Advertisement

ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಎಲ್ಲಾ ಮಹಾತ್ಮರ ಜಯಂತಿಯನ್ನು ಆಚರಿಸಿದ್ದೇವೆ: ಸಿದ್ದರಾಮಯ್ಯ

10:09 AM Nov 07, 2019 | Naveen |

ಮಂಗಳೂರು: ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಕೇವಲ ಟಿಪ್ಪು ಜಯಂತಿ ಮಾತವಲ್ಲ ಎಲ್ಲಾ ಮಹಾತ್ಮರ ಜಯಂತಿಯನ್ನು ಆಚರಿಸಿದ್ದೇವೆ. ಬಿಜೆಪಿಯವರು ಸಂಕುಚಿತ ಮನೋಭಾವದಿಂದ ಟಿಪ್ಪು ಜಯಂತಿ ಮಾಡುತ್ತಿಲ್ಲ. ಸುಳ್ಳು ಎಂಬುದು ಬಿಜೆಪಿಯವರ ಅನ್ವರ್ಥನಾಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಅವರು ಮಂಗಳೂರಿನಲ್ಲಿ ಬುಧವಾರದಂದು ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬಿಜೆಪಿಗರೇ ಒಳಗಡೆ ಕುತಂತ್ರ ಮಾಡಿ ಆಡಿಯೋ ಲೀಕ್ ಮಾಡಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಗೆ ಸಿದ್ದರಾಮಯ್ಯ ಶನಿ ಇದ್ದ ಹಾಗೇ ಎಂಬ ಜನಾರ್ಧನ ಪೂಜಾರಿ ಹೇಳಿಕೆ ವಿಚಾರ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದ ಸಿದ್ದರಾಮಯ್ಯ ಕೊನೆಗೆ ಅವರೇ ಕಾಂಗ್ರೆಸ್ ಗೆ ಮತ ನೀಡಿ ಎಂದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಮಾಜಿ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮೊದಲಾದವರು ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next