Advertisement

ಜನವರಿಯಲ್ಲಿ ಮಂಗಳೂರು ಪಾಲಿಕೆ ಬಜೆಟ್‌

10:18 PM Dec 21, 2020 | mahesh |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ 2021-22ನೇ ಸಾಲಿನ ಬಜೆಟ್‌ ಮುಂದಿನ ವರ್ಷ ಜನವರಿ ಅಂತ್ಯದ ವೇಳೆಗೆ ಪ್ರಕಟವಾಗುವ ನಿರೀಕ್ಷೆಯಿದೆ.

Advertisement

ಮನಪಾ ಮೇಯರ್‌ ದಿವಾಕರ್‌ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ, ಮನಪಾ ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್‌ ಕುಮಾರ್‌ ಅವರು ಬಜೆಟ್‌ ಮಂಡಿಸಲಿದ್ದಾರೆ. ಬಜೆಟ್‌ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಸುತ್ತಿನ ಸಾರ್ವಜನಿಕ ಸಮಾಲೋಚನ ಸಭೆ ಆಯೋಜಿಸಲಾಗಿದೆ. ಅದರಂತೆ ಡಿ. 23ರಂದು ಮೊದಲ ಸುತ್ತಿನ ಸಭೆ ಸುರತ್ಕಲ್‌ನಲ್ಲಿ ನಡೆಯಲಿದೆ. ಎರಡನೇ ಹಂತದ ಸಭೆ ಮಂಗಳೂರು ಪಾಲಿಕೆಯಲ್ಲಿ ಶೀಘ್ರ ನಡೆಯಲಿದೆ. ಈ ವರ್ಷದ ಬಜೆಟ್‌ ಹೇಗಿರಬೇಕು? ಹಾಗೂ ಬಜೆಟ್‌ನಲ್ಲಿ ಯಾವೆಲ್ಲ ಅಂಶಗಳಿಗೆ ಆದ್ಯತೆ ನೀಡ ಬೇಕು? ಸಾರ್ವಜನಿಕರ ಬೇಡಿಕೆ ಏನು? ಎಂಬು ದನ್ನು ವಿಮರ್ಶಿಸುವ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿದೆ.

ಫೆಬ್ರವರಿಯಲ್ಲಿ ಮೇಯರ್‌ ಚುನಾವಣೆ?
ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಎರಡನೇ ಅವಧಿಯ ಮೇಯರ್‌, ಉಪಮೇಯರ್‌ ಆಯ್ಕೆ 2021ರ ಫೆಬ್ರವರಿ 28ರ ಒಳಗೆ ನಡೆಯಲಿದೆ. ಮುಂದಿನ ಮೇಯರ್‌ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯಿದ್ದು, ಬಿಜೆಪಿಯಿಂದ ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು ಸಹಿತ ಹಲವರ ಹೆಸರು ಸದ್ಯ ಕೇಳಿಬರುತ್ತಿದೆ.

ಡಿ. 23: ಸಾರ್ವಜನಿಕ ಸಮಾಲೋಚನೆ ಸಭೆ
ಮಹಾನಗರ ಪಾಲಿಕೆ ಆಯವ್ಯಯ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆ ಡಿ. 23ರಂದು ಬೆಳಗ್ಗೆ 11ಕ್ಕೆ ಸುರತ್ಕಲ್‌ ವಲಯ ದಲ್ಲಿ ಆಯೋಜಿಸಲಾಗಿದೆ. ಈ ಸಭೆ ಯಲ್ಲಿ ಆಯವ್ಯಯ ತಯಾರಿಕೆಗೆ ಸಾರ್ವ ಜನಿಕರ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿ ಸಲಾಗು ವುದು. ನೋಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೋಂದಾಯಿತ ಸರಕಾರೇತರ ಸಂಘ – ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕ ಸಂಘ -ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವ ಜನಿಕರು ಭಾಗವಹಿಸಬಹುದು ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪೂರ್ವಸಿದ್ಧತ ಸಭೆ ನಿಗದಿ
ಮುಂದಿನ ವರ್ಷದ ಪಾಲಿಕೆ ಬಜೆಟ್‌ ಜನವರಿ ಕೊನೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಈಗಾಗಲೇ ಸಾರ್ವಜನಿಕರ ಜತೆಗೆ ಎರಡು ಸುತ್ತಿನ ಪೂರ್ವಸಿದ್ಧತ ಸಭೆ ನಡೆಸಲು ನಿರ್ಧರಿಸಲಾಗಿದೆ. ಬಳಿಕ ಸ್ಥಾಯೀ ಸಮಿತಿಯಲ್ಲಿ ಇದರ ಮಂಡನೆ ಆಗಿ, ಪಾಲಿಕೆ ಪರಿಷತ್‌ನಲ್ಲಿ ಬಜೆಟ್‌ ಮಂಡಿಸಲಾಗುವುದು.
-ಪ್ರೇಮಾನಂದ ಶೆಟ್ಟಿ, ಮುಖ್ಯಸಚೇತಕರು, ಮನಪಾ

Advertisement
Advertisement

Udayavani is now on Telegram. Click here to join our channel and stay updated with the latest news.

Next