Advertisement

ಸಹಜ ಸ್ಥಿತಿಗೆ ಮಂಗಳೂರು

11:06 PM Dec 22, 2019 | Team Udayavani |

ಮಂಗಳೂರು: ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಭಾನುವಾರ ಹಗಲು ಕರ್ಫ್ಯೂ ಸಡಿಲಿಸಿದ್ದು, ನಗರದ ಜನಜೀವನ ಸಾಮಾನ್ಯ ಸ್ಥಿತಿಯಲ್ಲಿತ್ತು. ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಕರ್ಫ್ಯೂ ಇರದ ಕಾರಣ ಬಸ್‌ ಸಂಚಾರ, ಜನರ ಓಡಾಟ ಎಂದಿನಂತೆ ಕಂಡು ಬಂತು.

Advertisement

ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದು, ಸಾರ್ವಜನಿಕರು ಅವಶ್ಯಕ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು. ಖಾಸಗಿ ಸಿಟಿ ಮತ್ತು ಸರ್ವೀಸ್‌ ಬಸ್‌ ಸಂಚಾರ ಎಂದಿ ನಂತಿತ್ತು. ಜನರ ಓಡಾಟ ಸ್ವಲ್ಪ ಕಡಿಮೆ ಆಗಿದ್ದರಿಂದ ಬಸ್ಸುಗಳು ಸಂಪೂರ್ಣ ಪ್ರಮಾಣದಲ್ಲಿ ಸಂಚರಿಸಿಲ್ಲ. ಕೆಎಸ್ಸಾರ್ಟಿಸಿ ಬಸ್ಸುಗಳ ಓಡಾಟವೂ ವಿರಳವಾಗಿತ್ತು.

ಮಂಗಳೂರು ಪೊಲೀಸ್‌ ಕಮಿಷನ ರೇಟ್‌ ವ್ಯಾಪ್ತಿಯಲ್ಲಿ ಹಾಕಿರುವ ಕರ್ಫ್ಯೂ ಡಿ.22ರ ಸಂಜೆ 6ರಿಂದ ಡಿ.23ರ ಬೆಳಗ್ಗೆ 6 ಗಂಟೆ ತನಕ ಜಾರಿಯಲ್ಲಿ ಇರುತ್ತದೆ. ಆ ಬಳಿಕ ಇರುವುದಿಲ್ಲ. ಆದರೆ, ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಮುಂದುವರಿಯಲಿದೆ. ಡಿ.19ರ ಘಟನೆಗೆ ಸಂಬಂಧಿಸಿ ಪೊಲೀಸ್‌ ಗುಂಡೇಟಿಗೆ ಬಲಿಯಾದ ಇಬ್ಬರನ್ನು ಒಳಗೊಂಡಂತೆ 70ಕ್ಕೂ ಹೆಚ್ಚು ಮಂದಿ ಯನ್ನು ಆರೋಪಿಗಳನ್ನಾಗಿ ಹೆಸರಿಸಿ, ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next