Advertisement
ಆದಿಜಾಂಬವ ಮೂಲ ಪುರುಷರಾಗಿದ್ದು, ಭೂಮಿ ಹುಟ್ಟುವ 6 ತಿಂಗಳು ಮೊದಲೇ ಆತನ ಜನನ. ಆಗ ಎಲ್ಲ ಕಡೆಗಳಲ್ಲಿ ಸಮುದ್ರವಿತ್ತು. ಕಡಲಿನಲ್ಲಿ ಹುಟ್ಟಿದ ಕಾರಣ ಆತನಿಗೆ ಜಾಂಬವ ಎನ್ನುವ ಹೆಸರು ಬಂತು. ಅನಂತರದಲ್ಲಿ ಆದಿಮಾಯೆ, ಬ್ರಹ್ಮ,ವಿಷ್ಣು ಮಹೇಶ್ವರರ ಜನನವಾಗುತ್ತದೆ ಹೀಗೆಂದು ದಕ್ಕಲ ಜಾಂಬವ ಪುರಾಣದ 18 ಯುಗಗಳ ಕತೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟವರು ದಕ್ಕಲ ಮುನಿಸ್ವಾಮಿ.
ಯಕ್ಷಗಾನ ಆರಾಧನಾ ಕಲೆ ಯಾಗಿದ್ದು, ಸಾವಿರಾರು ಮಂದಿ ಅದರಿಂದಲೇ ಜೀವನ ನಡೆಸುತ್ತಿದ್ದಾರೆ. ಇಂತಹ ಕಲೆಯನ್ನು ಜಾಹೀರಾತು ಮತ್ತು ವೇದಿಕೆಗಳಲ್ಲಿ ಹಾಸ್ಯದ ರೀತಿಯಲ್ಲಿ ಬಿಂಬಿಸುತ್ತಿರುವುದು ಖಂಡನೀಯ. ಚೌಕಟ್ಟು ಮೀರಿದರೆ ಅದು ಕಲೆಗೆ ಅಪಚಾರ ಮಾಡಿದಂತೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಲಾಪ್ರೇಮಿಗಳು, ಸಾರ್ವಜನಿಕರ ಸಹಕಾರವೂ ಆಗತ್ಯ ಎಂದರು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
Related Articles
Advertisement
ಲಿಟ್‌ಫೆಸ್ಟ್ ನ ಎರಡನೇ ದಿನದ ಗೋಷ್ಠಿಯಲ್ಲಿ “ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ’ ವಿಚಾರವಾಗಿ ಅವರು ಮಾತನಾಡಿದರು. ಯಕ್ಷಗಾನವನ್ನು ಕರಾವಳಿಗೆ ಮಾತ್ರ ಸೀಮಿತಗೊಳಿಸದೆ ರಾಜ್ಯ ಕಲೆಯಾಗಿ ಘೋಷಣೆ ಮಾಡವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು. ಮಹಿಳಾ ಯಕ್ಷಗಾನ ಕಲಾವಿದೆ ಸಿಎ ವೃಂದಾ ಕೊನ್ನಾರ್ ಅವರು ಮಾತನಾಡಿ, ಯಕ್ಷಗಾನದಲ್ಲಿ ಮಹಿಳೆಯರೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಹಂತದಲ್ಲಿದ್ದು, ಆದರೂ ಪುರುಷ ಪಾತ್ರ ಮಾಡುವ ಮಹಿಳೆಯರ ಸ್ವರ, ಕಾಲುಂಗುರ, ಮೂಗುತ್ತಿಯಂತಹ ಆಭರಣಗಳ ಬಗ್ಗೆ ಮಾತನಾಡುತ್ತಿರುವುದು ಕೇಳಿ ಬರುತ್ತಿದೆಯಾದರೂ, ಅದನ್ನು ಯಥಾಸ್ಥಿತಿ ಒಪ್ಪಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಪುರುಷೋತ್ತಮ ಭಂಡಾರಿ ಸಮನ್ವಯಕಾರರಾಗಿದ್ದರು.
