Advertisement

ಮಂಗಳೂರು: ಇಬ್ಬರು ಗಾಂಜಾ ವ್ಯಸನಿಗಳ ಬಂಧನ

03:07 PM Dec 08, 2019 | Naveen |

ಮಂಗಳೂರು: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆದಳ  ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

Advertisement

ಮುಕ್ಕದ ಮೊಹಮ್ಮದ್ ರಾಜಿಕ್ ಯಾನೆ ರಾಜಿಕ್ (32), ಸುರತ್ಕಲ್ ಚೆಳ್ಯಾರಿನ ನಿಖಿಲ್ (19) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ಗ್ರಾಮದ ಚನಲ್ ಎಂಬಲ್ಲಿ ಶನಿವಾರದಂದು ಈ ಇಬ್ಬರು ಗಾಂಜಾ ಸೇವನೆ ಮಾಡುತ್ತಿದ್ದರು.

ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು,  NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next