Advertisement
ಲಭ್ಯ ಮಾಹಿತಿಯ ಪ್ರಕಾರ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿ ಪ್ರಮಾಣ ಪತ್ರಗಳಿಗೆ ವಿಶ್ವವಿದ್ಯಾಲಯದ ಬಾಗಿಲು ತಟ್ಟುತ್ತಿದ್ದಾರೆ. ತನ್ನ ವ್ಯಾಪ್ತಿಯ ಕಾಲೇಜು ಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಆಯಾ ವಿಶ್ವ ವಿದ್ಯಾಲಯಗಳ ಕರ್ತವ್ಯ. ಆದರೆ, ಅದನ್ನೇ ಸಮರ್ಪಕವಾಗಿ ಮಾಡಿಲ್ಲ ಎಂಬ ಆರೋಪ ವಿದ್ಯಾರ್ಥಿಗಳಿಂದಲೇ ಕೇಳಿಬರುತ್ತಿದೆ.
ನಕಲಿ ಪದವಿ ಪ್ರಮಾಣ ಪತ್ರ ದಂಧೆ ತಡೆಯಲು 2017ರಲ್ಲಿ ಪದವಿ ಪಡೆದವರಿಗೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ತಂತ್ರಜ್ಞಾನ ಆಧಾರಿತ ಪ್ರಮಾಣ ಪತ್ರ ನೀಡುವಂತೆ ವಿ.ವಿ.ಗಳಿಗೆ ರಾಜ್ಯ ಸರಕಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿ.ವಿ.ಯು ಎನ್‌ಎಫ್‌ಸಿ ತಂತ್ರಜ್ಞಾನ ಹೊಂದಿರುವ ಪ್ರಮಾಣ ಪತ್ರ ಮುದ್ರಿಸುವ ಸಂಸ್ಥೆಗಳಿಂದ ಟೆಂಡರ್ ಕರೆದಿತ್ತು. ಎಂಎಸ್‌ಐಎಲ್ ಸೇರಿದಂತೆ ವಿವಿಧ ಕಂಪೆನಿಗಳು ಅರ್ಜಿ ಸಲ್ಲಿಸಿದ್ದು, ಕೊನೆಗೆ ಹೈದರಾಬಾದ್‌ನ ಸಂಸ್ಥೆಯೊಂದಕ್ಕೆ ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಎಂಎಸ್‌ಐಎಲ್ ಕೋರ್ಟ್ ಮೆಟ್ಟಿಲೇರಿತು. ಈ ಹಿನ್ನೆಲೆಯಲ್ಲಿ ಪದವಿ ಪ್ರಮಾಣ ಪತ್ರ ಮುದ್ರಿಸಲು ತಡ ವಾಯಿತು ಎನ್ನುತ್ತಾರೆ ವಿ.ವಿ. ಮೂಲಗಳು.
Related Articles
Advertisement
ಹೊಸ ಟೆಂಡರ್ಮೊದಲಿನ ಯೋಜನೆಯನ್ನು ಕೈ ಬಿಟ್ಟ ಕಾರಣ, ಹೊಸ ಟೆಂಡರ್ ಕರೆಯಲಾಗಿದ್ದು ಚೆನ್ನೈ ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಶೀಘ್ರವೇ ನೀಡಲಾಗುವುದು ಎನ್ನುತ್ತಾರೆ ಅಧಿಕಾರಿಗಳು. 2017ರಿಂದ ಪದವಿ ಪಡೆದು ಪದವಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಶೇ. 10ರಷ್ಟು ಮಂದಿಗೆ ಪ್ರಮಾಣ ಪತ್ರ ನೀಡಲು ಬಾಕಿಯಿದೆ. ಉಳಿದವರಿಗೆ ಎನ್‌ಎಫ್ಸಿ ತಂತ್ರಜ್ಞಾನವಿಲ್ಲದ ಪ್ರಮಾಣ ಪತ್ರ ಮುದ್ರಿಸಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಪದವೀಧರರಿಗೆ ತಲುಪಲಿದೆ.
– ಪ್ರೊ| ವಿ. ರವೀಂದ್ರಾಚಾರಿ, ಪರೀಕ್ಷಾಂಗ ಕುಲಸಚಿವರು, ಮಂಗಳೂರು ವಿಶ್ವ ವಿದ್ಯಾನಿಲಯ ವಸಂತ ಕೊಣಾಜೆ