Advertisement
ಪೊಲೀಸರು ಸಾರ್ವಜನಿಕರ ಸ್ನೇಹಿ ಯಾಗುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವ ಸಲುವಾಗಿ ಅಳವಡಿಸಿದ್ದ ಡಿಜಿಟಲ್ ಡಿಸ್‌ಪ್ಲೇಗಳಲ್ಲಿ ಇದೀಗ ‘ಯಾವುದೇ ರೀತಿಯ ದೂರುಗಳಿದ್ದರೆ, ಅಪರಾಧ ನಡೆ ಯುತ್ತಿದ್ದರೆ compolmgc@ksp.gov.inಮೈಲ್ ಮಾಡಿ, 9480802300 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಿ’ ಎಂಬ ಸಂದೇಶ ಬರುತ್ತಿದೆ.
ವಾಟ್ಸಪ್ ಸಂಖ್ಯೆ ಸಹಿತ ಮೈಲ್ ವಿಳಾಸವನ್ನು ನಗರದ ಡಿಜಿಟಲ್ ಡಿಸ್‌ಪ್ಲೇಗಳಲ್ಲಿ ಅಳವಡಿಸುತ್ತಿದ್ದಂತೆ ಸಾರ್ವಜನಿಕರಿಂದಲೂ ಈಗ ಉತ್ತಮ ಸ್ಪಂದನೆ ಸಿಕ್ಕಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಪೊಲೀಸ್ ಆಯುಕ್ತರು ಸಕ್ರಿಯ ರಾಗುತ್ತಿದ್ದಂತೆ, ಸಾರ್ವಜನಿಕ ರಿಂದಲೂ ನೂರಾರು ದೂರುಗಳು ಬರುತ್ತಿದ್ದು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮುಖ್ಯವಾಗಿ, ಸೋಮವಾರ ಸಾರ್ವಜನಿ ಕರೊಬ್ಬರು ಪೊಲೀಸರ ಅಧಿಕೃತ ಸಾಮಾ ಜಿಕ ಜಾಲ ತಾಣಕ್ಕೆ ನೀಡಿದ್ದ ಮಾಹಿತಿಯ ಪ್ರಕಾರ ಸುರ ತ್ಕಲ್ ಬಳಿಯ ಹೊಟೇಲ್ಗೆ ದಾಳಿ ನಡೆಸಿದ್ದ ಪೊಲೀಸರು 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಗಾಂಜಾ ಸೇವಿಸುತ್ತಿದ್ದ ಮೂವರನ್ನು ಬಂಧಿಸಿ ನಾಲ್ಕು ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಭೇದಿಸಲು ಪೊಲೀಸರಿಗೆ ನೆರವಾಗಿದ್ದು, ಸಾಮಾಜಿಕ ಜಾಲತಾಣ. ಸ್ಥಳೀಯಾಡಳಿತ ಸಕ್ರಿಯವಾಗಿಲ್ಲ
ಇಂದಿನ ತಂತ್ರಜ್ಞಾನ ವ್ಯವಸ್ಥೆಗೆ ತಕ್ಕಂತೆ ಮಹಾನಗರ ಪಾಲಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ‘ಮಂಗಳೂರು ಸಿಟಿ ಕಾರ್ಪೊರೇಷನ್’ ಎಂಬ ಫೇಸ್‌ಬುಕ್ ಪೇಜ್ ಇದ್ದರೂ ಅದರಲ್ಲಿ ಅನಗತ್ಯ ವಿಷಯಗಳು ಶೇರ್ ಆಗುತ್ತಿವೆ. ಇನ್ನು, ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಸಾಮಾಜಿಕ ಜಾಲ ತಾಣಗಳಿಲ್ಲ. ಫೇಸ್‌ಬುಕ್‌ನಲ್ಲಿ ಡಿಸಿ ಕಚೇರಿ ಪೇಜ್ ಇದ್ದರೂ ಅವುಗಳಲ್ಲಿ ಯಾವುದೇ ಪೋಸ್ಟ್ ಗಳನ್ನು ಹಾಕಲಾಗಿಲ್ಲ. ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧಿಕೃತ ಫೇಸ್‌ಬುಕ್ ಜಾಲ ತಾಣವಿದ್ದು, ಮಾಹಿತಿ ಪೋಸ್ಟ್ ಮಾಡಲಾಗುತ್ತಿದೆ.
Related Articles
ಈಗ ಪ್ರಧಾನಿ, ರಾಷ್ಟ್ರಪತಿ ಕಾರ್ಯಾಲಯದಿಂದ ಹಿಡಿದು ಗ್ರಾಮ ಪಂಚಾಯತ್‌ವರೆಗೆ ಎಲ್ಲ ಕಡೆಯು ಅಧಿಕೃತ ಟ್ವಿಟರ್ ಖಾತೆ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.
ಪೊಲೀಸರು ಜನಸ್ನೇಹಿಯಾಗಿ
ನಗರ ಪೊಲೀಸರು ಟ್ವಿಟ್ಟರ್ ಖಾತೆ, ದೂರಿಗಾಗಿ ಇರುವ ವಾಟ್ಸಪ್ ನಲ್ಲಿ ಸಕ್ರಿಯವಾಗಿದೆ. ಟ್ವಿಟ್ಟರ್ ಖಾತೆಯನ್ನು ಖುದ್ದು ನಾನೇ ಪರಿಶೀಲನೆ ಮಾಡುತ್ತಿದ್ದೇನೆ. ಪೊಲೀಸರು ಜನಸ್ನೇಹಿಯಾಗುವ ಉದ್ದೇಶದಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣ ಖಾತೆ ತೆರೆಯಲು ಮನವಿ ಮಾಡುತ್ತೇನೆ.
– ಸಂದೀಪ್ ಪಾಟೀಲ್, ನಗರ ಪೊಲೀಸ್ ಆಯುಕ್ತ
ಸಮಸ್ಯೆ ತಿಳಿಯಲು ಸಹಕಾರಿ
ಮನಪಾವನ್ನು ಜನಸ್ನೇಹಿಯಾಗಿ ಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯನ್ನು ಆರಂಭಿಸುತ್ತೇವೆ. ಇದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಸಹಕಾರಿಯಾಗುತ್ತದೆ.
– ಮಹಮ್ಮದ್ ನಜೀರ್, ಪಾಲಿಕೆ ಆಯುಕ್ತ
– ಮಹಮ್ಮದ್ ನಜೀರ್, ಪಾಲಿಕೆ ಆಯುಕ್ತ
ನವೀನ್ ಭಟ್ ಇಳಂತಿಲ
Advertisement