Advertisement
ಈ ಬಾರಿಯ ಪಾಲಿಕೆ ಚುನಾವಣೆಗೆ ಒಟ್ಟು 448 ಮತಗಟ್ಟೆಗಳಿದ್ದು, ಈ ಎಲ್ಲ ಮತಗಟ್ಟೆಗಳಲ್ಲೂ ವ್ಯವಸ್ಥಿತವಾಗಿ ಮತದಾನ ನಡೆಸಲು ಚುನಾವಣ ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ 2,500 ಮತಗಟ್ಟೆ ಅಧಿಕಾರಿಗಳು, 12 ಚುನಾವಣಾಧಿಕಾರಿ, 12 ಸಹಾಯಕ ಚುನಾವಣಾಧಿಕಾರಿ, 24 ಸೆಕ್ಟರ್ ಆಫೀಸರ್, 15 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ಚುನಾವಣೆ ನಡೆಯುವ ದಿನ, ಅದಕ್ಕೂ ಮುನ್ನ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆದು ಸೂಕ್ತ ಮಾಹಿತಿ ನೀಡಲಾಗುತ್ತಿದೆ. ಇನ್ನೂ ಚುನಾವಣೆ ಕಾರ್ಯ ನಿಮಿತ್ತ 89 ರೂಟ್‌ಗಳಿಗೆ ಬಸ್, ವ್ಯಾನ್‌ಗಳನ್ನು ಹಾಕಲು ನಿರ್ಧರಿಸಲಾಗಿದೆ. ಈ ಕುರಿತಂತೆ ಅಂತಿಮ ಚಿತ್ರಣ ಇನ್ನಷ್ಟೇ ಲಭಿಸಬೇಕಾಗಿದೆ.
ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 448 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಒಟ್ಟು 448 ಇವಿಎಂ ಮಿಷನ್ ಹಾಗೂ ಹೆಚ್ಚುವರಿಯಾಗಿ 150 ಇವಿಎಂ ಮಿಷನ್‌ಗಳ ಕಾರ್ಯ ನಿರ್ವಹಣೆಯನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಗುರುವಾರದಿಂದ ಈ ಇವಿಎಂ ಮಿಷನ್‌ಗಳನ್ನು ಸಜ್ಜುಗೊಳಿಸುವ ಕೆಲಸ ನಡೆಯಲಿದೆ ಎಂದು ಪಾಲಿಕೆ ಚುನಾವಣಾಧಿಕಾರಿ “ಸುದಿನ’ಕ್ಕೆ ತಿಳಿಸಿದ್ದಾರೆ. ಭಾವಚಿತ್ರ ಇರುವ ಮತಪತ್ರ
ಈ ಹಿಂದಿನ ಚುನಾವಣೆಯಲ್ಲಿ ಒಂದು ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆಗಳನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ತೋರಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ವೃತ್ತಿ ಅಥವಾ ವಿಳಾಸ ಮುಂತಾದುವುಗಳನ್ನು ತೋರಿಸಲಾಗುತ್ತಿತ್ತು. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಪ್ರಥಮವಾಗಿ ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ಮುದ್ರಿಸಲಾಗುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣೆ ವೆಚ್ಚದ ಗರಿಷ್ಠ ಮಿತಿಯನ್ನು 3 ಲಕ್ಷ ರೂ. ಗೆ ನಿಗದಿಪಡಿಸಲಾಗಿದೆ.
Related Articles
ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕುವಂತೆ ರಾಜ್ಯ ಚುನಾವಣ ಆಯೋಗ ನಿರ್ದೇಶನ ನೀಡಿದೆ. ಈ ಸಂಬಂಧ ಚುನಾವಣಾಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ಸೂಚನೆಯನ್ನು ಈಗಾಗಲೇ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
Advertisement
ನ.12: ಶಾಲಾ ಕಾಲೇಜುಗಳಿಗೆ ರಜೆಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹಲವು ಶಾಲೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಿರುವ ಹಿನ್ನೆಲೆಯಲ್ಲಿ ನ. 12ರಂದು ಶಾಲಾ ಕಾಲೇಜುಗಳು(ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸಾರ್ವತ್ರಿಕ ರಜೆಯನ್ನು ಸರಕಾರ ಘೋಷಿಸಿದೆ. ಜತೆಗೆ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಸಾರ್ವಜನಿಕ ಉದ್ದಿಮೆಗಳು, ವ್ಯವಹಾರಿಕ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಚುನಾವಣೆಗೆ ಸಕಲ ಸಿದ್ಧತೆ
ಚುನಾವಣೆಯನ್ನು ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಸಲು ಸಕಲ ರೀತಿಯಲ್ಲೂ ಸಿದ್ಧತೆ ನಡೆಸಲಾಗುತ್ತಿದೆ. ಅಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ನೀಡುವ ಕೆಲಸ, ಇವಿಎಂ ಮೆಷಿನ್‌ಗಳ ಪರಿಶೀಲನೆ ಸೇರಿದಂತೆ ಇತರ ಚುನಾವಣೆ ಸಂಬಂಧಿತ ಕೆಲಸಗಳು ವೇಗ ಪಡೆದುಕೊಳ್ಳಲಿವೆ.
- ಗಾಯತ್ರಿ ನಾಯಕ್, ವಿಶೇಷ ಚುನಾವಣಾಧಿಕಾರಿ - ಪ್ರಜ್ಞಾ ಶೆಟ್ಟಿ