Advertisement

Fishing ಮಂಗಳೂರು, ಉಡುಪಿ: ಮೀನುಗಾರರಿಂದ ಸಮುದ್ರಪೂಜೆ

12:26 AM Aug 20, 2024 | Team Udayavani |

ಮಂಗಳೂರು/ಮಲ್ಪೆ: ಹೊಸ ಋತುವಿನ ಮೀನುಗಾರಿಕೆಗೆ ತೆರಳಲು ಮುನ್ನ ಗಂಗಾಮಾತೆಗೆ ಕ್ಷೀರ, ಫಲಪುಷ್ಪ ಅರ್ಪಿಸಿ ಸಮುದ್ರಪೂಜೆಯನ್ನು ಸೋಮ ವಾರ ಮಂಗಳೂರಿನ ತಣ್ಣೀರುಬಾವಿ ಹಾಗೂ ಉಡುಪಿಯ ಮಲ್ಪೆ ವಡಭಾಂಡೇಶ್ವರ ಕಡಲತೀರದಲ್ಲಿ ನಡೆಸಲಾಯಿತು.

Advertisement

ಏಳುಪಟ್ಲ ಮೊಗವೀರ ಸಂಯುಕ್ತ ಸಭಾ (ಕದ್ರಿ) ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನೆರವೇರಿತು.

ಭಜನ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮಿ ಮಾತೆಗೆ ಪೂಜೆ ನಡೆಯಿತು. ಬಳಿಕ ಕದ್ರಿ ಕದಳೀ ಮಠದ ಮಠಾಧೀಶ ರಾಜಯೋಗಿ ನಿರ್ಮಲಾನಾಥ್‌ಜೀ ಮಹಾರಾಜ್‌ ನೇತೃತ್ವದಲ್ಲಿ ಸಮುದ್ರಕ್ಕೆ ಹಾಲು-ಹಣ್ಣು ಹಂಪಲು ಸಮರ್ಪಿಸಲಾಯಿತು.

ಮತ್ಸ್ಯೋದ್ಯಮಿ ಸಂದೀಪ್‌ ಪುತ್ರನ್‌,ಉಳ್ಳಾಲ, ಹೊಗೆಬಜಾರ್‌ ಮೊಗವೀರ ಗ್ರಾಮ ಸಭಾದ ಅಧ್ಯಕ್ಷ ಹೇಮಂತ್‌ ಕುಮಾರ್‌ ಮುಖ್ಯ ಅತಿಥಿಗಳಾಗಿದ್ದರು.

ಸಭಾದ ಅಧ್ಯಕ್ಷ ಬೋಳಾರ ಸುಭಾಶ್ಚಂದ್ರ ಕಾಂಚನ್‌ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪದಾಧಿಕಾರಿಗಳಾದ ಹೇಮಚಂದ್ರ ಸಾಲ್ಯಾನ್‌ ಪಡುಹೊಗೆ, ರಂಜನ್‌ ಕಾಂಚನ್‌ ಬೋಳೂರು, ಸುರೇಶ್‌ ಸುವರ್ಣ ನೀರೇಶ್ವಾಲ್ಯ, ಶ್ಯಾಮ ಸುಂದರ್‌ ಕಾಂಚನ್‌, ಕುದ್ರೋಳಿ, ಕದ್ರಿ ಕ್ಷೇತ್ರದ ಪ್ರತಿನಿಧಿ ನಾರಾಯಣ ಕೋಟ್ಯಾನ್‌ ಬೊಕ್ಕಪಟ್ಲ, ಕರ್ನಾಟಕ ಪಸೀìನ್‌ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್‌ ಕುಮಾರ್‌ ಕರ್ಕೇರ, ಉರ್ವ ಏಳುಪಟ್ಣ ಮೊಗವೀರ ಸಭಾದ ಲೋಕೇಶ್‌ ಸುವರ್ಣ, ವಿವಿಧ ಗ್ರಾಮಗಳ ಗುರಿಕಾರರು, ಪ್ರತಿನಿಧಿಗಳು, ಸದಸ್ಯರು ಹಾಗೂ ಮಹಿಳಾ ಸಂಘಗಳ ಸದಸ್ಯೆಯರು ಈ ಸಂದರ್ಭ ಉಪಸ್ಥಿತರಿದ್ದರು. 7 ಪಟ್ಣ ಮೊಗವೀರ ಸಭಾದ ವತಿಯಿಂದ ಕದ್ರಿ ಮಠ ಮತ್ತು ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ನಡೆಯಿತು. ಪ್ರಧಾನ ಕಾರ್ಯದರ್ಶಿ ಯಶವಂತ ಬೋಳೂರು ವಂದಿಸಿದರು.

