Advertisement
ನಗರದ ನಂತೂರಿನಲ್ಲಿರುವ ಸಂದೇಶ ಕಲಾ ಕೇಂದ್ರದಲ್ಲಿ ಸೋಮವಾರ ರಾಜೇಶ್ ವೇಣೂರು ನಿರ್ದೇಶನದ “ಅಸತೋಮ ಸದ್ಗಮಯ’ ಕನ್ನಡ ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಚಲನಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕರಾವಳಿ ಗರಿಗೆ ಹೆಮ್ಮೆಯ ಸಂಗತಿ ಎಂದರು.ನಾನು ಕೂಡ ಚಲನಚಿತ್ರವನ್ನು ವೀಕ್ಷಿಸುತ್ತೇನೆ. ಚಲನಚಿತ್ರ ಕ್ಷೇತ್ರದಲ್ಲಿ ಸಾಧಿಸಬೇಕು ಎಂಬ ಛಲ ಹೊಂದಿದ ಹೊಸ ತಂಡವನ್ನು ಬೆನ್ನುತಟ್ಟುವ ಅಗತ್ಯವಿದೆ ಎಂದು ಹೇಳಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಚಲನಚಿತ್ರ ಕ್ಷೇತ್ರ ಮಂಗಳೂರನ್ನು ಕೇಂದ್ರಬಿಂದುವಾಗಿಸಿದೆ. ಇಲ್ಲೇ ಅನೇಕ ಚಲನಚಿತ್ರಗಳು ನಿರ್ಮಾಣವಾಗುತ್ತಿರುವುದು ಖುಷಿಯ ಸಂಗತಿ ಎಂದರು. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ, ಇಂದು ಶಾಲೆಯಲ್ಲಿ ಪಾಠದ ವಿಚಾರಗಳನ್ನು ಹೇಳಿಕೊಡಲಾಗುತ್ತಿದೆಯೇ ಹೊರತು ಸಂಸ್ಕಾರ ಹೇಳಿ ಕೊಡಲಾಗುತ್ತಿಲ್ಲ. ಈ ಹಿಂದೆ ಹಿರಿಯರು ಪಾಠದಲ್ಲಿ ಹಿಂದಿದ್ದರೂ ಸಂಸ್ಕಾರದಲ್ಲಿ ಬುದ್ಧಿವಂತರಿದ್ದರು ಎಂದು ತಿಳಿಸಿದರು. ಚಲನಚಿತ್ರ ನಟ ರಾಜ್ ಬಿ. ಶೆಟ್ಟಿ ಮಾತನಾಡಿ, ಮಾತೃಭಾಷೆಯ ಚಿತ್ರ ಪ್ರಪಂಚದಲ್ಲಿಯೇ ಹೆಸರು ಮಾಡಬೇಕು ಎಂಬ
ಆಸೆ ನನ್ನದು. ನಿರ್ದೇಶಕ ರಾಜೇಶ್ ವೇಣೂರು ಅವರು ಈ ಹಿಂದೆ ಅನೇಕ ಸಾಕ್ಷéಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಸತೋಮ ಸದ್ಗಮಯ ಕರಾವಳಿಗರೇ ಸೇರಿ ನಿರ್ಮಿಸಿದ ಚಿತ್ರ. ರಾಜ್ಯದ ಜನತೆಯ ಆಶೀರ್ವಾದ ಬೇಕು ಎಂದರು. ಚಿತ್ರದ ನಿರ್ದೇಶಕ ರಾಜೇಶ್ ವೇಣೂರು ಮಾತನಾಡಿ, ಅಸತೋಮ ಸದ್ಗಮಯ ಚಲನಚಿತ್ರದಲ್ಲಿ ಸಂಬಂಧ, ಕಳೆಯುತ್ತಿರುವ ಜೀವನ ಮೌಲ್ಯಗಳ ಬಗ್ಗೆ ಕತೆ ಹೆಣೆಯಲಾಗಿದೆ. ಚಿತ್ರದ ಶೇ. 50ರಷ್ಟು ಚಿತ್ರೀಕರಣವನ್ನು ಕರಾವಳಿ ಪ್ರದೇಶದಲ್ಲೇ ಮಾಡಿದ್ದೇವೆ. ಚಿತ್ರದಲ್ಲಿ ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ನಾಯಕನಾಗಿ ಯುವ ಪ್ರತಿಭೆ ಕಿರಣ್ ರಾಜ್ ನಟಿಸುತ್ತಿದ್ದಾರೆ ಎಂದರು.
Related Articles
Advertisement