ಭಾರತದ ರಕ್ಷಣ ಸಾಮರ್ಥ್ಯ ವೃದ್ಧಿಭಾರತ-ಚೀನಾ ಗಡಿಯಲ್ಲಿ ಚೀನಾ 2020ರಲ್ಲಿ ಭಾರೀ ಸಂಖ್ಯೆಯ ಸೇನೆ, ಸೇನಾ ಸೌಲಭ್ಯವನ್ನು ನಿಯೋಜಿಸಿತು. ಇದಕ್ಕೆ ಉತ್ತರವಾಗಿ ಭಾರತವೂ ಸೇನಾ ಸೌಲಭ್ಯವನ್ನು ಗಡಿಯತ್ತ ತಿರುಗಿಸಿತು. ಭಾರತ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಚೀನಾ ಈಗ ಅರ್ಥ ಮಾಡಿಕೊಂಡಿದೆ. ಭಾರತದ ವಾಯುಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವಷ್ಟು ಈಗ ಸಿದ್ಧವಾಗಿದೆ. ಹೀಗಾಗಿ ಯುದ್ಧ ನಡೆಸುವ ಬಗ್ಗೆ ಅದು ಮರು ಚಿಂತನೆ ನಡೆಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಎವಿಎಂ ಮನ್‌ಮೋಹನ್ ಬಹದ್ದೂರ್. Armed to lead-Indiaʼs way farward ಎಂಬ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
“ಮಾಧ್ಯಮ ಮತ್ತು ಅಖ್ಯಾಯಿಕೆ- ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಅಸ್ಮಿತೆಗಳು: ಒಂದು ವಿವೇಚನೆ’ ಎಂಬ ವಿಷಯ ಬಗ್ಗೆ ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿದರು. ಮಾಧ್ಯಮ ಕ್ಷೇತ್ರ ಮಾತ್ರವಲ್ಲ ಸಾಮಾಜಿಕ ಜಾಲತಾಣ, ಡಿಜಿಟಲ್ ವೇದಿಕೆಗಳಲ್ಲೂ ಅಖ್ಯಾಯಿಕೆಗಳು ಇರುತ್ತವೆ. ಅದು ಅವರವರ ದೃಷ್ಟಿಕೋನವನ್ನು ಹೊಂದಿಕೊಂಡಂತೆ ಇರುತ್ತದೆ. ಆದರೆ ಅವುಗಳ ನಿಜ ಸ್ವರೂಪವನ್ನು ಅರ್ಥೈಸಲು ಯಾರೂ ಮುಂದಾಗುವುದಿಲ್ಲ ಎಂದರು.
ರಂಗದ ಘನತೆಯನ್ನೂ ಎತ್ತಿಹಿಡಿಯಲು ಸಾಧ್ಯವಿದೆ ಎಂದರು. ರಾಧಾಕೃಷ್ಣ ಹೊಳ್ಳ ಸಮನ್ವಯಕಾರರಾಗಿದ್ದರು. ಪ್ರತಿಯೊಬ್ಬ ಯೋಧನಲ್ಲಿಯೂ ಇದೆ ಅದ್ಭುತ ಕತೆ
“ಸ್ಟೋರೀಸ್ ಆಫ್ ವಾರಿಯರ್’ (ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್) ಸಂವಾದದಲ್ಲಿ ಶಿವ್ ಆರೂರ್ ಅವರು, ಸುಮಾರು 18 ವರ್ಷಗಳಿಂದ ಮಿಲಿಟರಿ ವ್ಯವಹಾರಗಳ ವರದಿ ಮಾಡುತ್ತಿದ್ದೇನೆ. ನಿರಂತರವಾಗಿ ಯೋಧರನ್ನು ಭೇಟಿ ಯಾಗುತ್ತಾ ಬಂದಿದ್ದೇನೆ. ಪ್ರತಿಯೊಬ್ಬ ಯೋಧನ ಬಳಿಯೂ ಒಂದು ಅದ್ಭುತ ಕತೆಯಿರುತ್ತದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಹಾಗೂ ಶೌರ್ಯಚಕ್ರದಂತಹ ಪ್ರಶಸ್ತಿಗಳು ಬಂದಾಗ ಮಾತ್ರ ನಾವು ಯೋಧರನ್ನು ನೆನಪಿಸಿಕೊಳ್ಳುತ್ತೇವೆ. ಯೋಧರ ಸಂಪೂರ್ಣ ಕತೆ ಕೇಳುವ ಹಸಿವು ನನಗಿತ್ತು. ಅದುವೇ ಪುಸ್ತಕ ಬರೆಯಲು ಪ್ರೇರೇಪಿಸಿತು.