Advertisement
ವಾರ್ಡ್ ವ್ಯಾಪ್ತಿ ವಿಸ್ತರಣೆ ಅಥವಾ ಕಡಿತ ಆಗಿರುವುದರಿಂದ ಭೌಗೋಳಿಕವಾಗಿ ವಾರ್ಡ್‌ಗಳ ವಿಸ್ತೀರ್ಣದಲ್ಲಿ ಬದಲಾವಣೆ ಕಂಡು ಬಂದಿದೆ. ಕೆಲವು ಕಡೆ ಅಲ್ಪ ಸ್ವಲ್ಪ ವ್ಯತ್ಯಾಸ ಆಗಿದ್ದರೆ ಇನ್ನೂ ಕೆಲವು ಕಡೆ ದೊಡ್ಡ ಮಟ್ಟದ ಬದಲಾವಣೆ ಆಗಿರುವುದು ವಾರ್ಡ್ ವ್ಯಾಪ್ತಿ ಪರಿಷ್ಕರಣೆಯ ವಿಶಿಷ್ಟತೆ.
ವಾರ್ಡ್- 2 (ಸುರತ್ಕಲ್ ಪೂರ್ವ)ಕ್ಕೆ ಪಕ್ಕದ ವಾರ್ಡ್‌ನ ಒಂದು ಬೂತ್ ಸೇರ್ಪಡೆಗೊಂಡಿದೆ. ಈ ಬೂತ್‌ನಲ್ಲಿ ಸುಮಾರು 1300 ಮತದಾರರಿದ್ದಾರೆ. ವಾರ್ಡ್- 5 (ಕಾಟಿಪಳ್ಳ ಉತ್ತರ)ಕ್ಕೆ 20 ಮನೆಗಳು ಸೇರ್ಪಡೆಯಾಗಿದ್ದರೆ ಇನ್ನೊಂದು ಕಡೆ ಕೆಲವು ಮನೆಗಳು ಈ ವಾರ್ಡ್‌ನಿಂದ 6ನೇ ವಾರ್ಡ್(ಇಡ್ಯಾ ಪೂರ್ವ)ಗೆ ಸೇರ್ಪಡೆಯಾಗಿವೆ. ವಾರ್ಡ್- 8 (ಹೊಸಬೆಟ್ಟು)ಕ್ಕೆ ಪಕ್ಕದ ವಾರ್ಡ್‌ಸುಮಾರು 400 ಮತದಾರರು ಸೇರ್ಪಡೆ ಗೊಂಡಿದ್ದಾರೆ. ವಾರ್ಡ್ – 9 (ಕುಳಾಯಿ)ರಲ್ಲಿ 1200 ಮತದಾರರು ಕಡಿಮೆಯಾಗಿದ್ದಾರೆ. ವಾರ್ಡ್- 10 (ಬೈಕಂಪಾಡಿ)ಕ್ಕೆ ಕುಳಾಯಿ ವಾರ್ಡ್‌ನಿಂದ 1311 ಮತದಾರರು ಸೇರ್ಪಡೆಯಾಗಿದ್ದಾರೆ. ವಾರ್ಡ್-40 (ಕೋರ್ಟ್) ರಿಂದ ಕೆಲವು ಭಾಗಗಳು ಪಕ್ಕದ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಗೆ ಸೇರ್ಪಡೆಯಾಗಿವೆ. ವಾರ್ಡ್ ವ್ಯಾಪ್ತಿ ಬದಲಾಗಿರುವ ಬಗ್ಗೆ ಹೆಚ್ಚಿನ ವಾರ್ಡ್‌ಗಳಲ್ಲಿ ಮತದಾರರಿಗೆ ಮಾಹಿತಿ ಇಲ್ಲ. ಈಗ ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳು ಮತ ಯಾಚನೆಗೆ ತೆರಳುವ ಸಂದರ್ಭದಲ್ಲಿ ಮಾಹಿತಿ ನೀಡುತ್ತಿದ್ದಾರೆ. ಆದರೆ ಚುನಾವಣ ಕಣದಲ್ಲಿರುವ ಹೊಸ ಅಭ್ಯರ್ಥಿಗಳಿಗೆ ತಮ್ಮ ವಾರ್ಡ್‌ಗಳಲ್ಲಿ ಆಗಿರುವ ಬದಲಾವಣೆಗೆ ಸಂಬಂಧಿಸಿ ಮಾಹಿತಿ ಕಡಿಮೆ. ವಾರ್ಡ್ ವ್ಯಾಪ್ತಿ ಮರು ವಿಂಗಡಣೆ ಪರಿಣಾಮವಾಗಿ ಮಹಿಳಾ ಮತದಾರರು ಅಧಿಕ ಇರುವ ವಾರ್ಡ್‌ಗಳನ್ನು ಮಹಿಳಾ ಮೀಸಲು ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ.
Related Articles
ವಾರ್ಡ್‌ಗಳ ಮರು ವಿಂಗಡನೆಯ ಪರಿಣಾಮವಾಗಿ ವಾರ್ಡ್ ಗಳ ಮತದಾರರಿಗೆ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮತದಾರರು ಈ ವಾರ್ಡ್ ಮೊದಲು ತಮ್ಮ ವಾರ್ಡ್ ವ್ಯಾಪ್ತಿ ಯಾವುದು, ಅಭ್ಯರ್ಥಿಗಳು ಯಾರು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಇಲ್ಲದೆ ಹೋದರೆ, ಮತದಾರರು ಅಂತಿಮ ಕ್ಷಣದಲ್ಲಿ ಗೊಂದಲಕ್ಕೆ ಒಳಗಾಗುವ ಸಾಧ್ಯತೆಯೂ ಎದುರಾಗಬಹುದು. ಇನ್ನೊಂದೆಡೆ, ಎಲ್ಲೆಲ್ಲಿ ವಾರ್ಡ್‌ಗಳ ಮರು ವಿಂಗಡಣೆ ಆಗಿದೆಯೋ ಅಂಥ ಕಡೆಗಳಲ್ಲಿ ಅದು ಈ ಬಾರಿಯ ಪಾಲಿಕೆ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು. ಏಕೆಂದರೆ, ಈ ವಾರ್ಡ್ ಮರು ವಿಂಗಡಣೆಯಿಂದ ಅಂಥ ವಾರ್ಡ್‌ಗಳ ರಾಜಕೀಯ ಚಿತ್ರಣ ಬದಲಾದರೂ ಅಚ್ಚರಿಪಡಬೇಕಿಲ್ಲ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತದೆ.
Advertisement
– ಹಿಲರಿ ಕ್ರಾಸ್ತಾ