Advertisement

ಮಂಗಳಾದೇವಿ ದೇವಸ್ಥಾನ: ಶರನ್ನವರಾತ್ರಿ ಮಹೋತ್ಸವ ಆರಂಭ

03:28 PM Sep 29, 2019 | Naveen |

ಮಂಗಳೂರು: ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಭಾನುವಾರದಂದು ಶ್ರೀ ಮಹಾಗಣಪತಿ ದೇವರ ಸಾನಿಧ್ಯ, ಮಹಾತಾಯಿಯ ಸನ್ನಿಧಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

Advertisement

ಅ.9 ರವರೆಗೆ ಕ್ಷೇತ್ರದಲ್ಲಿ ನವರಾತ್ರಿಯ ಉತ್ಸವಗಳು ನಡೆಯಲ್ಲಿದ್ದು, ಅ.2ರಂದು ಶ್ರೀ ಲಲಿತಾ ಪಂಚಮಿ, ಅ.4ರಂದು ಮೂಲ ನಕ್ಷತ್ರ, ರಾತ್ರಿ ಉತ್ಸವಾರಂಭ, ಅ.7ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿ ದೊಡ್ಡ ರಂಗಪೂಜೆ, ಸಣ್ಣ ರಥೋತ್ಸವ, ಅ.8ರಂದು ವಿಜಯ ದಶಮಿ (ವಿದ್ಯಾರಂಭ, ತುಲಾಭಾರ), ಮಧ್ಯಾಹ್ನ ರಥಾರೋಹಣ, ರಾತ್ರಿ 7.30ಕ್ಕೆ ರಥೋತ್ಸವ, ಅ.9ರಂದು ಅವಭೃತ ಮಂಗಳ ಸ್ನಾನ, ಅ.10ರಂದು ಸಂಪ್ರೋಕ್ಷಣೆ, ಸಂಜೆ 6.30ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿದೆ.

ಪ್ರತಿ ದಿನ ಸಂಜೆ ಭಜನೆ, ನೃತ್ಯ ವೈಭವ, ಯಕ್ಷಗಾನ ಬಯಲಾಟ, ಭರತನಾಟ್ಯ ಕಾರ್ಯಕ್ರಮ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next