Advertisement
ಮೈಸೂರು ಮಾರ್ಗವಾಗಿ ಮಂಗಳೂರು- ಬೆಂಗಳೂರು ನಡುವೆ (ನಂ. 16585/ 16586) ರೈಲು ಪ್ರಸ್ತುತ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತಿದೆ.
Related Articles
Advertisement
ಇದನ್ನೂ ಓದಿ:ಗುಜರಾತ್‌ನ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಆಪ್ ಆಹ್ವಾನ
ಪ್ಲಾಟ್‌ಫಾರಂ ಹೊಂದಿಸುವ ಸಾಧ್ಯತೆದಿನಂಪ್ರತಿ ಮೈಸೂರು ಮೂಲಕ ರೈಲು ಸಂಚಾರಕ್ಕೆ ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ಫಾರಂನ ಕೊರತೆಯನ್ನು ಅಡ್ಡಿಯಾಗಿ ತೋರಿಸುವ ಸಾಧ್ಯತೆಗಳಿವೆ. ಇದನ್ನು ನಿವಾರಿಸಲು ಪರ್ಯಾಯ ಸಾಧ್ಯತೆಗಳನ್ನು ರೈಲ್ವೇ ಬಳಕೆದಾರರ ಸಂಘಟನೆಗಳ ಪ್ರತಿನಿಧಿಗಳು ಸಲಹೆ ಮಾಡಿದ್ದಾರೆ. ಪ್ರಸ್ತುತ ಚೆರ್ವತ್ತೂರು ಎಕ್ಸ್ ಪ್ರಸ್ ರೈಲು ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬಂದು ಮರುದಿನ ಬೆಳಗ್ಗೆ 5ಕ್ಕೆ ನಿರ್ಗಮಿಸುತ್ತದೆ. ಈ ರೈಲನ್ನು ಬೆಳಗ್ಗೆ ಮಡಗಾಂವ್‌ಗೆ ಓಡಿಸಿ ಮರಳಿ ರಾತ್ರಿ 10ಕ್ಕೆ ಬರುವಂತೆ ಮಾಡಬಹುದಾಗಿದೆ. ರಾತ್ರಿ ಪಿಟ್‌ಲೆçನ್‌ನಲ್ಲಿ ಇದರ ನಿರ್ವಹಣ ಕೆಲಸಗಳನ್ನು ಮಾಡಿ ಮರುದಿನ ಬೆಳಗ್ಗೆ ಎಂದಿನಂತೆ ಚೆರ್ವತ್ತೂರಿಗೆ ಓಡಿಸಬಹುದು. ಇದರಿಂದ ಒಂದು ಪ್ಲಾಟ್‌ಫಾರಂ ಖಾಲಿಯಾಗುತ್ತದೆ ಮತ್ತು ಇದನ್ನು ಮೈಸೂರು ಗಾಡಿಗೆ ಹೊಂದಿಸಬಹುದಾಗಿದೆ. ಪ್ರಸ್ತುತ ಮಡಗಾಂವ್‌ಗೆ ಸಂಚರಿಸುತ್ತಿರುವ ಇಂಟರ್‌ಸಿಟಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಅದನ್ನು ಮಡಗಾಂವ್‌ಗೆ ಸಂಚರಿಸುವಂತೆ ಮಾಡಿದರೆ ಅಲ್ಲಿಗೂ ಒಂದು ರೈಲು ಸಿಕ್ಕಿದಂತಾಗುತ್ತದೆ. ಪ್ರಸ್ತುತ ವಾರದಲ್ಲಿ 3 ದಿನ ಮೈಸೂರು ಮಾರ್ಗವಾಗಿ ಸಂಚರಿಸುವ ಮಂಗಳೂರು-ಬೆಂಗಳೂರು ರೈಲನ್ನು ದಿನಂಪ್ರತಿ ಓಡಿಸಬೇಕು ಎಂಬ ಬೇಡಿಕೆ ಬಗ್ಗೆ ನೈಋತ್ವ ರೈಲ್ವೇಯಿಂದ ಪೂರಕ ಪ್ರಕ್ರಿಯೆಗಳು ನಡೆದಿವೆ. ಈ ಬಗ್ಗೆ ದಕ್ಷಿಣ ರೈಲ್ವೇಯ ಗಮನ ಸೆಳೆಯಲಾಗಿದೆ. ಅವರು ಸಮ್ಮತಿಸಿದರೆ ಪ್ರಸ್ತಾವನೆ ಅಲ್ಲಿಂದ ರೈಲ್ವೇ ಮಂಡಳಿಗೆ ಹೋಗಿ ನಿರ್ಧಾರವಾಗಲಿದೆ.
– ಅನೀಸ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೇ -ಕೇಶವ ಕುಂದರ್