬ್ ವಿವಾದ ಒಂದು ತಂಡದಿಂದಷ್ಟೇ ಆಗಿದೆ. 15 ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡುತ್ತಿದ್ದಾರೆ ಎಂದು ಪ್ರಾಂಶುಪಾಲೆ ಡಾ| ಅನಸೂಯ ರೈ ತಿಳಿಸಿದರು.