Advertisement

ಮಂಗಳೂರು ಉತ್ತರ; ಆರ್ಥಿಕ ಹೆಬ್ಟಾಗಿಲಿನಲ್ಲಿ ಕಾತರ!

09:55 AM Apr 05, 2019 | keerthan |

ಮಂಗಳೂರು: ವಿವಿಧ ಕೈಗಾರಿಕಾ ಕ್ಷೇತ್ರಗಳ ಮೂಲಕ ಕರ್ನಾಟಕ ಕರಾವಳಿಯ “ಪ್ರಗತಿಯ ಹೆಬ್ಟಾಗಿಲು’ ಎಂಬ ಖ್ಯಾತಿಯ ಕ್ಷೇತ್ರವೇ “ಮಂಗಳೂರು ನಗರ ಉತ್ತರ’. ವಿಧಾನಸಭೆ ಹಾಗೂ ಲೋಕಸಭೆಗೆ ನಡೆದ ಚುನಾವಣೆಗಳಲ್ಲಿ ಮತದಾರ ಎರಡೂ ಪಕ್ಷದ ಪರವಾಗಿ ಒಲವು ವ್ಯಕ್ತಪಡಿಸಿ ವಿಭಿನ್ನ ಫಲಿತಾಂಶ ಕಂಡಿರುವ ಕ್ಷೇತ್ರ.

Advertisement

2008ರವರೆಗೆ “ಸುರತ್ಕಲ್‌’ ಕ್ಷೇತ್ರವಾಗಿಯೇ ಈ ವಿಧಾನಸಭೆ ಗುರುತಿಸಿ ಕೊಂಡಿತ್ತು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆ ನಡೆದಾಗ “ಮಂಗಳೂರು ನಗರ ಉತ್ತರ’ ಎಂದು ಮರುನಾಮಕರಣಗೊಂಡಿತು. ಮರುನಾಮಕರಣದ ಬಳಿಕ ಇಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣ ಜೆ. ಪಾಲೆಮಾರ್‌ (2008), ಕಾಂಗ್ರೆಸ್‌ನ ಮೊದಿನ್‌ ಬಾವಾ (2013), ಬಿಜೆಪಿಯ ಡಾ| ಭರತ್‌ ಶೆಟ್ಟಿ (2018) ಜಯ ಗಳಿಸಿದ್ದಾರೆ.


2008ರ ವಿ.ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಲಿದ ಮಂಗಳೂರು ಉತ್ತರ, 2009ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಮುನ್ನಡೆ ಒದಗಿಸಿತ್ತು. ಆದರೆ 2013ರಲ್ಲಿ ಈ ಟ್ರೆಂಡ್‌ ಬದಲಾಗಿ ಉತ್ತರವು ಕಾಂಗ್ರೆಸ್‌ ಪಾಲಾಯಿತು. ಆದರೆ 2018ರಲ್ಲಿ ನಡೆದ ವಿ.ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅದೃಷ್ಟ ಒಲಿದುಬಂತು.

2004ರಲ್ಲಿ ಶಾಸಕರಾಗಿದ್ದ ಪಾಲೆಮಾರ್‌ 2008ರಲ್ಲಿ ಕಾಂಗ್ರೆಸ್‌ನ ಬಾವಾ ಅವರ ವಿರುದ್ದ 14,426 ಮತಗಳ ಅಂತರದಿಂದ ಮರು ಆಯ್ಕೆಯಾಗಿದ್ದರು. ಆದರೆ 2013ರಲ್ಲಿ ಪಾಲೆಮಾರ್‌ ಅವರು ಮೊದಿನ್‌ ಬಾವಾ ಎದುರು ಪರಾಭವ ಅನುಭವಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ನಳಿನ್‌ ಕುಮಾರ್‌ ಕಟೀಲು ಈ ಕ್ಷೇತ್ರದಲ್ಲಿ ಭಾರೀ ಮತ ಪಡೆದಿದ್ದರು. ಇದು 2018ರ ವಿ.ಸಭಾ ಚುನಾವಣೆಯಲ್ಲಿಯೂ ಪ್ರತಿಧ್ವನಿಸಿತ್ತು. ಬಿಜೆಪಿಯ ಡಾ| ಭರತ್‌ ಶೆಟ್ಟಿ 26,643 ಮತ‌ ಅಂತರದಿಂದ ಜಯ ಗಳಿಸಿದ್ದರು.

ಇಬ್ಬರಿಗೆ ರಾಜ್ಯ ಸಚಿವ ಸ್ಥಾನ!
ಈ ಕ್ಷೇತ್ರವನ್ನು ಸತತ 2 ಬಾರಿ ಪ್ರತಿನಿಧಿಸಿದ್ದು ಕಾಂಗ್ರೆಸ್‌ನ ಬಿ. ಸುಬ್ಬಯ್ಯ ಶೆಟ್ಟಿ, ವಿಜಯ ಕುಮಾರ್‌ ಶೆಟ್ಟಿ ಹಾಗೂ ಬಿಜೆಪಿಯ ಕೃಷ್ಣ ಜೆ. ಪಾಲೆಮಾರ್‌ ಮಾತ್ರ. 2004 ಹಾಗೂ 2008ರಲ್ಲಿ ಬಿಜೆಪಿಯ ಕೃಷ್ಣ ಜೆ. ಪಾಲೆಮಾರ್‌ ಜಯ ದಾಖಲಿಸಿ ಪರಿಸರ ಜೀವಿಶಾಸ್ತ್ರ ಸಚಿವರಾಗಿದ್ದರು. ಇದೇ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿ. ಸುಬ್ಬಯ್ಯ ಶೆಟ್ಟಿ ದೇವರಾಜ ಅರಸು ನೇತೃತ್ವದ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು.

Advertisement

ಒಂದೆಡೆ ಮೋದಿ ಸೂತ್ರ; ಇನ್ನೊಂದೆಡೆ ಯುವ ಹವಾ!
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವು ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಳವಾಗಿ ಗುರುತಿಸಿಕೊಂಡಿದೆ. ದೇಶವ್ಯಾಪಿ ಇರುವ ಮೋದಿ ಸೂತ್ರದಡಿ ಬಿಜೆಪಿ ಮತಯಾಚನೆಯಲ್ಲಿ ನಿರತವಾಗಿದೆ. ಹಾಲಿ ಸಂಸದ ನಳಿನ್‌ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕೈಗೊಂಡ ಯೋಜನೆ ಕುರಿತಂತೆ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದರೆ, ಕಾಂಗ್ರೆಸ್‌ ಈ ಬಾರಿ ಯುವ ಅಭ್ಯರ್ಥಿ ಮಿಥುನ್‌ ರೈ ಹವಾದಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next