Advertisement

ಮಂಗಳೂರು ವಿ.ವಿ.: ನಾಳೆ ಘಟಿಕೋತ್ಸವ

11:59 PM Apr 08, 2021 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 39ನೇ ವಾರ್ಷಿಕ ಘಟಿಕೋತ್ಸವ ಎ. 10ರಂದು ಬೆಳಗ್ಗೆ 11 ಗಂಟೆಗೆ ಮಂಗಳಾ ಸಭಾಂಗಣದಲ್ಲಿ ಜರಗಲಿದೆ. ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಡಾ| ಸುಧಾಮೂರ್ತಿ ಅವರು ಆನ್‌ಲೈನ್‌ನಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಕುಲಾಧಿಪತಿಗಳಾದ ರಾಜ್ಯಪಾಲರು ಹಾಗೂ ಸಹಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ  ಭಾಗವಹಿಸಲು ಸಾಧ್ಯ ವಾಗುವುದಿಲ್ಲ. ಕೋವಿಡ್‌ ಕಾರಣ ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ವಿವರಿಸಿದರು.

ಪರೀಕ್ಷಾಂಗ ಕುಲಸಚಿವ ಹಾಗೂ ಕುಲಸಚಿವ (ಪ್ರಭಾರ) ಪ್ರೊ| ಪಿ.ಎಲ್. ಧರ್ಮ ಮಾತನಾಡಿ, 117 ಮಂದಿಗೆ (ಕಲೆ 27, ವಿಜ್ಞಾನ 63, ವಾಣಿಜ್ಯ 14, ಶಿಕ್ಷಣ 13) ಪಿಎಚ್‌ಡಿ ಡಾಕ್ಟರೆಟ್‌, 10 ಚಿನ್ನದ ಪದಕ, 101 ಮಂದಿಗೆ ನಗದು ಬಹುಮಾನ, ವಿವಿಧ ಕೋರ್ಸ್‌ಗಳ 188 ಮಂದಿ ರ್‍ಯಾಂಕ್‌ಗಳಲ್ಲಿ

ಪ್ರಥಮ ರ್‍ಯಾಂಕ್‌ ಪಡೆದ 69 ಮಂದಿಗೆ ರ್‍ಯಾಂಕ್‌ ಪ್ರಮಾಣ ಪತ್ರ (ಸ್ನಾತಕೋತ್ತರ ಪದವಿ 52, ಪದವಿ 17, ಕಲೆ 17, ವಿಜ್ಞಾನ ಮತ್ತು  ತಂತ್ರಜ್ಞಾನ 36, ವಾಣಿಜ್ಯ 9, ಶಿಕ್ಷಣ 4, ಸ್ನಾತಕೋತ್ತರ ಡಿಪ್ಲೊಮಾ 3) ನೀಡಲಾಗುವುದು. ಪಿಎಚ್‌ಡಿ ಪಡೆದವರಲ್ಲಿ 14 ವಿದೇಶಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಬಾರಿ ಕೋವಿಡ್‌ ಕಾರಣದಿಂದ 300 ವಿದ್ಯಾರ್ಥಿಗಳಿಗೆ ಮಾತ್ರ ಸಮಾ ರಂಭದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

Advertisement

ಪಿಎಚ್‌ಡಿ, ಚಿನ್ನದ ಪದಕ ಹಾಗೂ ಪ್ರಥಮ ರ್‍ಯಾಂಕ್‌ ಪಡೆದವರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಒಂದೇ ವಾರದಲ್ಲಿ ಅವರ ವಿಳಾಸಕ್ಕೆ ನೀಡಲಾಗುತ್ತದೆ. ವಿಶೇಷವಾಗಿ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ  ಕಾರ್ಯಕ್ರಮದ ಪ್ರಸಾರ ನಡೆಯಲಿದೆ ಎಂದರು.

ಬಾರಿ ಗೌರವ ಡಾಕ್ಟರೆಟ್‌ ಇಲ್ಲ :

ಪ್ರೊ| ಪಿ.ಎಸ್‌. ಯಡಪಡಿತ್ತಾಯ ಮಾತನಾಡಿ, ಈ ಬಾರಿ ಗೌರವ ಡಾಕ್ಟರೆಟ್‌ ನೀಡುವುದಿಲ್ಲ. ಗೌರವ ಡಾಕ್ಟರೇಟ್‌ ನೀಡಲೇಬೇಕು ಎನ್ನುವ ನಿಯಮವೂ ಇಲ್ಲ. ಈ ಬಾರಿ ಹೆಸರಿನ ಪಟ್ಟಿ ರಾಜ್ಯಪಾಲರಿಗೆ ಕಳುಹಿಸಿದ್ದರೂ ಕೊನೇ ಕ್ಷಣದಲ್ಲಿ ರಾಜ್ಯಪಾಲರಿಂದ ಅಂಕಿತ ಸಿಕ್ಕಿಲ್ಲ. ಜತೆಗೆ ಡಿಎಸ್ಸಿ ಮತ್ತು ಡಿ.ಲಿಟ್‌ ಪದವಿಯೂ ಈ ಬಾರಿ ಇರುವುದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next