Advertisement

ವಡಭಾಂಡೇಶ್ವರದಲ್ಲಿ
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ವಡಭಾಂಡ ಬಲರಾಮ ದೇವಸ್ಥಾನದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ಮತ್ತು ದೇಗುಲದ ಆನುವಂಶಿಕ ಅರ್ಚಕ ಮತ್ತು ಮೊಕ್ತೇಸರ ಟಿ. ಶ್ರೀನಿವಾಸ್‌ ಭಟ್‌ ಪೌರೋಹಿತ್ಯದಲ್ಲಿ ಬೆಳಗ್ಗೆ ವಡಭಾಂಡ ಬಲರಾಮ ಹಾಗೂ ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೀನುಗಾರರು ಶೋಭಾಯಾತ್ರೆಯಲ್ಲಿ ತೆರಳಿ ವಡ ಭಾಂಡೇಶ್ವರ ಸಮುದ್ರತೀರದಲ್ಲಿ ಪೂಜೆ ನಡೆಸಿ ಕ್ಷೀರ, ಫಲಪುಷ್ಪ, ಸೀಯಾಳವನ್ನು ಸಮುದ್ರ ರಾಜನಿಗೆ ಸಮರ್ಪಿಸಿದರು.

ಶಾಸಕ ಯಶಪಾಲ್‌ ಸುವರ್ಣ ಮಾತನಾಡಿ, ಮೀನುಗಾರಿಕೆಯನ್ನು ಪ್ರಾರಂಭಿಸುವ ಮುನ್ನ ಈ ಹಿಂದೆ ನಡೆದುಕೊಂಡು ಬಂದ ಸಂಪ್ರದಾಯ ವನ್ನು ಮೀನುಗಾರರು ಮುಂದುವರಿಸಿ ಕೊಂಡು ಬಂದಿದ್ದಾರೆ. ಯಾವುದೇ ಅವಘಡ ಸಂಭವಿಸದೆ ಈ ಬಾರಿ ಸಮೃದ್ಧ ಮೀನುಗಾರಿಕೆ ಆಗು ವಂತೆ ಗಂಗಾಮಾತೆ ಅನುಗ್ರಹಿಸಲಿ ಎಂದು ಹಾರೈಸಿದರು.

ಮೀನುಗಾರ ಸಂಘದ ಅಧ್ಯಕ್ಷರು ದಯಾನಂದ ಸುವರ್ಣ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಹರಿಯಪ್ಪ ಕೋಟ್ಯಾನ್‌, ಮೀನುಗಾರ ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಕೋಶಾಧಿಕಾರಿ ಪ್ರಕಾಶ್‌ ಬಂಗೇರ, ಸಂಘದ ಮಾಜಿ ಅಧ್ಯಕ್ಷರಾದ ಕೃಷ್ಣ ಎಸ್‌. ಸುವರ್ಣ, ಹಿರಿಯಣ್ಣ ಟಿ. ಕಿದಿಯೂರು, ಸತೀಶ್‌ ಕುಂದರ್‌, ಶಿವಪ್ಪ ಟಿ. ಕಾಂಚನ್‌, ಕೇಶವ ಎಂ. ಕೋಟ್ಯಾನ್‌ ಸಹಿತ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next