Advertisement

ಮಂಗಳೂರು ಉತ್ತರ ವಲಯ: ಚಿಣ್ಣರು ಬರುತ್ತಿದ್ದಾರೆ, ಶಾಲೆಗಳು ಸುರಕ್ಷಿತವಾಗಿರಲಿ

03:35 PM May 24, 2024 | Team Udayavani |

ಮಹಾನಗರ: ಬೇಸಗೆ ರಜೆ ಮುಗಿದು ಮತ್ತೆ ಶಾಲೆಯತ್ತ ಮುಖ ಮಾಡಲು ವಿದ್ಯಾರ್ಥಿಗಳು ಸಿದ್ಧರಾಗುತ್ತಿದ್ದಾರೆ. ಹೊಸ ಶೈಕ್ಷಣಿಕ ವರ್ಷ ನವನವೀನ ವಿಚಾರಗಳನ್ನು ಕಲಿಯಲು ಹತ್ತಾರು ಕನಸುಗಳನ್ನು ಹೊತ್ತು ಮತ್ತದೇ ಶಾಲೆಯತ್ತ ಹೆಜ್ಜೆ ಹಾಕಲು ತಯಾರಿಯಲ್ಲಿದ್ದಾರೆ. ಆದರೆ ಅನೇಕ ಸರಕಾರಿ ಶಾಲೆಗಳು ಎದುರಿಸುತ್ತಿರುವ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಅವು ಗಳನ್ನು ನೀಗಿಸುವ ನಿಟ್ಟಿ ನಲ್ಲಿ ಪರಿಪೂರ್ಣ ಕ್ರಮವಾಗಿಲ್ಲ. ಶಿಥಿಲಗೊಂಡ ಕಟ್ಟಡ ದಲ್ಲೇ ವಿದ್ಯಾರ್ಥಿಗಳು ಪಠ್ಯ
ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕಾದ ಅನಿವಾರ್ಯವಿದೆ.

Advertisement

ಮಂಗಳೂರು ಉತ್ತರ ವಲಯದಲ್ಲಿ ಒಟ್ಟು 42 ಶಾಲೆಗಳ ಒಟ್ಟು 162 ಕೊಠಡಿಗಳ ದುರಸ್ತಿಯಾಗಬೇಕಿದ್ದು, ಸುಮಾರು 3.305 ಕೋ. ರೂ.ಗಳ ಅನುದಾನದ ಆವಶ್ಯಕತೆ ಇದೆ. 116 ಕೊಠಡಿಗಳು ಸಣ್ಣ ಪ್ರಮಾಣದ ದುರಸ್ತಿಯ ನಿರೀಕ್ಷೆಯಲ್ಲಿದ್ದರೆ, 46 ಕೊಠಡಿಗಳು ಹೆಚ್ಚಿನ ಪ್ರಮಾಣದ ದುರಸ್ತಿ ಅಗತ್ಯವಿದೆ. 175 ಕೊಠಡಿಗಳು ಸುವ್ಯವಸ್ಥೆಯಲ್ಲಿವೆ. ಈ ಶಾಲೆಗಳಲ್ಲಿ
ಕಳೆದ ಶೈಕ್ಷಣಿಕ ವರ್ಷದಲ್ಲಿ 4,808 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ.

ಚುನಾವಣೆಗಳ ಸಂದರ್ಭ ಕೆಲವೊಂದು ಶಾಲೆಗಳು ದುರಸ್ತಿಯಾಗಿದ್ದು, ನೀರು, ರಸ್ತೆ, ಚರಂಡಿ ಸಮಸ್ಯೆಗಳು ಕೆಲವು ಕಡೆಗಳಲ್ಲಿ
ಪರಿಹಾರವಾಗಿವೆ. ಉಳಿದಂತೆ ಸಮಸ್ಯೆ  ಯಲ್ಲಿರುವ ಕಡೆಗಳಲ್ಲಿ ಈ ವರ್ಷ ಮಕ್ಕಳು ಶಾಲೆಗೆ ಬರುವ ಮುನ್ನ ಅವರಿಗೆ ಸುರಕ್ಷಿತ
ವಾತಾವರಣ ನಿರ್ಮಿಸಬೇಕಾಗಿದೆ.

ನಮ್ಮೂರ ಶಾಲೆಗಳು; ಏನೆಲ್ಲ ಸಮಸ್ಯೆಗಳು?
·24 ಶಾಲೆಗಳ ಮೇಲ್ಛಾವಣಿ ದುರಸ್ತಿ ಅಗತ್ಯ ·ಹಲವು ಕಡೆ ನೆಲ, ಗೋಡೆ, ಕಿಟಕಿ, ಬಾಗಿಲು, ಕಾಂಪೌಂಡ್‌ ರಿಪೇರಿ ಆಗಬೇಕು.
·ಕೆಲವು ಶಾಲಾ ಸುತ್ತಮುತ್ತ ಹೈಟೆನ್ಶನ್‌ ವಯರ್‌ ಹಾದು ಹೋಗಿವೆ. ·ಕೆಲವು ಶಾಲೆಗಳ ಪಕ್ಕದಲ್ಲಿ ಅಪಾಯಕಾರಿ ಮರಗಳಿವೆ.

