Advertisement
ಮಂಗಳೂರಿನಲ್ಲಿ ತಲಪಾಡಿಯಿಂದ ತೋಕೂರು ವರೆಗಿನ ಕೇವಲ 13 ಕಿ.ಮೀ. ರೈಲು ಮಾರ್ಗ ಪಾಲಕ್ಕಾಡ್ ರೈಲ್ವೇ ವಿಭಾಗ ವ್ಯಾಪ್ತಿಗೆ ಬರುತ್ತದೆ. ಉಳಿದಂತೆ ಕೊಂಕಣ ರೈಲ್ವೇ ನಿಗಮ ಮತ್ತು ಎಚ್‌ಎಂಆರ್‌ಡಿಸಿ (ಹಾಸನ ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮ) ಅಧೀನದಲ್ಲಿದೆ. ಎರಡು ನಿಗಮಗಳ ವ್ಯಾಪ್ತಿಯ ರೈಲು ಮಾರ್ಗವನ್ನು ಪ್ರತ್ಯೇಕಿಸುವುದು ತಾಂತ್ರಿಕವಾಗಿ ಸುಲಭ ಸಾಧ್ಯವಲ್ಲ. ಮಾತ್ರವಲ್ಲ ಪಾಲಕ್ಕಾಡ್ ವಿಭಾಗದಲ್ಲಿರುವ ಕೇವಲ 13 ಕಿ.ಮೀ. ರೈಲು ಮಾರ್ಗವನ್ನು ಪ್ರತ್ಯೇಕಿಸಿ ಅದಕ್ಕಾಗಿಯೇ ಒಂದು ವಿಭಾಗ ರಚನೆ ಮಾಡುವುದು ಸಾಧುವಲ್ಲ. ಆದರೆ ಚೆನ್ನೈ ವಲಯದಡಿ ಸಬ್ ಡಿವಿಜನ್ ರಚಿಸಲು ಸಾಧ್ಯವಿದೆ. ಅದರಿಂದ ಕೆಲವು ಪ್ರಯೋಜನಗಳು ಮಂಗಳೂರಿಗೆ ಲಭಿಸಲಿವೆ. ಹಾಗಾಗಿ ಸಬ್ ಡಿವಿಜನ್‌ಗೆ ಪ್ರಯತ್ನಿಸಬಹುದು ಎಂದು ವಿವರಿಸಿದರು.
ಅಡಿಕೆ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಭಾರತಕ್ಕೆ ವಿದೇಶಗಳಿಂದ ಅಡಿಕೆ ಆಮದು ಸಂಪೂರ್ಣವಾಗಿ ನಿಲ್ಲಿಸುವಂತೆ ತಾನು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಕೊಡಗು-ಮೈಸೂರು ಸಂಸದ ಪ್ರತಾಪಸಿಂಹ ಅವರನ್ನು ಒಳಗೊಂಡ ನಿಯೋಗ ಇತ್ತೀಚೆಗೆ ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ನಳಿನ್ ತಿಳಿಸಿದರು.