Advertisement
ಕಟ್ಟಡ ಉದ್ಘಾಟನೆಯಾದ ಬಳಿಕ ತಾಲೂಕು ಪಂಚಾ ಯತ್ ಆಡಳಿತ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನುವ ಮಾತುಗಳೂ ಕೇಳಿ ಬಂದಿದೆ. ತಾಲೂಕು ಮಟ್ಟದ ವಿವಿಧ ಸಭೆಗಳಾದ ಎಸ್.ಸಿ., ಎಸ್.ಟಿ. ಕುಂದುಕೊರತೆ ಸಭೆ, ಶಾಸಕರ ಸಭೆಗಳು, ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನ ಸಭೆಗಳು ಇದೇ ಸಭಾಂಗಣದಲ್ಲಿ ನಡೆಯುತ್ತವೆ. ಆದರೆ ಟೇಬಲ್‌ಗಳಲ್ಲಿ ಮೈಕ್ ವ್ಯವಸ್ಥೆ ಇಲ್ಲದೆ, ಓರ್ವ ಸಿಬಂದಿ ಮೈಕ್ ಹಿಡಿದುಕೊಂಡು ಮಾತನಾಡುವವ ಬಳಿಗೆ ಅಡ್ಡಾಡುವುದು ಸಾಮಾನ್ಯವಾಗಿದೆ. ಒಂದು ಸೌಂಡ್ ಬಾಕ್ಸ್ , ಎರಡು ಮೈಕ್ ಮೂಲಕ ಸಭೆ ನಡೆಯುತ್ತದೆ.
ತಾಲೂಕು ಪಂಚಾಯತ್ ಕಚೇರಿ ಸಭಾಂಗಣ ನವೀಕರಣಕ್ಕೆ ಸಂಬಂಧಿಸಿದಂತೆ ಈಗಾಗಾಲೇ ಚಿಂತನೆ ನಡೆಸಲಾಗಿದೆ. ಸಿಎಸ್‌ಆರ್ ಅನುದಾನ ಲಭ್ಯವಾಗುವ ಕುರಿತು ಪ್ರಯತ್ನ ನಡೆಯುತ್ತಿದ್ದು, ಸಿಕ್ಕಿದರೆ ಅವಶ್ಯಕ ಸಲಕರಣೆಗಳನ್ನು ಅಳವಡಿಸಬಹುದು. ಒಂದು ವೇಳೆ ಸಾಧ್ಯವಾಗದಿದ್ದರೆ, ಸರಕಾರದ ಅನುದಾನಕ್ಕೆ ಕಾಯಬೇಕಾಗಿದೆ.
-ಲೋಕೇಶ್, ಕಾರ್ಯನಿರ್ವಹಣಾಧಿಕಾರಿ, ಮಂಗಳೂರು ತಾ.ಪಂ.
Related Articles
Advertisement
ತಾಲೂಕು ಪಂಚಾಯತ್ ಕಟ್ಟಡ 4.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 2020ರ ಫೆ.12ರಂದು ಉದ್ಘಾಟನೆಯಾಗಿತ್ತು. ಇದೀಗ ಸುಮಾರು 3 ವರ್ಷಗಳು ಸಂದಿವೆ. ಒಟ್ಟು ಮೂರು ಅಂತಸ್ತಿನ ಕಟ್ಟಡದಲ್ಲಿ ತಳ ಅಂತಸ್ತಿನಲ್ಲಿ ಆಡಳಿತ ಕಚೇರಿ, ಕಾರ್ಯನಿರ್ವಹಣಾಧಿಕಾರಿ ಕಚೇರಿ, ಲೆಕ್ಕಪತ್ರ ಶಾಖೆ ಮೊದಲಾದವುಗಳಿವೆ. ಮೊದಲ ಅಂತಸ್ತಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿ, ಸ್ಥಾಯೀ ಸಮಿತಿ ಮೀಟಿಂಗ್ ಹಾಲ್ ಮೊದಲಾದವುಗಳಿವೆ. ಎರಡನೇ ಮಹಡಿಯಲ್ಲಿ 600 ಚ.ಅಡಿ ವಿಸ್ತೀರ್ಣದ 300 ಜನರು ಆಸೀನರಾಗಬಹುದಾದ ಸಭಾಂಗಣ ನಿರ್ಮಿಸಲಾಗಿದೆ.
~ಭರತ್ ಶೆಟ್ಟಿಗಾರ್