Advertisement
ಕಳೆದ ವರ್ಷ ಮಂಗಳೂರು -ಮುಂಬಯಿ ನಡುವೆ ಏರ್ ಇಂಡಿಯಾ ಸಂಸ್ಥೆಯ ಒಂದು, ಜೆಟ್ ಏರ್‌ವೆàಸ್‌ನ ಮೂರು, ಇಂಡಿಗೊ ಸಂಸ್ಥೆಯ ಎರಡು ಹಾಗೂ ಸ್ಪೈಸ್ ಜೆಟ್‌ನ ಒಂದು ಸಹಿತ ಒಟ್ಟು ಏಳು ಯಾನ ದಿನಂಪ್ರತಿ ಕೈಗೊಳ್ಳುತ್ತಿತ್ತು. ಆಗ 5ರಿಂದ 6 ಸಾವಿರ ರೂ. ದರ ವಿಧಿಸಲಾಗುತ್ತಿತ್ತು.
ಈಗ ಏರ್ ಇಂಡಿಯಾ ಸಂಸ್ಥೆಯು ಮುಂಬಯಿಗೆ ನೇರ ಯಾನವನ್ನು ಕೈಬಿಟ್ಟಿದೆ. ಬದಲಾಗಿ ವಯಾ ಕೊಯಮುತ್ತೂರು ಆಗಿ ಮುಂಬಯಿಗೆ ಯಾನ ಕೈಗೊಳ್ಳುತ್ತಿದೆ. ಇಂಡಿಗೊ ಸಂಸ್ಥೆಯ ಎರಡು ಮತ್ತು ಸ್ಪೈಸ್ ಜೆಟ್‌ನ ಒಂದು ವಿಮಾನ ಮುಂಬಯಿಗೆ ನೇರ ಯಾನ ಕೈಗೊಳ್ಳುತ್ತಿದೆ. ಇದರ ಜತೆ ದರದಲ್ಲಿ ಏರಿಕೆ ಮಾಡಿರುವುದು ಪ್ರಯಾಣಿಕರಿಗೆ ಆಘಾತವಾಗಿದೆ. ಸದ್ಯ 15 ಸಾವಿರದಿಂದ 16 ಸಾವಿರ ರೂ. ದರ ತಲುಪಿದೆ. ದುಪ್ಪಟ್ಟು ದರ ನೀಡಿದರೂ ಅಗತ್ಯವಿದ್ದ ಸಮಯದಲ್ಲಿ ಮುಂಬಯಿಗೆ ಪ್ರಯಾಣಿಸಲು ಸಾಕಷ್ಟು ವಿಮಾನಯಾನ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆಯಿದೆ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಏರ್ ಇಂಡಿಯಾ ಸಂಸ್ಥೆ ಗಮನಿಸಲಿ
ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯು ಮುಂಬಯಿಗೆ ನೇರ ಯಾನ ಕೈಗೊಳ್ಳುವ ಬದಲು ವಯಾ ಕೊಯಮುತ್ತೂರು ಆಗಿ ಯಾನ ಮಾಡುತ್ತಿದೆ. ಇದರಿಂದ ಸಮಯವೂ ವ್ಯರ್ಥ ಮತ್ತು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ನೇರ ಯಾನದ ವೇಳೆ ಭರ್ತಿಯಾಗುತ್ತಿದ್ದ ವಿಮಾನದಲ್ಲಿ ಈಗ ಅರ್ಧದಷ್ಟೂ ಜನ ಇರುವುದಿಲ್ಲ.
Related Articles
Advertisement