Advertisement

ಆನ್‌ಲೈನ್‌ ಮೂಲಕ ಪರೀಕ್ಷೆ: ಮಂಗಳೂರು ವಿ.ವಿ. ಚಿಂತನೆ 

01:08 AM Aug 23, 2021 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟ ಪದವಿಯ 6ನೇ ಸೆಮಿಸ್ಟರ್‌ ಮತ್ತು ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ನಡೆಸಲು ವಿ.ವಿ. ಚಿಂತನೆ ನಡೆಸಿದೆ.

Advertisement

ಸೆಪ್ಟಂಬರ್‌ ಅಂತ್ಯದೊಳಗೆ ಪರೀಕ್ಷೆ ನಡೆಸಿ ಶೀಘ್ರವೇ ಫ‌ಲಿತಾಂಶವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಆತಂಕವನ್ನು ದೂರಪಡಿಸುವುದು ಇದರ ಮುಖ್ಯ ಉದ್ದೇಶ. ವಿಶೇಷ ಸಾಫ್ಟ್ವೇರ್‌ ಬಳಕೆ ಮಾಡಿಕೊಂಡು ಪುಣೆ ವಿ.ವಿ. ಇಂತಹ ಪರೀಕ್ಷೆಗಳನ್ನು ನಡೆಸಿದೆ. ಇದರಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ಸಾಧ್ಯವಿಲ್ಲ.

ಪದವಿ ತರಗತಿಗಳ 1, 3, 5ನೇ ಸೆಮಿಸ್ಟರ್‌ ಪರೀಕ್ಷೆಗಳು ಕೊನೆಯ ಹಂತದಲ್ಲಿವೆ. ಮೌಲ್ಯಮಾಪನ ಕೂಡ ಅಂತಿಮ ಹಂತದಲ್ಲಿದೆ. ಅದಾದ ಕೂಡಲೇ 2, 4ನೇ  ಸೆಮಿಸ್ಟರ್‌ಗೆ ಫಾರ್ಮುಲಾ ಆಧಾರಿತ ಪ್ರಮೋಶನ್‌ ಮಾಡಲಾಗುತ್ತದೆ.

ಕೋವಿಡ್‌ ಹಿನ್ನೆಲೆಯಲ್ಲಿ ತರಗತಿಗಳು ಕೂಡ ಆನ್‌ಲೈನ್‌ನಲ್ಲಿ ನಡೆದಿರುವ ಕಾರಣ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದೂ ಸುಲಭ. ಈ ಬಗ್ಗೆ ಕೆಲವೇ ದಿನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next