Advertisement

ಮಂಗಳೂರು: ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ

01:22 AM Jun 03, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸಿಟಿ ಬಸ್‌ ಸಂಚಾರ ಆರಂಭಗೊಂಡ ಎರಡನೇ ದಿನವಾದ ಮಂಗಳವಾರ ಪ್ರಯಾಣಿಕರ ಸಂಖ್ಯೆ ತುಸು ಏರಿಕೆಯಾಗಿದೆ.

Advertisement

ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಸಾಮಾಜಿಕ ಅಂತರ ಪಾಲಿಸಬೇಕೆಂಬ ನಿಯಮವಿದ್ದರೂ,ಕೆಲವು ಬಸ್‌ಗಳಲ್ಲಿ ಇದು ಕಂಡು ಬರುತ್ತಿಲ್ಲ.

ಲಾಕ್‌ಡೌನ್‌ ಸಡಿಲಗೊಂಡ ಕಾರಣ ನಗರದ ಬಹುತೇಕ ಕಂಪೆನಿಗಳು ತೆರೆದಿವೆ. ಇದೇ ಕಾರಣಕ್ಕೆ ಉದ್ಯೋಗಕ್ಕೆಂದು ತೆರಳುವವರು ಬೆಳಗ್ಗೆ ಮತ್ತು ಸಂಜೆ ನಗರದ ಬಸ್‌ ನಿಲ್ದಾಣಗಳಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಮಂಗಳವಾರ ಸುಮಾರು 70 ಖಾಸಗಿ ಬಸ್‌ಗಳು ಉಡುಪಿಗೆ ಸಂಚರಿಸಿವೆ. ಮೂಡುಬಿದಿರೆಗೆ 10, ಕಾರ್ಕಳ-10, ಕೊಣಾಜೆ-10 ಬಜಪೆಗೆ ಹೆಚ್ಚುವರಿ 5 ಬಸ್‌ಗಳು ಸಂಚರಿಸಿವೆ.

ಸ್ಮಾರ್ಟ್‌ ಕಾರ್ಡ್‌ಗೆ ಹೆಚ್ಚಿದೆ ಬೇಡಿಕೆ
ಸಿಟಿ ಬಸ್‌ಗಳಲ್ಲಿ ನಗದು ರಹಿತ ಪ್ರಯಾಣಕ್ಕೆ ಸ್ಮಾರ್ಟ್‌ಕಾರ್ಡ್‌ ಪರಿಚಯಿಸಿದ್ದು, ಬೇಡಿಕೆ ಹೆಚ್ಚುತ್ತಿದೆ. ಕೆಲವು ಬಸ್‌ಗಳಲ್ಲೇ ಕಾರ್ಡ್‌ ನೀಡಲಾ ಗುತ್ತಿದ್ದು, ಕೆಲವೆಡೆ ಬೂತ್‌ಗಳಲ್ಲೂ ಮಾರಲಾಗುತ್ತಿದೆ. ಮಂಗಳೂರಿನಲ್ಲಿ ಸದ್ಯ 100ಕ್ಕೂ ಹೆಚ್ಚು ಮಂದಿ ಸ್ಮಾರ್ಟ್‌ಕಾರ್ಡ್‌ ಖರೀದಿಸಿದ್ದಾರೆ.

 ತುಸು ಏರಿಕೆ
ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಸು ಏರಿಕೆಯಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
-ದಿಲ್‌ರಾಜ್‌ ಆಳ್ವ,
ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next