ಎಲ್ಲೆಲ್ಲಿ ಕೊಠಡಿ ದುರಸ್ತಿ ಆಗಬೇಕು?
ಮೂಡುಬಿದಿರೆಯ ನಡುಗೋಡು ಪ್ರೌಢ ಶಾಲೆ, ಕೆ.ಎಸ್‌. ರಾವ್‌ ನಗರ ಮೂಲ್ಕಿ, ಮಧ್ಯ, ಚಿತ್ರಾಪುರ, ಬೊಕ್ಕಪಟ್ಣ, ಕಾವೂರು ಹಿ.ಪ್ರಾ. ಶಾಲೆ, ಕಾವೂರು ಪಿಯು ಕಾಲೇಜು ಹೈಸ್ಕೂಲ್‌, ಕಾಟಿಪಳ್ಳ 7, ಚೇಳಾರು, ತೋ ಕೂರು ಹಿಂದುಸ್ತಾನಿ,ಕಾಟಿಪಳ್ಳ 3, ಕೆಮ್ರಾಲತ್ತೂರು, ಮೂಲ್ಕಿ, ಬಲ್ಮಠ, ಹಳೆಯಂಗಡಿ, ಪರಪಾದೆ, ನಡುಗೋಡು ಹಿ.ಪ್ರಾ. ಶಾಲೆ, ಕೊಯಿಕುಡೆ, ಬೆಂಗ್ರೆ ಕಸಬ ಪ್ರೌಢಶಾಲೆ, ಕಾಟಿಪಳ್ಳ 5, ಬಡಗ ಎಕ್ಕಾರು, ಕೆರೆಕಾಡು, ಸದಾಶಿವ ನಗರ, ಕಂಡತ್‌ಪಳ್ಳಿ (ಉರ್ದು), ಬೊಕ್ಕಪಟ್ಣ 6, ಕುದ್ರೋಳಿ
(ಉರ್ದು), ಕಾನಕಟ್ಲ, ಕಾಟಿಪಳ್ಳ 5 ಪ್ರೌಢ ಶಾಲೆ, ಬೆಂಗ್ರೆ ಕಸಬ ಹಿ.ಪ್ರಾ. ಶಾಲೆ, ಕರಂಬಾರ್‌, ಬಡಗ ಎಕ್ಕೂರು ಹಿ.ಪ್ರಾ.
ಶಾಲೆ, ಕಾಟಿಪಳ್ಳ 6, ಕೆಂಜಾರು, ಕುತ್ತೆತ್ತೂರು, ಜೋಕಟ್ಟೆ, ಬಂದರು (ಉರ್ದು), ಮಣ್ಣಗುಡ್ಡೆ, ಕವತಾರ್‌, ಕುಳಾಯಿ ಫಿಶರೀಸ್‌,
ಹೊಸಬೆಟ್ಟು, ಸ್ಯಾಂಡ್ಸ್‌ ಪಿಟ್‌ ಬೆಂಗ್ರೆ, ಮೂಲ್ಕಿ ಹಿ.ಪ್ರಾ. ಶಾಲೆ, ಸುರತ್ಕಲ್‌ ಹಿ.ಪ್ರಾ. ಶಾಲೆ.

Advertisement

8 ಶಾಲೆಗಳ ಸಮೀಪದಲ್ಲಿವೆ ಅಪಾಯಕಾರಿ ಮರಗಳು

ಕರಂಬಾರು, ಕಾವೂರು, ಬೊಕ್ಕಪಟ್ಣ 3, ಕುಳಾಯಿ ಫಿಶರೀಸ್‌, ಅತಿಕಾರಿಬೆಟ್ಟು, ಕಿಲ್ಪಾಡಿ ಜನರಲ್‌, ಪಿಯು ಕಾಲೇಜು ಕಾವೂರು, ಪಿಯು ಕಾಲೇಜು ಬೊಕ್ಕಪಟ್ಣ.

ಶಾಲೆಗಳ ಆವರಣದಲ್ಲಿ ವಯರ್‌ಗಳ ಹೈಟೆನ್ಶನ್‌

ಬಲ್ಮಠ ಟಿಟಿಐ, ಕುಳಾಯಿ ಫಿಶರೀಸ್‌, ತಣ್ಣೀರುಬಾವಿ, ಕಿಲ್ಪಾಡಿ ಜನರಲ್‌, ಕೊಕುಡೆ, ಕಾನಕಟ್ಲ, ಕೃಷ್ಣಾಪುರ ಮುಂಚೂರು ಹಾಗೂ ಮುಲ್ಲಕಾಡು ಶಾಲಾ ವಠಾರದಲ್ಲಿ ಹೈಟೆನ್ಶನ್‌ ಟವರ್‌ ಹಾದುಹೋಗಿದೆ.

*ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next