Advertisement
ವಿ.ವಿ.ಯ 40ನೇ ವಾರ್ಷಿಕ ಘಟಿಕೋತ್ಸವ ಎ. 23ರ ಬೆಳಗ್ಗೆ 11ಕ್ಕೆ ಮಂಗಳಗಂಗೋತ್ರಿಯಲ್ಲಿ ನಡೆಯಲಿದೆ. ಈ ವೇಳೆ ಪದವಿ ಪಡೆಯು ವವರು ಪೂರ್ಣ ಬಿಳಿ ಬಣ್ಣದ ಉಡುಗೆ ಧರಿಸಿರಬೇಕು. ನಿಯಮ ಪಾಲಿಸದಿದ್ದರೆ ವೇದಿ ಕೆಯಲ್ಲಿ ಸರ್ಟಿಫಿಕೇಟ್ ಸಿಗದು. ಅವರು ಕಾರ್ಯಕ್ರಮ ಮುಗಿದ ಬಳಿಕ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.
ಮಂಗಳೂರು ವಿ.ವಿ.ಯ ಈ ಹಿಂದಿನ ಘಟಿಕೋತ್ಸವ ಸಂದರ್ಭ ಚಿನ್ನದ ಪದಕ ನೀಡಿರಲಿಲ್ಲ. ಯಾಕೆಂದರೆ ಚಿನ್ನದ ಮೌಲ್ಯ ದುಪ್ಪಟ್ಟಾಗಿತ್ತು. ಬದಲಾಗಿ, ಅವರಿಗೆ “ನಗದು ಬಹುಮಾನ ಪರಿವರ್ತಿತ’ ಎಂಬ ಮಾದರಿಯಲ್ಲಿ ನೀಡಲಾಗುತ್ತಿತ್ತು. ಈ ಬಾರಿ ಚಿನ್ನದ ಪದಕ ಪಡೆಯಲಿರುವವರಿಗೆ ಚಿನ್ನದ ಪದಕವನ್ನೇ ನೀಡಬೇಕು ಎಂದು ವಿ.ವಿ. ಚಿಂತನೆ ನಡೆಸಿದೆ.
Related Articles
Advertisement
2 ಅಥವಾ 3 ಮಂದಿಗೆ ಗೌರವ ಡಾಕ್ಟರೇಟ್ಮಂಗಳೂರು ವಿ.ವಿ.ಯ ಬಹುಮಹತ್ವದ “ಗೌರವ ಡಾಕ್ಟರೇಟ್’ ಈ ಬಾರಿ ಇಬ್ಬರು ಅಥವಾ ಮೂವರಿಗೆ ಸಿಗುವ ಸಾಧ್ಯತೆ ಇದೆ. ವಿ.ವಿ.ಯಿಂದ ಸುಮಾರು 10 ಮಂದಿಯ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಈ ಪೈಕಿ ಆಂತರಿಕ ತಂಡ 2-3 ಮಂದಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ವರ್ಷ ಗೌರವ ಡಾಕ್ಟರೇಟ್ ನೀಡಿರಲಿಲ್ಲ. ಅದಕ್ಕೂ ಹಿಂದಿನ ವರ್ಷ ಒಬ್ಬರಿಗೆ ಮಾತ್ರ ಪ್ರದಾನ ಮಾಡಲಾಗಿತ್ತು. ರಾಜ್ಯದ ಇತರ ವಿ.ವಿ.ಗಳಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವಗಳಲ್ಲಿ ಸರಾಸರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಹೀಗಾಗಿ ಮಂಗಳೂರು ವಿ.ವಿ.ಯಲ್ಲಿಯೂ ಇಬ್ಬರು ಅಥವಾ ಮೂವರಿಗೆ ಈ ಗೌರವ ಲಭಿಸಬಹುದೆನ್ನುವ ನಿರೀಕ್ಷೆಗೆ ಪುಷ್ಟಿ ದೊರೆತಿದೆ. ಈ ಬಾರಿಯ ಘಟಿಕೋತ್ಸವ ಹಲವು ವಿಶೇಷಗಳನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ರಾಜ್ಯಪಾಲರು ಘಟಿಕೋತ್ಸವದಲ್ಲಿ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ವಿಶೇಷ ವಾಗಿ ಪದವಿ ಸ್ವೀಕರಿಸುವವರು ಕಡ್ಡಾಯವಾಗಿ ವಿ.ವಿ. ಸೂಚಿಸುವ ಡ್ರೆಸ್‌ಕೋಡ್ ಪಾಲಿಸಬೇಕು. ಈ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗುತ್ತಿದೆ.
-ಪ್ರೊ| ಪಿ.ಎಸ್.ಯಡಪಡಿತ್ತಾಯ,
ಕುಲಪತಿಗಳು, ಮಂಗಳೂರು ವಿ.ವಿ.